Advertisement
ಹೊಸ ಸಂಘಟನೆಯ ಬಗ್ಗೆ ಮಾಹಿತಿ ಇಲ್ಲಿದೆ:
ಇಸ್ಲಾಮಿಕ್ ಜಿಹಾದ್ ಅನ್ನು ಅಧಿಕೃತವಾಗಿ ಪ್ಯಾಲೇಸ್ತೀನ್ ಇಸ್ಲಾಮಿಕ್ ಜಿಹಾದ್(ಪಿಐಜೆ) ಎಂದು ಕರೆಯಲಾಗುತ್ತದೆ. ಸುನ್ನಿ ಇಸ್ಲಾಮಿಸ್ಟ್ ಉಗ್ರ ಸಂಘಟನೆಯಾಗಿರುವ ಇದು, ಸ್ವಾತಂತ್ರ್ಯ ಪ್ಯಾಲೇಸ್ತೀನ್ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದೆ. 1970ರಲ್ಲಿ ಇದರ ಸ್ಥಾಪನೆಯಾಯಿತು. ವಿವಿಧ ದಾಳಿಗಳಲ್ಲಿ ಭಾಗಿ
ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕತ್ವವನ್ನು ಜಿಯಾದ್ ಅಲ್-ನಖಲಾ ಮತ್ತು ಮಹಮ್ಮದ್ ಅಲ್-ಹಿಂದಿ ವಹಿಸಿದ್ದಾರೆ. ಹಮಾಸ್ ನಂತರ ಪ್ಯಾಲೇಸ್ತೀನ್‌ನ ಎರಡನೇ ಅತಿ ದೊಡ್ಡ ಉಗ್ರ ಸಂಘಟನೆಯಾಗಿದೆ. ಗಾಜಾ ಪಟ್ಟಿ ಮತ್ತು ಪ್ಯಾಲೇಸ್ತೀನ್‌ನ ಪಶ್ಚಿಮ ದಂಡೆಯಲ್ಲಿ ಇದರ ಅಸ್ತಿತ್ವವಿದೆ. 1990ರಿಂದ ಇಲ್ಲಿಯವರೆಗೆ ಇಸ್ರೇಲ್ ಮೇಲೆ ಹಲವು ದಾಳಿಗಳನ್ನು ಇಸ್ಲಾಮಿಕ್ ಜಿಹಾದ್ ನಡೆಸಿದೆ.
Related Articles
ವರ್ಷಗಳು ಕಳೆಯುತ್ತಾ ಹಮಾಸ್ ರಾಜಕೀಯವಾಗಿ ಕೂಡ ಬಲಾಡ್ಯವಾಯಿತು ಹಾಗೂ 2006ರಲ್ಲಿ ಗಾಜಾ ಚುನಾವಣೆಯಲ್ಲಿ ಜಯಗಳಿಸಿತು. ಆದರೆ ಇಸ್ಲಾಮಿಕ್ ಜಿಹಾದ್ ಶಸ್ತ್ರಾಸ್ತ್ರ ದಾಳಿಗಳನ್ನು ಮುಖ್ಯ ಗುರಿಯಾಗಿಸಿಕೊಂಡಿದೆ. 1997ರಲ್ಲಿ ಇಸ್ಲಾಮಿಕ್ ಜಿಹಾದಿ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಿಸಿದ ಅಮೆರಿಕ, ಅದನ್ನು ನಿಷೇಧಿಸಿತು.
Advertisement