Advertisement

Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ

01:30 PM May 04, 2024 | Team Udayavani |

ಉತ್ತರಾಖಂಡ್: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಐದು ಮಂದಿ ಕಾಲೇಜು ವಿದ್ಯಾರ್ಥಿಗಳು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಉತ್ತರಾಖಂಡ್ ನ ಮಸ್ಸೂರಿಯಲ್ಲಿ ಶನಿವಾರ ಸಂಭವಿಸಿದೆ.

Advertisement

ಡೆಹ್ರಾಡೂನ್‌ನ ಐಎಂಎಸ್ ಕಾಲೇಜಿನಲ್ಲಿ ಓದುತ್ತಿರುವ ನಾಲ್ವರು ಹುಡುಗರು ಮತ್ತು ಇಬ್ಬರು ಹುಡುಗಿಯರು ಮಸ್ಸೂರಿಗೆ ಪ್ರವಾಸ ಹೋಗಿದ್ದರು ಇಂದು (ಶನಿವಾರ) ಬೆಳಿಗ್ಗೆ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ.

ಪೊಲೀಸರ ಮಾಹಿತಿ ಪ್ರಕಾರ ಆರು ಮಂದಿ ವಿದ್ಯಾರ್ಥಿಗಳಿದ್ದ ಎಸ್‌ಯುವಿ ಕಾರು ಮುಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ, ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ನ್ಯಾನ್ಸಿ ಎಂದು ಗುರುತಿಸಲಾಗಿದ್ದು ಆಕೆಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Raichur; ಅಣ್ಣಾಮಲೈ ಸೆಲ್ಫಿಗಾಗಿ ನೂಕುನುಗ್ಗಲು: ವೇದಿಕೆಯಲ್ಲೇ ಲಾಠಿ ಬೀಸಿದ ಪೊಲೀಸರು

Advertisement
Advertisement

Udayavani is now on Telegram. Click here to join our channel and stay updated with the latest news.

Next