Advertisement
ಈ ಸಂಬಂಧ ರಕ್ಷಣ ಸಚಿವಾಲಯವು ಮಾರ್ಚ್ ತಿಂಗಳಿ ನಲ್ಲಿಯೇ ಸೇನೆಯ ಮೂರೂ ವಿಭಾಗಗಳು, ಸಂಬಂಧ ಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಅಧಿಕೃತ ಸೂಚನೆಯನ್ನು ರವಾನಿಸಿದ್ದು, ಅಗತ್ಯ ಸಿದ್ಧತೆ ಗಳನ್ನು ಮಾಡಿಕೊಳ್ಳಲು ಆದೇಶಿಸಿದೆ ಎಂದು ಮೂಲಗಳು ಹೇಳಿವೆ. ಸರಕಾರ ಮತ್ತು ರಕ್ಷಣ ಸಚಿವಾಲಯಗಳ ಉನ್ನತ ಮಟ್ಟದಲ್ಲಿ ಈ ಬಗ್ಗೆ ಫೆಬ್ರವರಿ ತಿಂಗಳಿನಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ವರ್ಷದ ಗಣತಂತ್ರ ದಿನದ ಪಥಸಂಚಲನವನ್ನು ಸಂಪೂರ್ಣ ನಾರೀಶಕ್ತಿಮಯವಾಗಿಸಲು ತೀರ್ಮಾನಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಗಣತಂತ್ರ ದಿನದ ಪರೇಡ್‌ನಲ್ಲಿ ಕೆಲವು ಸಂಪೂರ್ಣ ಮಹಿಳಾ ತಂಡಗಳು, ಕೆಲವು ತಂಡಗಳಲ್ಲಿ ಪುರುಷರ ಜತೆಗೆ ಸ್ತ್ರೀಯರು, ಪುರುಷ ಮಿಲಿಟರಿ ತಂಡಗಳಿಗೆ ಮುಂದಾಳುವಾಗಿ ಮಹಿಳೆ- ಹೀಗೆ ನಾರೀ ಶಕ್ತಿಯನ್ನು ಅನಾವರಣಗೊಳಿಸುತ್ತ ಬರಲಾಗಿದೆ. ಪ್ರಸ್ತುತ ವರ್ಷದ ಜನವರಿ 26ರಂದು ನಡೆದ ಪರೇಡ್‌ಗೆ “ನಾರೀಶಕ್ತಿ’ಯೇ ಧ್ಯೇಯವಾಕ್ಯವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದಕ್ಕೂ ಹಿಂದೆ, ರಾಜಪಥವು “ಕರ್ತವ್ಯ ಪಥ’ವಾಗಿ ಮರು ನಾಮಕರಣಗೊಂಡ ವರ್ಷ, 2023ರಲ್ಲಿ 144 ಮಂದಿ ವಾಯು ಸೇನಾ ಯೋಧರ ತಂಡವನ್ನು ಮಹಿಳಾ ಅಧಿಕಾರಿ ಮುನ್ನಡೆಸಿದ್ದರು. ಅದೇ ವರ್ಷ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ತ್ರಿಪುರ ರಾಜ್ಯ ಗಳ ಸ್ತಬ್ಧಚಿತ್ರಗಳಿಗೆ “ನಾರಿಶಕ್ತಿ’ ಧ್ಯೇಯ ವಾಕ್ಯವಾಗಿತ್ತು.
Related Articles
Advertisement