ಬೆಂಗಳೂರು: ಕೋವಿಡ್ ಸಂಕಷ್ಟದ ಈ ಹೊತ್ತಿನಲ್ಲಿ ಈಶ ಫೌಂಡೇಶನ್ ತನ್ನ ಕಾರ್ಯಕರ್ತರ ಮೂಲಕ ಕೋವಿಡ್ ವಾರಿಯರ್ಸ್ ಗಳಿಗೆ ಹಾಗೂ ಅಗತ್ಯವುಳ್ಳವರಿಗೆ ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ವಿತರಿಸುತ್ತಿದೆ.
ಮೇ 1ರಿಂದ ಸಾವಿರಕ್ಕೂ ಅಧಿಕ ಸಿದ್ಧ ಆಹಾರ ಪೊಟ್ಟಣಗಳನ್ನು ಬೆಂಗಳೂರಿನ 11 ಸರಕಾರಿ ಆಸ್ಪತ್ರೆಗಳ ವೈದ್ಯರು, ಇತರ ಸಿಬಂದಿ ಹಾಗೂ ರೋಗಿಗಳಿಗೆ ವಿತರಿಸಿದೆ.
ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಪೊಲೀಸರಿಗೂ ಈ ಕಿಟ್‌ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಕೋಲಾರ ಸಹಿತ ಕರ್ನಾಟಕದ ಇತರ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ಫೌಂಡೇಶನ್ ಚಿಂತನೆ ನಡೆಸಿದೆ.
ಸುಮಾರು 400 ಮಂದಿ ಸ್ವಯಂ ಸೇವಕರು ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕೇಂದ್ರದ ವೈದ್ಯರಿಗೆ ಮತ್ತು ನಾಗರಿಕರಿಗೆ ಸಹಾಯ ಮಾಡುತ್ತಿದ್ದಾರೆ. ಜತೆಗೆ ಸೋಂಕಿತರಿಗೆ ಆಕ್ಸಿಜನ್, ಹಾಸಿಗೆ ಮುಂತಾದವು ಗಳನ್ನು ಒದಗಿಸುವಲ್ಲೂ ಸಹಾಯ ಮಾಡುತ್ತಿದ್ದಾರೆ. ಜತೆಗೆ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ನೀಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರು, ನಮ್ಮ ಸ್ವಯಂಸೇವಕರ ತಂಡ ಕೋವಿಡ್ ಮುಂಚೂಣಿ ವಾರಿಯರ್ಸ್ ಸಹಿತ ಇನ್ನಿತರರಿಗೆ ನೆರವು ನೀಡುತ್ತಿದೆ.
ನಾವೀಗ ಸಂಕಷ್ಟದ ಪರಿಸ್ಥಿತಿಯ ಲ್ಲಿದ್ದು, ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಬೇಕಾಗಿದೆ. ನಮಗೆ ಸಾಧ್ಯವಿರುವ ರೀತಿಯಲ್ಲಿ ಕೋವಿಡ್ ವಿರುದ್ಧದ ಹೋರಾಟ ದಲ್ಲಿ ಆಡಳಿತದೊಂದಿಗೆ ಸಹಕರಿಸಬೇಕಾ ಗಿದೆ ಎಂದು ಮನವಿ ಮಾಡಿದ್ದಾರೆ.