Advertisement

ಹಣಕ್ಕೋಸ್ಕರ ಹತ್ಯೆ ಅನುಮಾನ, ಅರ್ಚಕರ ಹತ್ಯೆ ಹಿಂದೆ ಇಸ್ಲಾಮಿಕ್ ಜಿಹಾದ್: ಮುತಾಲಿಕ್

01:42 PM Sep 12, 2020 | keerthan |

ಮಂಡ್ಯ: ನಗರದ ಗುತ್ತಲಿನ ಅರ್ಕೇಶ್ವರ ದೇವಾಲಯದ ಮೂವರ ಅರ್ಚಕರ ಕೊಲೆಯ ಹಿಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು

Advertisement

ದೇವಸ್ಥಾನದ ಅರ್ಚಕರ ಹತ್ಯೆ ಖಂಡನೀಯ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಇವೆ. ಆದರೆ ಅವು ಕೆಟ್ಟು ಹೋಗಿದ್ದು, ದುರಸ್ತಿ ಮಾಡಬೇಕು ಎಂಬ ಪರಿಜ್ಞಾನ ಅಧಿಕಾರಿಗಳಿಗಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ರಾಜ್ಯದ 32 ರಾಜಕಾರಣಿಗಳು ಶಾಮೀಲು: ಪ್ರಮೋದ್ ಮುತಾಲಿಕ್ ಸ್ಪೋಟಕ ಮಾಹಿತಿ

ಹುಂಡಿಯ ಹಣಕ್ಕೋಸ್ಕರ ಹತ್ಯೆ ಅನುಮಾನ
ಕೂಡಲೇ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹುಂಡಿಯ ಹಣಕ್ಕೋಸ್ಕರ ಹತ್ಯೆ ನಡೆದಿದೆ ಎನ್ನುವುದರ ಬಗ್ಗೆ ನನಗೆ ಅನುಮಾನವಿದೆ. ಇದರ ಹಿಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿರಬಹುದು. ಇದೊಂದು ಉಗ್ರವಾದದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಭಯ ಸೃಷ್ಟಿ ಮಾಡುತ್ತಿದ್ದಾರೆ. ಹಣಕ್ಕೆ ಗಮನವನ್ನು ಹರಿಸುವ ಪ್ರಕ್ರಿಯೆ ಕೂಡ ಆಗಿರಬಹುದು ಎಂದರು.

ಇದನ್ನೂ ಓದಿ: ಕ್ಯಾಸಿನೋ ಜಟಾಪಟಿ: ಬಿಜೆಪಿ ಶಾಸಕರು ಮತ್ತು ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿದ್ದೇನು?

Advertisement

ಸಿಸಿ ಕ್ಯಾಮೆರಾ ಯಾಕೆ ಸರಿಪಡಿಸಿಲ್ಲ. ಮುಜರಾಯಿ ಇಲಾಖೆಗೆ ಏನು ರೋಗ ಬಂದಿದೆ. ಬರುವಂಥ ಆದಾಯದ ಹಿನ್ನೆಲೆಯಲ್ಲಿ ಭಾರಿ ಅನಾಹುತ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿಕಾರಿದರು

Advertisement

Udayavani is now on Telegram. Click here to join our channel and stay updated with the latest news.

Next