Advertisement
ಮಂಗಳವಾರ ಮೂರು ರಾಜ್ಯಗಳಲ್ಲಿ ನಡೆದ ಕ್ಷಿಪ್ರ ಕಾರ್ಯಾಚರಣೆ ಯಲ್ಲಿ 6 ಉಗ್ರರು ಬಂಧಿತರಾದ ಬೆನ್ನಲ್ಲೇ ಈ ವಿಚಾರ ಬೆಳಕಿಗೆ ಬಂದಿದೆ.
Related Articles
Advertisement
ಟ್ರಾವೆಲ್ ಏಜೆಂಟ್ ವಶಕ್ಕೆ:
6 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ ಪೊಲೀಸರು ಬುಧವಾರ ಮುಂಬಯಿ ಯಲ್ಲಿ ಟ್ರಾವೆಲ್ ಏಜೆಂಟ್ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಸೆ. 13ರಂದು ಇದೇ ಏಜೆಂಟ್ ಈ ಉಗ್ರರಿಗೆ ರೈಲ್ವೇ ಟಿಕೆಟ್ ಬುಕ್ ಮಾಡಿ ಕೊಟ್ಟಿದ್ದ ಎನ್ನಲಾಗಿದೆ. ಇದೇ ವೇಳೆ ಶಂಕಿತ ಉಗ್ರ ಜಾನ್ ಮೊಹಮ್ಮದ್ ಶೇಖ್ ಎಂಬಾತನ ಕುಟುಂಬದ ಸದಸ್ಯರನ್ನು ಬುಧವಾರ ಮುಂಬಯಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಗರಿಷ್ಠ ಪ್ರಾಣಹಾನಿಗೆ ಪಾಕ್ ಸೇನೆಯಿಂದಲೇ ತರಬೇತಿ! :
ಬಂಧಿತ 6 ಉಗ್ರರ ಪೈಕಿ ಪಾಕ್‌ನಲ್ಲಿ ತರಬೇತಿ ಪಡೆದ ಇಬ್ಬರಿಗೆ ಕರಾಚಿಯ ಹೊರವಲಯದಲ್ಲಿ ಪಾಕ್ ಸೇನಾ ಸಿಬಂದಿಯೇ “ಉಗ್ರ ತರಬೇತಿ’ ನೀಡಿದ್ದರು. ಭಾರತದಲ್ಲಿ “ನವರಾತ್ರಿಯ ಸಮಯ ದಲ್ಲಿ ಮಾಡುವ ಸ್ಫೋಟ’ದಲ್ಲಿ ಗರಿಷ್ಠ ಪ್ರಾಣಹಾನಿ ಆಗುವಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆಯೂ ಕಲಿಸಿಕೊಡಲಾಗಿತ್ತು.
ಉಗ್ರರ ತಂಡವು ಮೊದಲು ಮಾನ್ಯತೆ ಪಡೆದ ವೀಸಾ ಮೂಲಕ ಮಸ್ಕತ್‌ಗೆ ತೆರಳಿ 10 ದಿನ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅಲ್ಲಿಂದ ಸಮುದ್ರ ಮಾರ್ಗದಲ್ಲಿ ಇರಾನ್‌ಗೆ ತೆರಳಿದ್ದರು. ಇರಾನ್‌ನಿಂದ ಹಡಗಿನ ಮೂಲಕ ಕರಾಚಿಗೆ ಪ್ರಯಾಣಿಸಿದ್ದರು. ಅಲ್ಲಿ ಪಾಕ್ ಸೇನೆಯ ಮೂವರು ಸಿಬಂದಿ, ಬಾಂಬ್-ಐಇಡಿ ತಯಾರಿಕೆ,
ಮ್ಯಾಪ್ ಓದುವುದು, ದೈನಂದಿನ ಬಳಕೆಯ ವಸ್ತು
ಗಳನ್ನು ಬಳಸಿ ಸ್ಫೋಟಕ ತಯಾರಿಸುವುದು, ಬಾಂಬ್ ಸ್ಫೋಟಿಸಿ ಗರಿಷ್ಠ ಹಾನಿ ಉಂಟುಮಾಡುವುದು ಇತ್ಯಾದಿ ವಿಚಾರಗಳ ಕುರಿತು ತರಬೇತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
“ನಿಮ್ಮಿಂದ ಪಾಠ ಕಲಿಯಬೇಕಿಲ್ಲ’ :
“ಒಂದು ವಿಫಲ ದೇಶದಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ.’ ಇದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ಥಾನಕ್ಕೆ ಭಾರತ ನೀಡಿರುವ ಖಡಕ್ ಉತ್ತರ.
ಕಾಶ್ಮೀರ ವಿಚಾರ ಪ್ರಸ್ತಾವಿಸಿದ್ದ ಪಾಕ್‌ಗೆ ತಿರುಗೇಟು ನೀಡಿರುವ ಭಾರತದ ರಾಜತಾಂತ್ರಿಕ ಅಧಿಕಾರಿ ಪವನ್ ಬಾಧೆ, “ಪಾಕಿಸ್ಥಾನವು ಭಯೋ ತ್ಪಾದನೆಯ ಕೇಂದ್ರಬಿಂದು ಮತ್ತು ಒಂದು ವಿಫಲ ದೇಶ ಎಂಬುದು ಜಗತ್ತಿಗೇ ಗೊತ್ತು. ಉಗ್ರರನ್ನು ಪೋಷಿಸುತ್ತಾ ಬಂದಿರುವ ನಿಮ್ಮಂಥವರಿಂದ ಪಾಠ ಕಲಿಯಬೇಕಾದ ಅಗತ್ಯ ನಮಗಿಲ್ಲ’ ಎಂದಿದ್ದಾರೆ.