Advertisement

ಇನ್ನಾದರೂ ಆದೀತೇ ಸ್ಥಳೀಯ ಸಂಸ್ಥೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ನಿಗದಿ?

11:28 PM May 20, 2023 | Team Udayavani |

ಚಿತ್ರದುರ್ಗ: ಭರ್ಜರಿ ಬಹುಮತದ ಮೂಲಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್‌ ಸರರದ ಹೆಗಲಿಗೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡುವ ಜವಾಬ್ದಾರಿ ಬಿದ್ದಿದೆ.

Advertisement

ರಾಜ್ಯದ 29 ನಗರಸಭೆಗಳು, 53 ಪುರಸಭೆ ಹಾಗೂ 23 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 105 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡೂವರೆ ವರ್ಷಗಳ ಮೊದಲ ಅವ ಧಿ 2023, ಎಪ್ರಿಲ್‌ 30ಕ್ಕೆ ಬಹುತೇಕ ಮುಕ್ತಾಯವಾಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಹುದ್ದೆಗೆ ಈಗ ಹೊಸದಾಗಿ ಮೀಸಲಾತಿ ನಿಗದಿ ಮಾಡಬೇಕಾಗಿದೆ.

ಆರಂಭದಲ್ಲೇ ಕಗ್ಗಂಟಾಗಿತ್ತು ಮೀಸಲಾತಿ
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾ ಧ್ಯಕ್ಷರ ಹುದ್ದೆಗೆ ಮೀಸಲು ನಿಗ ದಿ ಈ ಹಿಂದೆ 2018ರಲ್ಲೇ ಕಗ್ಗಂಟಾಗಿತ್ತು. ಚುನಾವಣೆ ನಡೆದು ಒಂದೂವರೆ ವರ್ಷವಾದರೂ ಸದಸ್ಯರಿಗೆ ಅ ಧಿಕಾರ ಸಿಕ್ಕಿರಲಿಲ್ಲ. ನಿಗ ದಿಯಾದ ಮೀಸಲಾತಿ ಪ್ರಶ್ನಿಸಿ ಅನೇಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಇದು ಅಂದಿನ ಸರಕಾರಕ್ಕೆ ತಲೆನೋವಾಗಿತ್ತು.
ಈಗ ಮತ್ತೆ ಅಂಥದ್ದೇ ಸಂಕಷ್ಟ ರಾಜ್ಯ ಕಾಂಗ್ರೆಸ್‌ ಸರಕಾರದ ಮುಂದಿದೆ. ಸರಕಾರ ಅಳೆದು ತೂಗಿ ಮೀಸಲಾತಿ ಜಾರಿ ಮಾಡಿದರೂ ಅದನ್ನು ಪ್ರಶ್ನೆ ಮಾಡಿ ತಡೆಯಾಜ್ಞೆ ತರುವವರು ಇರುತ್ತಾರೆ. ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡಿದವರಿಗೆ ಅ ಧಿಕಾರ ಕೊಡಿಸುವ ಅನಿವಾರ್ಯತೆ ಶಾಸ ಕರು, ಮಂತ್ರಿಗಳಿಗಿದೆ. ಈ ನಿಟ್ಟಿನಲ್ಲಿ ಮೀಸಲಾತಿ ತರುವಾಗ ಅನೇಕ ಕಸರತ್ತು ಮಾಡುವುದು ಹೊಸ ಸರಕಾರದ ಮುಂದಿರುವ ಸವಾಲು.

ಚುನಾವಣೆಯಲ್ಲಿ ಅದಲು-ಬದಲಾದ ಸದಸ್ಯರು!

ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಹೊತ್ತಿನಲ್ಲಿ ಸಾಕಷ್ಟು ಜನ ಸದಸ್ಯರು ಪಕ್ಷದಿಂದ ಪಕ್ಷಕ್ಕೆ ಅದಲು ಬದಲಾಗಿದ್ದಾರೆ. ಆಳುವ ಪಕ್ಷದ ಶಾಸಕರ ಜತೆಗಿದ್ದ ಸದಸ್ಯರು, ಚುನಾವಣೆಯಲ್ಲಿ ಮತ್ತೂಂದು ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಪಕ್ಷಗಳಲ್ಲಿ ಸದಸ್ಯರಿಗೆ ನೋಟಿಸ್‌ ನೀಡಿ ಪûಾಂತರ ನಿಷೇಧ ಕಾಯ್ದೆ ಅನ್ವಯ ಸದಸ್ಯತ್ವವನ್ನೇ ರದ್ದು ಮಾಡುವ ಚರ್ಚೆಗಳು ನಡೆಯುತ್ತಿವೆ. ಗೆದ್ದ ಶಾಸಕರು ತಮ್ಮ ಬೆಂಬಲಿಗರಿಗೆ ಅಧಿಕಾರ ಕೊಡಿಸಲು, ನಗರಸಭೆ, ಪುರಸಭೆಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ಇದು ಕೂಡ ಮೀಸಲಾತಿ ನಿಗದಿಗೆ ತೊಡಕಾಗಬಹುದು ಎನ್ನಲಾಗುತ್ತಿದೆ.

Advertisement

ಅಧಿಕಾರಿಗಳ ಹಸ್ತಕ್ಷೇಪಕ್ಕೆ ಆಕ್ಷೇಪ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಎರಡೂವರೆ ವರ್ಷದ ಮೊದಲ ಅವ ಧಿ ಎಪ್ರಿಲ್‌ 30ಕ್ಕೆ ಮುಕ್ತಾಯವಾಗುವಾಗ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿತ್ತು. ಇದೇ ಸಂದರ್ಭದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವೂ ಮೊಟಕಾಗಿತ್ತು. ಮೇ 15ಕ್ಕೆ ನೀತಿಸಂಹಿತೆ ತೆರವಾಗಿದೆ. ಈಗ ಜಿಲ್ಲಾ ಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಹಂತದ ಅ ಧಿಕಾರಿಗಳು ಈ ಸಂಸ್ಥೆಗಳ ಮೇಲುಸ್ತುವಾರಿಗಳಾಗಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಅವ ಧಿ ಮುಗಿದ ಕಾರಣಕ್ಕೆ ಅ ಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡುವ ಪದ್ಧತಿಯೇ ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಗರಸಭೆಗಳ ಆಯುಕ್ತರು, ಪಟ್ಟಣ ಪಂಚಾಯಿತಿ, ಪುರಸಭೆಗಳ ಮುಖ್ಯಾಧಿ ಕಾರಿಗಳು ಅಧ್ಯಕ್ಷರ ಸ್ಥಾನದಲ್ಲಿದ್ದು ಸದಸ್ಯರ ಜತೆಗೂಡಿ ಕರ್ತವ್ಯ ನಿರ್ವಹಿಸಬೇಕು. ಆದರೆ ಯಾರನ್ನೂ ಗಣನೆಗೆ ತೆಗೆದುಕೊಳ್ಳದೆ ಆಡಳಿತಾ ಕಾರಿಗಳನ್ನು ನೇಮಕ ಮಾಡುವ ವ್ಯವಸ್ಥೆಗೆ ಸಾಕಷ್ಟು ಜನ ಸದಸ್ಯರು ಆಕ್ಷೇಪ ಎತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next