Advertisement

ಭಟ್ಕಳದ ಆರ್ಮರ್‌ ಜಾಗತಿಕ ಉಗ್ರ: ಅಮೆರಿಕ

02:22 AM Jun 16, 2017 | Team Udayavani |

ವಾಷಿಂಗ್ಟನ್‌: ಐಸಿಸ್‌ನ ಉಗ್ರ ಕರ್ನಾಟಕದ ಭಟ್ಕಳ ಮೂಲದ ಮೊಹಮ್ಮದ್‌ ಶಫಿ ಆರ್ಮರ್‌ನನ್ನು ಅಮೆರಿಕ ಅಂತಾರಾಷ್ಟ್ರೀಯ ಉಗ್ರರ ಪಟ್ಟಿಗೆ ಸೇರಿಸಿದೆ. ಈತ ಯುವಕರನ್ನು ಐಸಿಸ್‌ಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ  ಕೆಲಸ ಮಾಡುತ್ತಿದ್ದಾನೆ. ಅಮೆರಿಕ ಪ್ರಕಟ ಮಾಡುವ ಈ ಜಾಗತಿಕ ಉಗ್ರರ ಪಟ್ಟಿಯಲ್ಲಿ ಒಮ್ಮೆ ಸೇರ್ಪಡೆಯಾದರೆ, ಇಂಥ ಉಗ್ರರಿಗೆ ಹಣಕಾಸು ನೆರವು ನೀಡುವ, ಆಶ್ರಯ ನೀಡುವ ದೇಶ, ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ನಿರ್ಬಂಧ ಹೇರಬಹುದಾಗಿದೆ. 30 ವರ್ಷದ ಈತನ ಮೇಲೆ ಈಗಾಗಲೇ ಇಂಟರ್‌ಪೋಲ್‌ ನೋಟಿಸ್‌ ಜಾರಿಯಾಗಿದೆ. ಚೋಟೆ ಮೌಲಾ, ಅಂಜಾನ್‌ ಬಾಯ್‌ ಮತ್ತು ಯೂಸುಫ್ ಅಲ್‌ ಹಿಂದಿ ಎಂಬ ಹೆಸರಿನಿಂದಲೂ ಆರ್ಮರ್‌ ಉಗ್ರರ ಪಾಳೆಯದಲ್ಲಿ ಚಿರಪರಿಚಿತ. ಈಗಾಗಲೇ ಬಂಧಿತನಾಗಿರುವ ಯಾಸೀನ್‌ ಭಟ್ಕಳ್‌ ಕೂಡ ಈತನ ಬಗ್ಗೆ ಮಾಹಿತಿ ನೀಡಿದ್ದ.

Advertisement

ಆರಂಭದಲ್ಲಿ ಯಾಸೀನ್‌ ಮತ್ತು ರಿಯಾಜ್‌ ಭಟ್ಕಳ್‌ ಗರಡಿಯಲ್ಲಿ ಪಳಗಿದ್ದ ಆರ್ಮರ್‌, ಅನಂತರ ಇವರ ಜತೆ ಜಗಳವಾಡಿಕೊಂಡು, ತನ್ನ ಅಣ್ಣನನ್ನೂ ಕರೆದುಕೊಂಡು ಪಾಕ್‌ಗೆ ಪರಾರಿಯಾಗಿದ್ದ. ಅಲ್ಲಿ ಅನ್ಸರ್‌ ಅಲ್‌ ತಾವಿದ್‌ ಎಂಬ ಉಗ್ರ ಸಂಘಟನೆ ಶುರು ಮಾಡಿದ್ದ. ಬಳಿಕ ಐಸಿಸ್‌ ಸೇರಿ, ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ. ಭಾರತೀಯ ಗುಪ್ತಚರ ಮೂಲಗಳ ಪ್ರಕಾರ ಶಫಿ ಆರ್ಮರ್‌ ಭಾರತದಿಂದ ಐಸಿಸ್‌ಗೆ ಸುಮಾರು 30 ಮಂದಿಯನ್ನು ನೇಮಕ ಮಾಡಿದ್ದಾನೆ. ಸೋದರ ಸುಲ್ತಾನ್‌ ಆರ್ಮರ್‌ ಬಳಿಕ ಈತನೇ ಐಸಿಸ್‌ನ ಮುಖ್ಯ ನೇಮಕದಾರನಾಗಿದ್ದ ಎಂದು ಹೇಳಲಾಗಿದೆ. ಸಿರಿಯಾದಲ್ಲಿ 2016ರ ಡ್ರೋನ್‌ ದಾಳಿಗೆ ಬಲಿಯಾಗಿದ್ದ ಎಂದೂ ವರದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next