Advertisement

ಕಣಿವೆ ರಾಜ್ಯಕ್ಕೆ ಐಸಿಸ್‌ ಪ್ರವೇಶ?

06:00 AM Nov 20, 2017 | Harsha Rao |

ಜಮ್ಮು/ಹೊಸದಿಲ್ಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆದು ಅವುಗಳನ್ನು ನರಕದ ಕೂಪವಾಗಿಸಿದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆ ಭಾರತಕ್ಕೂ ಕಾಲಿಟ್ಟಿದೆಯೇ? ಕಣಿವೆ ರಾಜ್ಯದಲ್ಲಿ ಶುಕ್ರವಾರ ನಡೆದ ಶೂಟೌಟ್‌ನಲ್ಲಿ ಐಸಿಸ್‌ ಪಾತ್ರವಿದೆಯೇ?

Advertisement

ಇಂತಹದೊಂದು ಆತಂಕಕಾರಿ ಪ್ರಶ್ನೆ ಈಗ ಕಾಡತೊಡಗಿದೆ. “ಶುಕ್ರವಾರ ಜಮ್ಮು- ಕಾಶ್ಮೀರದ ಝಕೂರಾದಲ್ಲಿ ದಾಳಿ ನಡೆಸಿದ್ದು ಬೇರಾರೂ ಅಲ್ಲ, ನಮ್ಮದೇ ಸಂಘಟನೆ’ ಎಂದು ಐಸಿಸ್‌ ಹೇಳಿಕೊಂಡಿರುವುದೇ ಈ ಆತಂಕಕ್ಕೆ ಕಾರಣ. ಉಗ್ರ ಸಂಘಟನೆಯ ಪ್ರಚಾರ ಸಂಸ್ಥೆಯಾದ “ಅಮಖ್‌’ ನ್ಯೂಸ್‌ ಏಜೆನ್ಸಿಯು ಈ ಕುರಿತು ವರದಿ ಮಾಡಿದ್ದು, ಝಕೂರಾ ದಾಳಿಯ ಹೊಣೆಯನ್ನು ಐಸಿಸ್‌ ಹೊತ್ತುಕೊಂಡಿರುವುದಾಗಿ ಬಹಿರಂಗ ಪಡಿಸಿದೆ. ಈ ವರದಿಯು ನಿಜವೇ ಆಗಿದ್ದಲ್ಲಿ “ಝಕೂರಾ ಶೂಟೌಟ್‌’ ಭಾರತದ ಮಣ್ಣಲ್ಲಿ ನಡೆದ ಮೊದಲ ಐಸಿಸ್‌ ದಾಳಿ ಎಂಬ ಕಳಂಕ ವನ್ನು ಹೊತ್ತುಕೊಳ್ಳಲಿದೆ.

ಆದರೆ ಐಸಿಸ್‌ ಹೇಳಿ ಕೆಯು ನಂಬಲರ್ಹವಲ್ಲ ಎಂದು ಸರಕಾರ ಹೇಳಿದೆ. ಐಸಿಸ್‌ ಹೊಣೆ ಹೊತ್ತುಕೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಾಗೂ ಜಮ್ಮು-ಕಾಶ್ಮೀರ ಡಿಜಿ ಎಸ್‌.ಪಿ. ವೇದ್‌, “ಭಾರತಕ್ಕಿನ್ನೂ ಐಸಿಸ್‌ ಕಾಲಿಟ್ಟಿಲ್ಲ.  ಭಯ ಪಡಬೇಕಾದ ಅಗತ್ಯವಿಲ್ಲ’ ಎಂದಿದ್ದಾರೆ.

ಈ ಕುರಿತು ರವಿವಾರ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಾರ್ಯಾಲಯದ ಸಹಾಯಕ ಸಚಿವ ಜಿತೇಂದ್ರ ಸಿಂಗ್‌, “ಐಸಿಸ್‌ ಉಗ್ರರು ಕಾಶ್ಮೀರದಲ್ಲಿನ ಮೊದಲ ದಾಳಿ ಬಗ್ಗೆ ಹೇಳಿಕೊಂಡಿರುವ ವಿಚಾರ ಗೊತ್ತಾಗಿದೆ. ಸರ ಕಾರವು ಸಂಬಂಧಿತರಿಂದ ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ತನಿಖೆ ನಡೆಸಿ, ಅದರ ಆಧಾರದಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲಿದೆ’ ಎಂದಿದ್ದಾರೆ.

ಶ್ರೀನಗರ-ಗಂದೇರ್‌ಬಾಲ್‌ ರಸ್ತೆಯಲ್ಲಿನ ಝಕೂರಾದಲ್ಲಿ ಪೊಲೀಸ್‌ ತಂಡವೊಂದರ ಮೇಲೆ ಕಾರಿನಲ್ಲಿ ಬಂದಿದ್ದ ಮೂವರು ಉಗ್ರರು ಏಕಾಏಕಿ ಗುಂಡು ಹಾರಿಸಿದ್ದರು. ಪರಿಣಾಮ ಸಬ್‌ಇನ್ಸ್‌ಪೆಕ್ಟರ್‌ ಇಮ್ರಾನ್‌ ತಕ್‌ ಸ್ಥಳದಲ್ಲೇ ಮೃತಪಟ್ಟರೆ, ವಿಶೇಷ ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡಿದ್ದರು.

Advertisement

ಉಗ್ರರ ಆಯಸ್ಸೀಗ 10-15 ವಾರ ಮಾತ್ರ ಕಣಿವೆ ರಾಜ್ಯದಲ್ಲಿನ 3 ದಶಕಗಳಿಂದೀ ಚೆಗಿನ ಉಗ್ರವಾದವನ್ನು ಬೇರು ಸಹಿತ ಕಿತ್ತು ಹಾಕಲು ಭದ್ರತಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ವನ್ನು ನೀಡಿದ್ದೇವೆ. ಅದರ ಪರಿಣಾಮವಾಗಿ ನಿರಂತರವಾಗಿ ಉಗ್ರರ ದಮನ ನಡೆಯು ತ್ತಿದೆ. ಈಗ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದ ಎನ್ನುವುದು ಕೊನೆಯ ಹಂತಕ್ಕೆ ಬಂದು ತಲುಪಿದೆ. ಈಗ ಉಗ್ರ ಕಮಾಂಡರ್‌ಗಳ ಆಯಸ್ಸು ಹೆಚ್ಚೆಂದರೆ 10ರಿಂದ 15 ವಾರಗಳು ಮಾತ್ರ. ಒಮ್ಮೆ ಒಬ್ಬ ಕಮಾಂಡರ್‌ನನ್ನು ನೇಮಕ ಮಾಡಿದರೆ, ಅವನ ಸ್ಥಾನ ಆಕ್ರಮಿಸಿಕೊಳ್ಳಲು ಮತ್ತೂಬ್ಬ ಕಮಾಂಡರ್‌ ಸಜ್ಜಾಗಿ ಕುಳಿತಿರಬೇಕು. ಉಗ್ರರು ಬಹಳ ವರ್ಷಗಳ ಕಾಲ ಬದುಕುವ ಸಮಯ ಈಗ ಮುಗಿದಿದೆ ಎಂದೂ ಹೇಳಿದ್ದಾರೆ ಸಚಿವ ಜಿತೇಂದ್ರ ಸಿಂಗ್‌.

ಈ ವರ್ಷ 200 ಉಗ್ರರ ದಮನ
ಪ್ರಸಕ್ತ ವರ್ಷ ಸೇನಾ ಪಡೆಯು ಕಣಿವೆ ರಾಜ್ಯದಲ್ಲಿ ಸುಮಾರು 200 ಮಂದಿ ಉಗ್ರರನ್ನು ಸದೆಬಡಿದಿದೆ ಎಂದು ಸಿಆರ್‌ಪಿಎಫ್ ತಿಳಿಸಿದೆ. ಇದೇ ವೇಳೆ, ಉಗ್ರ ಚಟುವಟಿಕೆಗಳತ್ತ ಆಕರ್ಷಿತರಾಗಿರುವ ಯುವಕರು ಮುಖ್ಯವಾಹಿನಿಗೆ ಬರಲು ಬಯಸುವುದಾದರೆ ಅವರು ಸಿಆರ್‌ಪಿಎಫ್ ಸಹಾಯವಾಣಿ 14411ಗೆ ಕರೆ ಮಾಡಬಹುದು. ಆದರೆ ಕಾಶ್ಮೀರದ ಸ್ಥಳೀಯ ಯುವಕರಿಗೆ ಮಾತ್ರ ಈ ಅವಕಾಶ ಕಲ್ಪಿಸುತ್ತಿದ್ದೇವೆ ಎಂದೂ ಸ್ಪಷ್ಟಪಡಿಸಿದೆ. ಈ ನಡುವೆ ಲಷ್ಕರ್‌ ಸಂಘಟನೆ ತೊರೆದು ಮನೆಗೆ ವಾಪಸಾದ ಮಜೀದ್‌ ಖಾನ್‌ನ ವಿಚಾರವನ್ನು ರವಿವಾರ ಪ್ರಸ್ತಾವಿಸಿರುವ ಜಮ್ಮು-ಕಾಶ್ಮೀರ ಡಿಜಿಪಿ ಎಸ್‌.ಪಿ. ವೇದ್‌, “ಕಣಿವೆ ರಾಜ್ಯದಲ್ಲಿನ ಎಲ್ಲ ಅಮ್ಮಂದಿರೂ ಉಗ್ರ ಸಂಘಟನೆಯತ್ತ ಆಕರ್ಷಿತರಾಗಿರುವ ತಮ್ಮ ಮಕ್ಕಳನ್ನು ಶಸ್ತ್ರ ತ್ಯಜಿಸಿ ವಾಪಸಾಗುವಂತೆ ಮನವಿ ಮಾಡಿಕೊಳ್ಳಲಿ’ ಎಂದಿದ್ದಾರೆ.

ಮೂವರು ಭಯೋತ್ಪಾದಕರ ಸೆರೆ
ರವಿವಾರ ಸಂಜೆ ಕಣಿವೆ ರಾಜ್ಯದ ಬದ್ಗಾಂವ್‌ನಲ್ಲಿ ಮೂವರು ಭಯೋತ್ಪಾದಕ ರನ್ನು ಬಂಧಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಬಂಧಿತ ಉಗ್ರರ ಬಳಿಯಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಂಡಿಪೋರಾ ಜಿಲ್ಲೆಯಲ್ಲಿ ಶನಿವಾರ ಆರು ಮಂದಿ ಉಗ್ರರನ್ನು ಸೇನೆ ಸದೆಬಡಿದಿತ್ತು. ಈ ಕಾರ್ಯಾಚರಣೆ ಸಂದರ್ಭ ವಾಯುಪಡೆಯ ಓರ್ವ ಕಮಾಂಡರ್‌ ಹುತಾತ್ಮರಾಗಿದ್ದರು. 26/11ರ ಮುಂಬಯಿ ದಾಳಿಯ ಮಾಸ್ಟರ್‌ವೆುçಂಡ್‌ ಝಕೀವುರ್‌ ರೆಹಮಾನ್‌ ಲಕ್ವಿಯ ಸೋದರನ ಪುತ್ರ ಹಾಗೂ ಲಷ್ಕರ್‌ ಎ ತಯ್ಯಬಾದ ಇಬ್ಬರು ಕಮಾಂಡರ್‌ಗಳು ಕೂಡ ಈ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next