Advertisement

Mangaluru ಕುಳಾಯಿಯಲ್ಲಿ ಇಸ್ಕಾನ್‌ ಶ್ರೀ ರಾಧಾ ಗೋವಿಂದ ಮಂದಿರ

01:26 AM Aug 17, 2024 | Team Udayavani |

ಉಡುಪಿ: ಭಕ್ತಿವೇದಾಂತ ಶ್ರೀಲ ಪ್ರಭುಪಾದರು ಸ್ಥಾಪಿಸಿರುವ ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌ (ಇಸ್ಕಾನ್‌) ವತಿಯಿಂದ ಮಂಗಳೂರಿನ ಕುಳಾಯಿಯಲ್ಲಿ ನೂತನವಾಗಿ ಇಸ್ಕಾನ್‌ ಶ್ರೀ ರಾಧಾ ಗೋವಿಂದ ಮಂದಿರವು 25 ಕೋ.ರೂ. ವೆಚ್ಚದಲ್ಲಿ 1.5 ಎಕ್ರೆ ನಿವೇಶನದಲ್ಲಿ ಆಕರ್ಷಕವಾಗಿ ನಿರ್ಮಾಣಗೊಳ್ಳುತ್ತಿದ್ದು, 2024ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.
ಇಸ್ಕಾನ್‌ ವಿಶ್ವಾದ್ಯಂತ 650ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, 62 ಕೃಷಿ ಸಮುದಾಯಗಳು, 50 ಶಾಲೆಗಳು, 139 ಪ್ರಸಾದ ವಿತರಣೆ ಕೇಂದ್ರಗಳನ್ನು ಒಳಗೊಂಡಿವೆ.

Advertisement

ದೇವಾಲಯದ
ಪ್ರಯೋಜನಗಳು
ದೇವಾಲಯದ ಆಧ್ಯಾತ್ಮಿಕ ವಾತಾವರಣವು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ದೈವಿಕ ಜ್ಞಾನ, ಮೌಲ್ಯಗಳನ್ನು ನೀಡುವ ಆಧ್ಯಾತ್ಮಿಕ ವಿಶ್ವವಿದ್ಯಾನಿಲಯವಾಗಿದ್ದು, ಇದು ಶೈಕ್ಷಣಿಕವಾಗಿ ಮುಂದುವರಿಯಲು ಸಹಕಾರಿಯಾಗಿದೆ. ದೇವಾಲಯವೆಂದರೆ ಮಾನಸಿಕ ಕಾಯಿಲೆಯನ್ನು ಗುಣಪಡಿಸುವ ಆಸ್ಪತ್ರೆ ಮತ್ತು ಮನಸ್ಸಿನಲ್ಲಿರುವ ಗೊಂದಲ, ಆತಂಕ, ಅಸ್ಪಷ್ಟತೆಗೆ ಸಮರ್ಪಕ ಉತ್ತರ (ಔಷಧ) ಸಿಗುತ್ತದೆ.ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು, ದುಶ್ಚಟಗಳನ್ನು ಬದಲಾಯಿಸಲು ಮತ್ತು ಹೃದಯದಲ್ಲಿ ಶುದ್ಧರಾಗಲು ದೇವಾಲಯವು ನಮಗೆ ಸಹಾಯ ಮಾಡುತ್ತದೆ. ಕಾರ್ಯ ಚಟುವಟಿಕೆಗಳು ಪ್ರತಿಯೊಬ್ಬರ ಮನೆಯಲ್ಲೂ ಭಗವದ್ಗೀತೆ ಇರಬೇಕೆನ್ನುವ ಉದ್ದೇಶ ದಿಂದ ಭಗವದ್ಗೀತೆ ವಿತರಣೆ, ಯುವಕರಿಗೆ ಸಾಮಾಜಿಕ ಜೀವನದಲ್ಲಿ ವಿಜ್ಞಾನ-ಆಧ್ಯಾತ್ಮಿಕ ವಿಚಾರಗಳು, ಧಾರ್ಮಿಕ ಹಬ್ಬಗಳ ಮಹತ್ವದ ಬಗ್ಗೆ ಮಾಹಿತಿ, ಸಂದೇಶಗಳನ್ನು ಬೋಧಿಸುವುದು ಹಾಗೂ ಯಾತ್ರೆಗಳನ್ನು ಯೋಜಿಸುವುದು.

ವಿವಿಧ ಸೇವೆಗಳು
ದೇವ ಮಂಟಪ ಸೇವೆ, ಗೌರ ರಾಧಾ ಗೋವಿಂದ ಗರ್ಭಗುಡಿ ಸೇವೆ, ಗೌರ್‌ ನಿತಾಯಿ ವಿಗ್ರಹ ಸೇವೆ, ಶ್ರೀಲಾ ಪ್ರಭುಪಾದ ಬಲಿಪೀಠ, ವಿಗ್ರಹ ಅಲಂಕಾರ ಕೊಠಡಿ ಸೇವೆ, ಬಲಿಪೀಠದ ಬಾಗಿಲು ಸೇವೆ, ಶಯನಗೃಹ ಸೇವೆ, ಪಲ್ಲಕಿ ಸೇವೆ, ಪೂಜಾಗೃಹ ಸೇವೆ, ಚೈತನ್ಯ ಲೀಲಾ ವರ್ಣಚಿತ್ರಗಳು, ಕೃಷ್ಣ ಲೀಲಾ ವರ್ಣಚಿತ್ರಗಳು, ದೇವಸ್ಥಾನ ನೆಲಹಾಸು ಮಾರ್ಟಿ ಸೇವೆ, ಅತಿಥಿಗೃಹ ಕೊಠಡಿ ಸೇವೆಗಳು, 32 ಬ್ರಹ್ಮಚಾರಿ ಆಶ್ರಮ ಕೊಠಡಿ ಸೇವೆ, ಗೋವಿಂದ ರೆಸ್ಟೋರೆಂಟ್‌, ಕಲ್ಯಾಣಿ ಸೇವೆ, ಗೋಪುರಂ ಸೇವೆ (ಪ್ರವೇಶದಲ್ಲಿ), ಸೆಮಿನಾರ್‌ ಹಾಲ್‌ಗಳು-ಸಣ್ಣ ಮತ್ತು ದೊಡ್ಡ (ಒಳಾಂಗಣ), ದೇವಸ್ಥಾನದ ಸಭಾಂಗಣ ಸೇವೆ, ಶಾಂಡ್ಲಿಯರ್‌ ಸೇವೆ, ದೇವಸ್ಥಾನದ ಬಾಗಿಲು ಸೇವೆ, ಅನ್ನದಾನ ಕಿಚನ್‌-ಸ್ಟೀಮ್‌ ಕಿಚನ್‌ ಅಡುಗೆ ಮನೆಗಳು, ನಿತ್ಯ ಸಾರ್ವಜನಿಕ ಅನ್ನ ಸೇವೆ (ಪ್ರತಿದಿನ 500 ಭಕ್ತರಿಗೆ ಪ್ರಾಯೋಜಕರಿಗೆ ವಿಶೇಷ ಭೋಜನ ವ್ಯವಸ್ಥೆ), ಅನ್ನದಾನ ಸಭಾಂಗಣ ಸೇವೆ, 160 ಕೆವಿಎ ಜನರೇಟರ್‌ಗಳ ಎಸ್‌ಟಿಪಿ ವ್ಯವಸ್ಥೆ, ಸಾರ್ವಜನಿಕ ವಾಟರ್‌ ಫಿಲ್ಟರ್‌, ಸಿಸಿಟಿವಿ-ಸಾರ್ವಜನಿಕ ಭದ್ರತಾ ಕೆಮರಾಗಳು, ಸಾರ್ವಜನಿಕ ಲಿಫ್ಟ್ ಸೇವೆಗಳಿವೆ. ಈ ಸೇವೆಗಳಿಗೆ ವೆಬ್‌ಸೈಟ್‌ ಮೂಲಕ ದೇಣಿಗೆ ನೀಡಬಹುದು.

ಪ್ರಮುಖ ಲಕ್ಷಣಗಳು
ದೇಶ ವಿದೇಶಗಳ ಭಕ್ತರಿಗೆ ವಸತಿ ತರಬೇತಿ ಶಿಕ್ಷಣ (ಆಫ್ಲೈನ್‌ ಭಗವದ್ಗೀತೆ ಕೋರ್ಸ್‌) ಸಾಂಸ್ಕೃತಿಕ-ಆಧ್ಯಾತ್ಮಿಕ ಕಾರ್ಯಕ್ರಮಗಳು, ಪ್ರತಿದಿನ ಆನ್‌ಲೈನ್‌ ತರಗತಿಗಳು (ಈ ತರಗತಿಗಳಲ್ಲಿ ಆರಂಭಿಕ, ಮಧ್ಯಾಂತರ ಮತ್ತು ಮುಂದುವರಿದ ಹಂತಗಳು), ವರ್ಣಚಿತ್ರ ಗ್ಯಾಲರಿ, ಎಲ್ಲ ಭಕ್ತರಿಗೆ ಉಚಿತ ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ. ಮಾಹಿತಿ ಮತ್ತು ಸೇವೆಗಳ ವಿವರಗಳಿಗೆ ವೆಬ್‌ಸೈಟ್‌: //www.iskconmangalore.com ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next