ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯನ್ನು ಭೀಕರ ಉಗ್ರ ದಾಳಿಯಿಂದ ಗುಪ್ತಚರ ದಳ ತಪ್ಪಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ (ಐಸಿಸ್) ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವ ಗುಪ್ತಚರ ದಳವು ಒಬ್ಬ ಯುವಕನನ್ನು ಬಂಧಿಸಿದೆ. ಕಳೆದ ವರ್ಷವೇ ಈ ಒಟ್ಟು ಪ್ರಕ್ರಿಯೆ ನಡೆ ದಿತ್ತಾದರೂ ಈ ಮಹತ್ವದ ಕಾರ್ಯಾ ಚರಣೆಯ ವಿಷಯ ಈಗ ಬಹಿರಂಗ ಗೊಂಡಿದೆ. ಸದ್ಯ ಬಂಧಿತ ಈ ಉಗ್ರ ಅಫ್ಘಾನಿಸ್ಥಾನದಲ್ಲಿನ ಅಮೆರಿಕದ ಸೇನಾ ನೆಲೆಯಲ್ಲಿದ್ದಾನೆ ಎನ್ನಲಾಗಿದೆ.
ಈ ಯುವಕನ ಮೂಲಕ ದಾಳಿ
ನಡೆಸುವ ಐಸಿಸ್‌ನ ಸಂಚು ತಿಳಿಯು ತ್ತಿದ್ದಂತೆ ಸಾಕ್ಷಿ ಸಹಿತ ಸೆರೆಗೆ ಸುಮಾರು 18 ತಿಂಗಳವರೆಗೆ ಈತನ ಮೇಲೆ ಕಣ್ಗಾ ಲು ಇಡಲಾಗಿತ್ತು. ಇದಕ್ಕಾಗಿ ಅಫ್ಘಾನಿಸ್ಥಾನ, ದುಬಾೖ ಹಾಗೂ ದಿಲ್ಲಿಯಲ್ಲಿ ಭಾರೀ ದೊಡ್ಡ ತಂಡವೇ ಕಾರ್ಯಾಚರಣೆ ನಡೆಸಿದ್ದು, 80ಕ್ಕೂ ಹೆಚ್ಚು ಭಾರತೀಯ ತನಿಖಾ ಅಧಿಕಾರಿಗಳು ಭಾಗವಹಿಸಿದ್ದರು. ಅಮೆರಿಕ ಸೇನೆ ಹಾಗೂ ಗುಪ್ತಚರ ದಳವೂ ಇದಕ್ಕೆ ನೆರವಾ ಗಿತ್ತು. ಬಂಧನದ ಅನಂತರ ಉಗ್ರನ ವಿಚಾರಣೆ ಹಾಗೂ ತಪ್ಪೊಪ್ಪಿಗೆಗಳು ಅತ್ಯಂತ ಗಮನಾರ್ಹವಾಗಿದ್ದು, ಅಮೆರಿಕ ಸೇನೆಯು ತಾನು ಅಫ್ಘಾನಿಸ್ಥಾನದಲ್ಲಿ ನಡೆಸಿದ ಕಾರ್ಯಾಚರಣೆಗಳ ಯಶಸ್ಸುಗಳಲ್ಲೊಂದು ಎಂದು ಪರಿಗಣಿಸಿದೆ ಎನ್ನಲಾಗಿದೆ.
ಉದ್ಯಮಿಯ ಪುತ್ರನ ಬಳಕೆ: 12 ಉಗ್ರರ ತಂಡಕ್ಕೆ ಪಾಕಿಸ್ಥಾನದಲ್ಲಿ ತರಬೇತಿ ನೀಡಿ ಅವರನ್ನು ದಿಲ್ಲಿಗೆ ಕಳುಹಿಸಿ ಆತ್ಮಾಹುತಿ ದಾಳಿ ನಡೆಸುವುದು ಐಸಿಸ್ ಯೋಜನೆಯಾಗಿತ್ತು. ಈ ಪೈಕಿ ಒಬ್ಬನನ್ನು ಮೊದಲೇ ಕಳುಹಿಸಲಾಗಿತ್ತು. ಈತ 20 ವರ್ಷದ ಆಸುಪಾಸಿನ ವ್ಯಕ್ತಿಯಾಗಿದ್ದು, ಆಫ^ನ್‌ನ ಉದ್ಯಮಿಯೊಬ್ಬರ ಪುತ್ರ ಎನ್ನಲಾಗಿದೆ. ಈತ ದಿಲ್ಲಿ-ಫರಿದಾಬಾದ್ ಹೆದ್ದಾರಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಆರಂಭದಲ್ಲಿ ಹಾಸ್ಟೆಲ್‌ನಲ್ಲೇ ವಾಸವಿದ್ದ. ಅನಂತರ ಲಜ್‌ಪತ್ ನಗರದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ಪಡೆದಿದ್ದ. ಎಲ್ಲ ಮಾಹಿತಿಯನ್ನೂ ಆಫ^ನ್‌ನಲ್ಲಿದ್ದ ಉಗ್ರರಿಗೆ ಈತ ನೀಡುತ್ತಿದ್ದ.
ಮ್ಯಾಂಚೆಸ್ಟರ್ ದಾಳಿ ನಡೆಸಿದ ತಂಡದ ಸಂಚು: ಮೂಲಗಳ ಪ್ರಕಾರ 2017 ಮೇ 22ರಂದು ಮ್ಯಾಂಚೆಸ್ಟರ್ ಅರೆನಾದಲ್ಲಿ ದಾಳಿ ನಡೆಸಿ 23 ಜನರನ್ನು ಹತ್ಯೆಗೈದ ತಂಡವೇ ಈ ಕಾರ್ಯಾಚರಣೆ ನಡೆಸುತ್ತಿತ್ತು ಎನ್ನಲಾಗಿದೆ. ಇದೇ ತಂಡ ಯುವಕನನ್ನು ದಿಲ್ಲಿಗೆ ಕಳುಹಿಸಿತ್ತು. ಮ್ಯಾಂಚೆಸ್ಟರ್ ದಾಳಿಯಲ್ಲಿ ಬಳಸಿದ ಸ್ಫೋಟಕಗಳಂಥವನ್ನೇ ದಿಲ್ಲಿ ದಾಳಿಯಲ್ಲೂ ಬಳಸಲು ನಿರ್ಧರಿಸಲಾಗಿತ್ತು.
ಸುಳಿವು ಸಿಕ್ಕಿದ್ದು ಹೇಗೆ?: 50 ಸಾವಿರ ಡಾಲರ್ (34 ಲಕ್ಷ ರೂ.) ಹಣ ಅನುಮಾನಾಸ್ಪಾದವಾಗಿ ವರ್ಗಾವಣೆಯಾಗಿದ್ದನ್ನು ರಾ ತನಿಖೆ ನಡೆಸುತ್ತಿತ್ತು. ಈ ಮೊತ್ತ ದುಬಾೖನಿಂದ ಅಫ್ಘಾನಿಸ್ಥಾನಕ್ಕೆ ರವಾನೆಯಾಗಿ ಅಲ್ಲಿಂದ ಭಾರತಕ್ಕೆ ತಲುಪಿತ್ತು. ಇದರ ಮೂಲ ಹುಡುಕಿಕೊಂಡು ಹೋದ ತನಿಖಾ ಸಂಸ್ಥೆಗಳಿಗೆ ಭಾರತದಲ್ಲಿ ದಾಳಿ ನಡೆಸುವ ಐಸಿಸ್ ಸಂಚಿನ ಸುಳಿವು ಗೊತ್ತಾಗಿತ್ತು. ಹಲವು ದೂರವಾಣಿ ಕರೆಗಳನ್ನು ಕದ್ದಾಲಿಸಲಾಯಿತು. ದಿಲ್ಲಿಗೆ ಆಗಮಿಸಿದ್ದ ಆಫ^ನ್ ವ್ಯಕ್ತಿಯ ಸ್ನೇಹ ಸಾಧಿಸಲು ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಯಿತು. ಲಜ್‌ಪತ್ ನಗರದಲ್ಲಿ ಭಾರತೀಯ ಅಧಿಕಾರಿಗಳೇ ಸೂಕ್ತ ಮನೆ ನೋಡಿ ಉಗ್ರನಿಗೆ ತಿಳಿಯದಂತೆ ವ್ಯವಸ್ಥೆ ಮಾಡಿದ್ದರು. ಆರಂಭದಲ್ಲಿ ಮೂರನೇ ಮಹಡಿಯ ಮನೆ ವ್ಯವಸ್ಥೆ ಮಾಡಲಾಗಿತ್ತು. ಅನಂತರ ನೆಲ ಮಹಡಿಯ ಅಪಾರ್ಟ್‌ಮೆಟ್ ಒದಗಿಸಲಾಯಿತು.
ಬಂಧಿಸಿದ್ದು ಯಾವಾಗ?: ಒಂದು ಹಂತದಲ್ಲಿ ಆಫ^ನ್ ವ್ಯಕ್ತಿಗೆ ಸ್ಫೋಟಕಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಐಸಿಸ್ ಉಗ್ರರು ಸೂಚಿಸಿದರು. ಇದಕ್ಕೆ ಎಲ್ಲ ವ್ಯವಸ್ಥೆಯನ್ನೂ ಉಗ್ರ ಮಾಡಿದ್ದ. ಅಷ್ಟೇ ಅಲ್ಲ, ಒಂದು ದಿನ ಬೆಳಗ್ಗೆ ಭಾರತೀಯ ವ್ಯಕ್ತಿಯೊಬ್ಬ ಈ ಉಗ್ರನಿಗೆ ಸ್ಫೋಟಕ ಮತ್ತು ಐಇಡಿಗಳನ್ನು ಒದಗಿಸಿದ್ದ. ಅದೇ ದಿನ ಭದ್ರತಾ ಪಡೆ ಮನೆಯನ್ನು ಸುತ್ತುವರಿದು ಉಗ್ರನನ್ನು ಬಂಧಿಸಿತು ಎಂದು ಮೂಲಗಳು ತಿಳಿಸಿವೆ.
ಐಸಿಸ್ ಬಳಿ ರಾಸಾಯನಿಕ ಅಸ್ತ್ರ: ಇಸ್ಲಾಮಿಕ್ ಉಗ್ರ ಸಂಘಟನೆ ರಾಸಾಯನಿಕ ಅಸ್ತ್ರ ಬಳಸುತ್ತಿರುವುದಕ್ಕೆ ಭಾರತ ತೀವ್ರ ಖೇದ ವ್ಯಕ್ತಪಡಿಸಿದೆ. ಜು.8ರಂದು ಬ್ರಿಟಿಷ್ ಮಹಿಳೆಯೊಬ್ಬಳು ಅಪಾಯಕರ ರಾಸಾಯನಿಕದಿಂದಾಗಿ ಸಾವನ್ನಪ್ಪಿದ್ದರು. ಇದೇ ಪ್ರದೇಶದಲ್ಲಿ 4 ತಿಂಗಳ ಹಿಂದೆ ರಷ್ಯಾ ಗೂಢಚಾರಿ ಕೂಡ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಭಾರತ ತನ್ನ ಆಕ್ಷೇಪವನ್ನು ರಾಸಾಯನಿಕ ತಡೆಗೆ ಜಾಗತಿಕ ಮೇಲ್ವಿಚಾರಣಾ ಸಮಿತಿ ಒಪಿಸಿಡಬ್ಲೂé ಸಭೆಯಲ್ಲಿ ಸಲ್ಲಿಸಿದೆ. ಐಸಿಸ್ ರಾಸಾಯನಿಕ ಅಸ್ತ್ರ ಹೊಂದಿದೆ ಎಂಬ ವರದಿ ಪದೇ ಪದೇ ದಾಖಲಾಗುತ್ತಿರುವುದು ಆತಂಕಕಾರಿ ಸಂಗತಿ. ಇದರ ಬಗ್ಗೆ ಸಮಿತಿ ತೀಕ್ಷ್ಣ ನಿಗಾ ವಹಿಸಬೇಕು ಎಂದು ಒಪಿಸಿಡಬ್ಲೂಗೆ ಖಾಯಂ ಪ್ರತಿನಿಧಿ ವೇಣು ರಾಜಮಣಿ ಹೇಳಿದ್ದಾರೆ.
ಟಾರ್ಗೆಟ್ ಯಾವುದು?
ಮೂಲಗಳ ಪ್ರಕಾರ ದಿಲ್ಲಿ ವಿಮಾನ ನಿಲ್ದಾಣ, ವಸಂತ್ ಕುಂಜ್‌ನಲ್ಲಿರುವ ಮಾಲ್, ಅನ್ಸಲ್ ಪ್ಲಾಜಾ ಮಾಲ್ ಹಾಗೂ ಸೌತ್ ಎಕ್ಸ್‌ಟೆನ್ಸ್ ನ್ ಮಾರ್ಕೆಟ್‌ಗಳಿಗೆ ಉಗ್ರ ಭೇಟಿ ನೀಡಿದ್ದ. ಇವು ದಾಳಿಗೆ ಯೋಜಿಸಲಾದ ಸ್ಥಳಗಳಾಗಿರಬಹುದು ಎಂದು ಊಹಿಸಲಾಗಿದೆ.