Advertisement

Vitla; ಸಹಕಾರಿ ತತ್ವ ಭಗವಂತ ಕರುಣಿಸಿದ ಆಧ್ಯಾತ್ಮಿಕ ತತ್ವ: ಒಡಿಯೂರು ಶ್ರೀ

11:19 PM Sep 02, 2024 | Team Udayavani |

ವಿಟ್ಲ: ಸಹಕಾರ ಧುರೀಣ ಮೊಳಹಳ್ಳಿ ಶಿವರಾಯರಂಥವರ ಕನಸು ಸಾಕಾರಗೊಂಡು ಇಂದಿನ ಸಮಾಜಕ್ಕೆ ಅನುಕೂಲವಾಗಿದೆ. ಸಹಕಾರದಲ್ಲಿ ಆದರ್ಶ ರಾಷ್ಟ್ರ ನಿರ್ಮಾಣದ ಪರಿಕಲ್ಪನೆಯಿದೆ. ಅಧ್ಯಾತ್ಮದ ಜತೆಗೆ ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ. ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆಯಿದ್ದಾಗ ಪ್ರಗತಿಯ ಹಾದಿ ಸುಗಮವಾಗುತ್ತದೆ. ಸಹಕಾರ ತಣ್ತೀ ಭಗವಂತ ಕರುಣಿಸಿದ ಆಧ್ಯಾತ್ಮಿಕ ತಣ್ತೀವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಭೆಯಲ್ಲಿ ಆಶೀರ್ವಚನ ನೀಡಿದರು.

ವಿಶಾಲ ಹಾಗೂ ವಿಸ್ತಾರ ಚಿಂತನೆಯಿದ್ದಾಗ ಭವಿಷ್ಯ ಸದೃಢವಾಗಬಹುದು. ಯಾಂತ್ರಿಕ ಬದುಕಿಗೆ ನಿಯಂತ್ರಣ ಹಾಕದಿದ್ದರೆ ಅಪಾಯ ನಿಶ್ಚಿತ. ಸ್ವ ಉದ್ಯೋಗ, ಕೃಷಿ ಸಂಬಂಧಿತ  ವಿಚಾರದಲ್ಲಿ ಸಹಕಾರ ಕ್ಷೇತ್ರ ಹೆಚ್ಚು ತೊಡಗಿಸಿಕೊಳ್ಳಬಹುದಾಗಿದೆ. ಗ್ರಾಮ ವಿಕಾಸ ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣದ ಪ್ರಯತ್ನವಾಗಬೇಕಾಗಿದೆ ಎಂದು ಅವರು ಹೇಳಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಸಾನಿಧ್ಯ ವಹಿಸಿದ್ದರು.ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್‌ ರೈ ಮಾತನಾಡಿ, ಸಂಸ್ಥೆಯು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಪೂರ್ಣ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ. ಅಂಗವಿಕಲರಿಗೆ ಸ್ವಾವಲಂಬಿ ಬದುಕಿಗೆ ಬೇಕಾದ ವ್ಯವಸ್ಥೆ, ರೈತರಿಗೆ ತೋಟದಲ್ಲಿ ಪಾಠ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಸಾವಯವ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ವ್ಯಾಪಕವಾದ ಪ್ರಕ್ರಿಯೆ ನಡೆಯುತ್ತಿದೆ. ಸಹಕಾರಿಯು 2023-24ನೇ ಸಾಲಿನಲ್ಲಿ 19 ಶಾಖೆಯನ್ನು ಹೊಂದಿ, 302.36 ಕೋಟಿ ರೂ. ಠೇವಣಿ ಸಂಗ್ರಹಿಸಿ 248.42 ಕೋ.ರೂ. ಹೊರ ಬಾಕಿ ಸಾಲ ಹೊಂದಿದೆ. 550.78 ಕೋ. ರೂ. ವ್ಯವಹಾರ ದಾಖಲಿಸಿ, 4.53 ಕೋ. ರೂ. ಲಾಭ ಗಳಿಸಿದೆ. ಎ ಶ್ರೇಣಿಯಲ್ಲಿರುವ ಸಂಘವು ಸದಸ್ಯರಿಗೆ ಶೇ.21 ಡಿವಿಡೆಂಡ್‌ ನೀಡಲಿದೆ. ಮುಂದಿನ ವರ್ಷಕ್ಕೆ ಶಾಖೆಗಳನ್ನು 30ಕ್ಕೆ ಏರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ಅಧಿ ಕಾರಿ ಗುರುಪ್ರಸಾದ್‌ ಬಂಗೇರ ಮಾತನಾಡಿ, ವ್ಯವಹಾರ ಸೇರಿ ಪ್ರಗತಿಯನ್ನು ಗಮನಿಸಿದರೆ ರಾಜ್ಯದ ಉತ್ತಮ ಸಹಕಾರ ಸಂಸ್ಥೆಯ ಟಾಪ್‌ 25ರ ಪಟ್ಟಿಯಲ್ಲಿ ಒಡಿಯೂರು ವಿ. ಸೌ.ಸಹಕಾರಿಯೂ ಇದೆ ಎಂದರು.

Advertisement

ಕೇಂದ್ರ ಕಚೇರಿ ಹಾಗೂ ಶಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಬಂದಿಯನ್ನು ಗೌರವಿಸಲಾಯಿತು. ಗ್ರಾಹಕರು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭ ದತ್ತಪ್ರಕಾಶ ದ್ವೈಮಾಸಿಕ ಪತ್ರಿಕೆಯ ಬೆಳ್ಳಿಹಬ್ಬಕ್ಕೆ 1 ಲಕ್ಷ ರೂ. ಮೊತ್ತವನ್ನು ಸಹಕಾರಿಯಿಂದ ಹಸ್ತಾಂತರಿಸಲಾಯಿತು.

ಲೆಕ್ಕಪರಿಶೋಧಕ ಟಿ. ರಾಮ್‌ ಮೋಹನ್‌ ರೈ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ತಾರಾನಾಥ ಶೆಟ್ಟಿ, ಲೋಕನಾಥ ಶೆಟ್ಟಿ, ಶಾರದಾಮಣಿ, ಸರಿತಾ ಅಶೋಕ್‌, ಗಣಪತಿ ಭಟ್‌ ಸೇರಾಜೆ, ಮೋನಪ್ಪ ಪೂಜಾರಿ ಕೆರೆಮನೆ, ಸೋಮಪ್ಪ ನಾೖಕ್‌ ಕಡಬ, ಗಣೇಶ್‌ ಅತ್ತಾವರ, ಭವಾನಿಶಂಕರ ಶೆಟ್ಟಿ, ಅಶೋಕ್‌ ಕುಮಾರ್‌ ಯು. ಎಸ್‌. ಜಯಪ್ರಕಾಶ ರೈ ಎನ್‌., ಎಂ. ಉಗ್ಗಪ್ಪ ಶೆಟ್ಟಿ, ಕರುಣಾಕರ ಜೆ. ಉಚ್ಚಿಲ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ವರದಿ ವಾಚಿಸಿದರು. ಶ್ರದ್ಧಾ ಜಿ. ಶೆಟ್ಟಿ ಆಶಯಗೀತೆ ಹಾಡಿದರು. ನಿರ್ದೇಶಕ ಯು.ದೇವಪ್ಪ ನಾಯಕ್‌ ಉಪ್ಪಳಿಗೆ ವಂದಿಸಿದರು. ಪುತ್ತೂರು ಶಾಖೆಯ ವ್ಯವಸ್ಥಾಪಕಿ ಪವಿತ್ರಾ ಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next