Advertisement
ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ನೀವು (ಯಡಿಯೂರಪ್ಪ) ಮುಖ್ಯಮಂತ್ರಿಯಾದ ಮೂರೇ ದಿನಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ, ಇಬ್ಬರು ಅನ್ನದಾತರ ಸಾವಿಗೆ ಅಂದಿನ ನಿಮ್ಮ ಸರ್ಕಾರ ಕಾರಣವಾಯಿತು.
Related Articles
Advertisement
“ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ 70 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದನ್ನು ನೀವು ಮರೆತಿದ್ದೀರಿ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ದೇಶದ ಕೆಲವು ಕೈಗಾರಿಕೋದ್ಯಮಿಗಳಿಗೆ 1.30 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಮೋದಿ, ರೈತರ ಸಾಲ ಯಾಕೆ ಮನ್ನಾ ಮಾಡಿಲ್ಲ ಎಂದು ನೀವೇ ಮೋದಿ ಅವರನ್ನು ಕೇಳಿ ರಾಜ್ಯದ ರೈತರಿಗೆ ಉತ್ತರಿಸಬೇಕು.
ರೈತರ ಬಗ್ಗೆ, ರೈತರ ಸಮಸ್ಯೆ ಬಗ್ಗೆ ಚುನಾವಣಾ ಹೊಸ್ತಿಲಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಮಹದಾಯಿ ಹಾಗೂ ರೈತರ ಸಾಲ ಮನ್ನಾ ಮಾಡಲು ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ಮೋದಿ ಮನೆ ಎದುರು ಧರಣಿ ನಡೆಸಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು. ರೈತರ ಕುರಿತು ನಮ್ಮ ಸರ್ಕಾರಕ್ಕಿರುವ ಬದ§ತೆ ಪ್ರಶ್ನಿಸಲು ನಿಮಗೆ ಯಾವ ಅರ್ಹತೆಯೂ ಇಲ್ಲ ಎಂದು ದೂರಿದರು.
ಮಲತಾಯಿ ಧೋರಣೆ ಮರೆತಿಲ್ಲ: ಮಹಾರಾಷ್ಟ್ರದಲ್ಲಿ ಬರಗಾಲದ ಪರಿಹಾರ ನಿಧಿಗೆ ಮೋದಿ ಅವರು 8,500 ಕೋಟಿ ನೀಡಿದ್ದಾರೆ. ಕರ್ನಾಟಕದಲ್ಲಿ ಸತತ 4 ವರ್ಷಗಳಿಂದ ಭೀಕರ ಬರಗಾಲ ಇದ್ದರೂ ಮೋದಿ ಅವರು ಕೊಟ್ಟಿದ್ದು ಬರೀ 1,800 ಕೋಟಿ ರೂ. ಈ ಮಲತಾಯಿ ಧೋರಣೆಯನ್ನು ರಾಜ್ಯದ ಜನ ಮರೆತಿಲ್ಲ.
ಕಾವೇರಿ ಸಮಸ್ಯೆ ಬಂದಾಗ ಸರ್ವ ಪಕ್ಷ ಸಭೆ ಬಹಿಷ್ಕರಿಸಿ ಬಿಜೆಪಿ ರೈತರ ಸಮಸ್ಯೆ ಕುರಿತು ನಿರ್ಲಕ್ಷತನ ಮೆರೆದಿದ್ದನ್ನು ರೈತರು ಕಂಡಿದ್ದಾರೆ. ಮಹದಾಯಿ ಕುರಿತು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಳಿ ನಿಮ್ಮ ಹೆಸರಿಗೆ ಪತ್ರ ಬರೆಸಿ ನಾಟಕ ಮಾಡಿದ ನೀವು ಬಳಿಕ ಅದನ್ನು ಓದಲು ಹುಬ್ಬಳ್ಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರನ್ನು ಕರೆಸಿ ಡೊಂಬರಾಟ ನಡೆಸಿದ್ದನ್ನೂ ಜನ ಮರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.