Advertisement

ಐಸಿಸ್‌ ಮುಖ್ಯಸ್ಥ ಬಗ್ಧಾದಿ ಸತ್ತಿದ್ದಾನೆ: ಸಿರಿಯ ಮಾನವ ಹಕ್ಕು ಸಂಸ್ಥೆ

07:16 PM Jul 11, 2017 | udayavani editorial |

ಮೊಸೂಲ್‌ : ಐಸಿಸ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಬುಬಕರ್‌ ಅಲ್‌ ಬಗ್ಧಾದಿ ಹತನಾಗಿರುವುದು ಖಚಿತ ಎಂಬ ಬಗ್ಗೆ ತನಗೆ ದೃಢ ಮಾಹಿತಿ ಲಭಿಸಿದೆ ಎಂದು ಸಿರಿಯದ ಮಾನವ ಹಕ್ಕುಗಳ ವಿಚಕ್ಷಣ ಸಂಸ್ಥೆ ರಾಯ್‌ಟರ್‌ ಸುದ್ದಿ ಸಂಸ್ಥೆಗೆ ಹೇಳಿದೆ. 

Advertisement

ಸಿರಿಯದ ಹೊರವಲಯದಲ್ಲಿರುವ ರಕ್ಕಾ ನಗರದಲ್ಲಿ ಐಸಿಸ್‌ ಉಗ್ರ ಸಂಘಟನೆಯ ನಾಯಕರು ಸಭೆ ಸೇರಿದ್ದ ತಾಣದ ಮೇಲೆ ತಾನು ನಡೆಸಿದ ಬಾಂಬ್‌ ದಾಳಿಯಲ್ಲಿ ಬಗ್ಧಾದಿ ಹತನಾಗಿದ್ದಾನೆ ಎಂದು ಕಳೆದ ಜೂನ್‌ ತಿಂಗಳಲ್ಲಿ ರಶ್ಯದ ರಕ್ಷಣಾ ಸಚಿವಾಲಯ ಹೇಳಿತು. 

ಆದರೆ ಅಮೆರಿಕ, ಬಗ್ಧಾದಿ ಸತ್ತಿರುವುದು ತನಗೆ ದೃಢಪಟ್ಟಿಲ್ಲ ಎಂದು ಹೇಳಿತ್ತು. ಪಾಶ್ಚಾತ್ಯ ಮತ್ತು ಇರಾಕೀ ಅಧಿಕಾರಿಗಳು ಬಗ್ಧಾದಿಯ  ಸಾವಿನ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದರು.

ಕಳೆದ ಮೇ ತಿಂಗಳಲ್ಲಿ ರಶ್ಯದ ವಾಯು ಪಡೆ ಸಿರಿಯದ ರಕ್ಕಾ ನಗರದ ಮೇಲೆ ನಡೆಸಿದ್ದ ವಾಯು ದಾಳಿಯಲ್ಲಿ ದಾಯೇಶ್‌ (ಐಸಿಸ್‌) ನಾಯಕ ಬಗ್ಧಾದಿ ಸತ್ತಿರುವ ಸಾಧ್ಯತೆಯೇ ಹೆಚ್ಚು ಎಂದು ರಶ್ಯ ವಾರಗಳ ಹಿಂದೆ ಪುನರುಚ್ಚರಿಸಿರುವುದನ್ನು ಅನಸರಿಸಿ ಇದೀಗ ಸಿರಿಯದ ಮಾನವ ಹಕ್ಕು ವಿಚಕ್ಷಣ ಸಂಸ್ಥೆ ಬಗ್ಧಾದಿಯ ಸಾವಿನ ಬಗ್ಗೆ  ತನಗೆ ದೃಢವಾದ ಮಾಹಿತಿಗಳು ಲಭಿಸಿವೆ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next