Advertisement

Kuttettoor ಆಯುಷ್ಮಾನ್‌ ಆರೋಗ್ಯ ಮಂದಿರ: ರಾಷ್ಟಮಟ್ಟದ ಮೌಲ್ಯಮಾಪನಕ್ಕೆ ಕೇಂದ್ರೀಯ ತಂಡದ ಭೇಟಿ

12:18 AM Sep 02, 2024 | Team Udayavani |

ಬಜಪೆ: ಪೆರ್ಮುದೆ ಗ್ರಾ. ಪಂ. ವ್ಯಾಪ್ತಿಯ ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಕುತ್ತೆತ್ತೂರು ಆಯುಷ್ಮಾನ್‌ ಆರೋಗ್ಯ ಮಂದಿರದ ಕಾರ್ಯಚಟುವಟಿಕೆಗಳ ಮಾಲ್ಯಮಾಪನವನ್ನು ನಡೆಸಲು ಕೇಂದ್ರಿಯ ವೈದ್ಯಕೀಯ ತನಿಖಾ ತಂಡ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.

Advertisement

ಜಿಲ್ಲೆಯಲ್ಲಿ 355 ಆಯುಷ್ಮಾನ್‌ ಆರೋಗ್ಯ ಮಂದಿರಗಳಿದ್ದು ಈಗಾಗಲೇ ರಾಜ್ಯಮಟ್ಟದಲ್ಲಿ ಉತ್ತಮ ಗುಣಮಟ್ಟದ ಸೇವೆ ಕೊಡುವಲ್ಲಿ ರಾಜ್ಯ ತನಿಖಾ ತಂಡದಿಂದ ಕುತ್ತೆತ್ತೂರು ಆಯುಷ್ಮಾನ್‌ ಆರೋಗ್ಯ ಮಂದಿರ ಮೊದಲಾಗಿ ಆಯ್ಕೆಯಾಗಿತ್ತು. ಇದರ ಜತೆ ಬಂಟ್ವಾಳದ ಆರಳ ಆಯುಷ್ಮಾನ್‌ ಆರೋಗ್ಯ ಮಂದಿರವೂ ಆಯ್ಕೆಯಾಗಿದೆ. ಇದೀಗ ರಾಷ್ಟಮಟ್ಟದಲ್ಲಿ ಮೌಲ್ಯಮಾಪನ ನಡೆಸಲು ಕೇಂದ್ರಿಯ ವೈದ್ಯಕೀಯ ತಂಡ ಪ್ರಥಮವಾಗಿ ಕುತ್ತೆತ್ತೂರಿಗೆ ಆಗಮಿಸಿದೆ.

ವೈದ್ಯಕೀಯ ಸೇವೆಗಳ ಪರಿಶೀಲನೆ
ಆರೋಗ್ಯ ಮಂದಿರದಲ್ಲಿ ನಡೆಯುತ್ತಿರುವ ಸೇವಾ ಶುಶ್ರೂಷೆ, ಸಾಮೂಹಿಕ ಆರೋಗ್ಯ ಕಾಳಜಿ ಸಹಿತ 12 ವೈದ್ಯಕೀಯ ಸೇವೆಗಳ ಬಗ್ಗೆ ಈ ತಂಡ ಮಾಹಿತಿ ಪಡೆಯಲಿದೆ. ಬಾಲ್ಯ ಮತ್ತು ಹದಿಹರೆಯದವರ ಆರೋಗ್ಯ ಸೇವೆಗಳು, ನವಜಾತ ಶಿಶುಗಳು ಮತ್ತು ಶಿಶುಗಳ ಆರೋಗ್ಯ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯಲ್ಲಿ ಕಾಳಜಿ, ಕುಟುಂಬ ಯೋಜನೆ, ಗರ್ಭನಿರೋಧಕ ಸೇವೆ ಮತ್ತು ಇತರ ಸಂತಾನೋತ್ಪತ್ತಿ, ತುರ್ತು ವೈದ್ಯಕೀಯ ಸೇವೆ, ಆಸಾಂಕ್ರಾಮಿಕ ರೋಗಗಳ ತಪಾಸಣೆ ತಡೆಗಟ್ಟುವಿಕೆ ನಿಯಂತ್ರಣ, ಸಾಮಾನ್ಯ ಸಾಂಕ್ರಾಮಿಕ ರೋಗಗಳ ನಿರ್ವಹಣೆ ಮತ್ತು ತೀವ್ರವಾದ ಸರಳ ಕಾಯಿಲೆ ಮತ್ತು ಸಣ್ಣ ಕಾಯಿಲೆಗಳಿಗೆ ಹೊರರೋಗಿಗಳ ಆರೈಕೆ, ಮಾನಸಿಕ ಆರೋಗ್ಯ ಕಾಯಿಲೆಗಳ ತಪಾಸಣೆ ಮತ್ತು ಅಗತ್ಯ ಸೇವೆಗಳ ನಿರ್ವಹಣೆ, ಹಲ್ಲುಗಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಕಟ್ಟಡ, ಅವರಣಗೋಡೆ ಸ್ವತ್ಛತೆ, ಜನರಿಗೆ ಸೇವೆ, ತಾಜ್ಯ ವಿಲೇವಾರಿ, ತಾಯಿ ಮತ್ತು ಮಗುವಿನ ಆರೈಕೆ, ಬಾಣಂತಿ ಆರೈಕೆ, ಅಸಾಂಕ್ರಾಮಿಕ ರೋಗಗಳಾದ ಬಿಪಿ, ಶುಗರ್‌, ಕ್ಯಾನ್ಸರ್‌ ಪತ್ತೆ ಹಚ್ಚುವ ವಿಷಯದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳ ನಿರ್ವಹಿಸುತ್ತಿರುವ ಪಾತ್ರವನ್ನು ಪರಿಶೀಲಿಸಲಿರುವ ಈ ತಂಡವು ಅಂಕವನ್ನು ನೀಡುತ್ತಿದೆ. ಇದೇ ಆದಾರದಲ್ಲಿ ಈ ಕೇಂದ್ರವು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿದ್ದು ಇದೀಗ ರಾಷ್ಟ್ರಮಟ್ಟದಲ್ಲೂ ಅನುದಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ.

ಈ ತಂಡವು ವಿವಿಧ ಸೇವೆಗಳ ಬಗ್ಗೆ ಪರಿಶೀಲನೇ ನಡೆಸಿ ಅಂಕ ನೀಡುತ್ತದೆ. ಒಟ್ಟಾರೆ 120 ಅಂಕದಲ್ಲಿ ಶೇ. 70ಕ್ಕಿಂತ ಹೆಚ್ಚು ಸಿಕ್ಕಿದರೆ ಈ ಆರೋಗ್ಯ ಮಂದಿರಕ್ಕೆ ವಾರ್ಷಿಕವಾಗಿ ಅನುದಾನ ಬರುತ್ತದೆ.

ತನಿಖಾ ತಂಡದಲ್ಲಿ ಮಹಾರಾಷ್ಟ್ರದ ಡಾ| ಶೈಲೇಶ್‌ ಪಾಟೀಲ್‌, ಕೇರಳದ ಬಿಂದೂ ಬಿ. ಆಗಮಿಸಿದ್ದು, ದಿನಪೂರ್ತಿ ಕೇಂದ್ರದ ವಿವಿಧ ಸೇವಾ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿತು.ಕಾಟಿಪಳ್ಳ ಪ್ರಾ. ಆ. ಕೇಂದ್ರದ ವೈದ್ಯಾ ಧಿಕಾರಿ ಡಾ| ಭರತ್‌ ಕುಮಾರ್‌, ಜಿಲ್ಲಾ ಅರೋಗ್ಯ ಕೇಂದ್ರದ ಡಾ| ದೀಪಾ, ಡಾ| ರಾಜೇಶ್ವರಿ, ಶಾಂತಿ ಪ್ರಿಯಾ, ಪೆರ್ಮುದೆ ಗ್ರಾ. ಪಂ. ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಪಂಚಾಯತ್‌ ಅಭಿವೃದ್ಧಿ ಅಧಿ ಕಾರಿ ರಮೇಶ್‌ ರಾಥೋಡ್‌, ಕಾಟಿಪಳ್ಳ ಕೃಷ್ಣಾಪುರ ಲಯನ್ಸ್‌ ಕ್ಲಬ್‌ ನಿಕಟ ಪೂರ್ವ ಅಧ್ಯಕ್ಷ ದೀಪಕ್‌ ಪೆರ್ಮುದೆ, ಪಂಚಾಯತ್‌ ಸದಸ್ಯ ಉಮೇಶ್‌ ಪೂಜಾರಿ, ಸದಸ್ಯೆ ಭಾರತಿ, ಆರೋಗ್ಯ ಕೇಂದ್ರದ ಶುಶ್ರೂಷಕಿ ಉಷಾ, ಲಕ್ಷ್ಮೀ, ಚರಿತ್ರ, ಮಂಗಳಪೇಟೆ ಶಾಲಾ ಶಿಕ್ಷಕ ರಾಜಣ್ಣ, ಸ್ಥಳೀಯ ಪ್ರಮುಖರಾದ ಸ್ಟಾನಿ ಫೆನಾಂìಡಿಸ್‌, ಸುಧಾಕರ ಶೆಟ್ಟಿ, ಸಮುದಾಯ ಆರೋಗ್ಯ ಅ ಧಿಕಾರಿ ಯಶಸ್ವಿನಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next