Advertisement

ಭಾರತದ ಕುಗ್ರಾಮಗಳತ್ತ ಅಲ್‌ಖೈದಾ ಉಗ್ರ ದೃಷ್ಟಿ

12:19 PM Feb 20, 2018 | Sharanya Alva |

ವಾಷಿಂಗ್ಟನ್‌: ಭಾರತ ಉಪಖಂಡದ ಅಲ್‌ಖೈದಾ (ಎಕ್ಯುಐಎಸ್‌) ಉಗ್ರ ಸಂಘಟನೆಯು ಭಾರತ ಹಾಗೂ ಬಾಂಗ್ಲಾದೇಶಗಳ ಕುಗ್ರಾಮಗಳ ಯುವಜನರನ್ನು ನೇಮಿಸಿಕೊಳ್ಳಲಾರಂಭಿಸಿದೆ ಎಂದು ವಿಶ್ವಸಂಸ್ಥೆಯ ಪರಿವೀಕ್ಷಣಾ ಸಮಿತಿಯ ವರದಿಯೊಂದು ತಿಳಿಸಿದೆ.

Advertisement

ಇದಲ್ಲದೆ, ದಕ್ಷಿಣ ಹಾಗೂ ಪೂರ್ವ ಆಫ್ಘಾನಿಸ್ತಾನದ ಭಾಗಗಳಲ್ಲಿ ಅಲ್‌ ಖೈದಾದ ಸುಮಾರು 180 ಉಗ್ರರು, ಸಲಹೆಗಾರರು ಹಾಗೂ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಆಯ್ದ ವ್ಯಕ್ತಿಗಳ ಜತೆಗೆ ಸಮಾಲೋಚನೆ ನಡೆಸಿ ಅವರನ್ನು ತಮ್ಮತ್ತ ಸೆಳೆಯುತ್ತಿದ್ದಾರೆಂದು ಹೇಳಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸ್ಥಾಪಿಸಿರುವ ಈ ಸಮಿತಿ ಮಂಡಿಸಿ ರುವ 22ನೇ ವರದಿ ಇದಾಗಿದ್ದು, ಇದರಲ್ಲಿ, ಅಲ್‌ಖೈದಾ ನಾಯಕ ಐಮನ್‌ ಅಲ್‌-ಜವಾಹಿರಿ, ಆಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಭಾಗದಲ್ಲೇ ಅವಿತಿದ್ದಾನೆಂದೂ, ಆಫ್ಘಾನಿಸ್ತಾನದಲ್ಲಿ 20ಕ್ಕೂ ಹೆಚ್ಚು ಉಗ್ರರ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ತಾಲಿಬಾನಿ ಉಗ್ರರ ತಂಡವೇ ಅತಿ ದೊಡ್ಡ ಉಗ್ರರ ತಂಡವಾಗಿದ್ದು ಇದರಲ್ಲಿ 40ರಿಂದ 50 ಸಾವಿರ ಉಗ್ರರಿದ್ದಾರೆ ಎಂದು ಹೇಳಲಾಗಿದೆ.

ಉಗ್ರ ಹಫೀಜ್‌ ವಿರುದ್ಧ ಕ್ರಮ ಇಲ್ಲ : ಮುಂಬೈ ದಾಳಿಕೋರ ಹಫೀಜ್‌ ಸಯೀದ್‌ ನಾಯಕತ್ವದ ಜಮಾತ್‌-ಉದ್‌-ದಾವಾ, ಫಾಲಾ-ಐ- ಇನ್ಸಾನಿಯತ್‌ ಸಂಸ್ಥೆಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳದಿರಲು ಪಾಕಿಸ್ತಾನ ಪ್ರಧಾನಿ ಶಾಹೀದ್‌ ಖಖಾನ್‌ ಅಬ್ಟಾಸಿ ನಿರ್ಧರಿಸಿದ್ದಾರೆ. ಕ್ರಮದಿಂದ ರಾಜಕೀಯ ಬಿಕ್ಕಟ್ಟು ಏರ್ಪಡುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಸ್ಥೆಗಳ ಮೇಲಿನ ನಿಷೇಧ ಮುಂದುವರಿಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next