Advertisement

“ಐಸಿಸ್‌ ಉಗ್ರರಿಂದ ಬಿಡುಗಡೆಯಾಗಿದ್ದೇ ಸುಷ್ಮಾ ಅವರಿಂದ’

11:39 PM Aug 07, 2019 | Lakshmi GovindaRaj |

ರಾಯಚೂರು: “ನಾನು ಇಂದು ಹೆತ್ತವರು, ಹೆಂಡತಿ, ಮಕ್ಕಳೊಂದಿಗೆ ನೆಮ್ಮದಿಯಿಂದ ಇದ್ದೇನೆ ಎಂದರೆ ಅದಕ್ಕೆ ಕಾರಣ ಸುಷ್ಮಾ ಸ್ವರಾಜ್‌. ಅಂದು ಐಸಿಸ್‌ ಉಗ್ರರ ಸೆರೆಗೆ ಸಿಲುಕಿದ್ದ ನಮ್ಮ ನೆರವಿಗೆ ಅವರು ಬಾರದಿದ್ದರೆ ನಮ್ಮ ಪರಿಸ್ಥಿತಿಯೇ ಬೇರೆ ಆಗಿರುತ್ತಿತ್ತು ಎಂದು ಭಾವುಕರಾಗುತ್ತಾರೆ’ ಲಕ್ಷ್ಮೀಕಾಂತ.

Advertisement

ಇಸ್ರೇಲ್‌ನ ಲಿಬಿಯಾದಲ್ಲಿ ಐಸಿಸ್‌ ಉಗ್ರರ ಒತ್ತೆಯಾಳುಗಳಾಗಿದ್ದ ಭಾರತದ ನಾಲ್ವರ ಪೈಕಿ ರಾಯಚೂರಿನ ಲಕ್ಷ್ಮೀಕಾಂತ ಛಲವಾದಿ ಕೂಡ ಒಬ್ಬರು. ಲಿಬಿಯಾದ ಸಿರತ್ಥ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಕರ್ನಾಟಕದ ಲಕ್ಷ್ಮೀಕಾಂತ, ವಿಜಯಕುಮಾರ, ಆಂಧ್ರದ ಗೋಪಾಲಕೃಷ್ಣ, ಬಲರಾಮ್‌ ಅವರೊಟ್ಟಿಗೆ 2015ರ ಜು.29ರಂದು ಹಿಂದಿರುಗುವಾಗ ಉಗ್ರರು ವಶಕ್ಕೆ ಪಡೆದಿದ್ದರು.

42 ಗಂಟೆಗಳ ಕಾಲ ಕೂಡಿ ಹಾಕಿದ್ದರು. ಆ ಕ್ಷಣದಲ್ಲಿ ನಾವು ಇಲ್ಲಿಂದ ಜೀವಂತ ಹೋಗುವುದೇ ಅಸಾಧ್ಯ’ ಎಂದು ಜೀವದ ಮೇಲೆ ಆಸೆ ಕೈಬಿಟ್ಟಿದ್ದೆವು. ಆಗ ನೆರವಿಗೆ ಧಾವಿಸಿದವರೇ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌. ಅವರು ಅಂದು ಕೈಗೊಂಡ ಸಮಯೋಚಿತ ನಿರ್ಧಾರದಿಂದ ನಮ್ಮ ಜೀವ ಉಳಿಯಿತು ಎನ್ನುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next