Advertisement

ಕಿವೀಸ್ ಗಾಯದ ಸಮಸ್ಯೆ: ತಂಡಕ್ಕೆ ಮರಳಿದ ಇಶ್ ಸೋಧಿ, ಬ್ಲೇರ್ ಟಿಕ್ನರ್

09:57 AM Feb 11, 2020 | keerthan |

ಮೌಂಟ್ ಮೌಂಗನಿ: ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಕಿವೀಸ್ ಗೆ ಈಗ ನಿಜವಾಗಿಯೂ ಸಮಸ್ಯೆ ಕಾಡುತ್ತಿದೆ. ತಂಡದ ಆಟಗಾರರು ಗಾಯದಿಂದ ತಂಡದಿಂದ ಹೊರಬೀಳುತ್ತಿದ್ದು, ಕಿವೀಸ್ ಚಿಂತೆಗೆ ಕಾರಣವಾಗಿದೆ.

Advertisement

ಇದೇ ಕಾರಣದಿಂದ ಮೊದಲ ಪಂದ್ಯದ ನಂತರ ತಂಡದಿಂದ ಬಿಡುಗಡೆಯಾಗಿದ್ದ ಇಶ್ ಸೋಧಿ ಮತ್ತು ಬ್ಲೇರ್ ಟಿಕ್ನರ್ ರನ್ನು ಮತ್ತೆ ತಂಡಕ್ಕೆ ಕರೆಸಲಾಗಿದೆ. ಇಬರಿಬ್ಬರು ಭಾರತ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯವಾಡಲು ಸರಣಿಯಿಂದ ಬಿಡುಗಡೆ ಮಾಡಲಾಗಿತ್ತು.

ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಲೀಜನ್ ಮತ್ತು ಟಿಮ್ ಸೌಥಿ ಅನಾರೋಗ್ಯದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ.

ಸ್ಕಾಟ್ ಕುಗ್ಲೀಜನ್ ವೈರಸ್ ನಿಂದ ಬಳಲುತ್ತಿದ್ದು, ಟಿಮ್ ಸೌಥಿ ಮತ್ತು ಸ್ಯಾಂಟ್ನರ್ ಹೊಟ್ಟೆ ನೋವಿನ ಕಾರಣದಿಂದ ತಂಡದಿಂದ ಹೊರಬಿದ್ದಿದ್ದಾರೆ.

ಎರಡನೇ ಪಂದ್ಯದಲ್ಲಿ ಟಿಮ್ ಸೌಥಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಬೌಲಿಂಗ್ ಮುಗಿಸಿ ನಂತರ ಮೈದಾನ ತೊರೆದಿದ್ದರು. ಬೆಂಚ್ ಕಾಯುತ್ತಿದ್ದ ಯಾವ ಆಟಗಾರನೂ ಆರೋಗ್ಯವಾಗಿರದ ಕಾರಣ ಕೋಚ್ ಲ್ಯೂಕಿ ರಾಂಕಿ ಫೀಲ್ಡಿಂಗ್ ಗೆ ಆಗಮಿಸಿದ್ದರು.

Advertisement

ನಾಯಕ ಕೇನ್ ವಿಲಿಯಮ್ಸನ್ ಗೆ ಇಂದು ಫಿಟ್ ನೆಸ್ ಟೆಸ್ಟ್ ನಡೆಯಲಿದ್ದು, ಫಿಟ್ ಆಗಿದ್ದರೆ ಮುಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next