Advertisement
ರಾಜ್ಯದಲ್ಲಿ 104 ಮಂದಿ ರೋಹಿಂಗ್ಯಾಗಳು ಸೇರಿದಂತೆ 175 ಮಂದಿಯನ್ನು ಅಕ್ರಮ ವಲಸಿಗರು ಎಂದು ಗುರುತಿಸಲಾಗಿದ್ದು, ಇವರನ್ನು ಡಿಟೆಂಷನ್ ಸೆಂಟರ್‌ನಲ್ಲಿ ಇರಿಸಲಾಗಿದೆ ಎಂದು ಸರ್ಕಾರ ಸದನ ದಲ್ಲಿ ಮಾಹಿತಿ ನೀಡಿದೆ. ಆದರೆ, ಪೊಲೀಸ್ ಇಲಾಖೆಯ ಗಮನಕ್ಕೆ ಬಾರದಂತೆ ಸಾಕಷ್ಟು ಮಂದಿ ನೆಲೆಸಿದ್ದು, ಇವರನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಬೇಕಿದೆ.
Related Articles
Advertisement
92 ಮಂದಿ ಗಡಿಪಾರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಕೆಲಸವನ್ನು ಕೈಗೊಂಡಿದ್ದು ಇದುವರೆಗೆ 92 ಮಂದಿ ಯನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ 50 ಮಂದಿ, ಮಂಗಳೂರು ನಗರದಲ್ಲಿ 41 ಮಂದಿ, ತುಮ ಕೂರಿನಲ್ಲಿ ಒಬ್ಬರು ಅಕ್ರಮವಾಗಿ ನೆಲೆಸಿದ್ದ ವಿದೇಶಿ ಯರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ.
ರಾಜ್ಯದಲ್ಲಿ 8862 ವಿದೇಶಿಯರು: ರಾಜ್ಯ ಗೃಹ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 8862 ಮಂದಿ ವಿದೇಶಿಯರು ವಾಸವಿದ್ದು, ಇವರಲ್ಲಿ 754 ಮಂದಿಯ ವೀಸಾ ಅವಧಿ ಮುಗಿದೆ. ಬೆಂಗಳೂರು ನಗರದಲ್ಲಿ 5656 ಮಂದಿ ವಿದೇಶಿಯರು ನೆಲೆಸಿದ್ದು, ಮೈಸೂರು ನಗರದಲ್ಲಿ 806, ಮೈಸೂರು ಗ್ರಾಮಾಂತರದಲ್ಲಿ 280 ಮಂದಿ ನೆಲೆಸಿದ್ದಾರೆ. ಇನ್ನು ರಾಮನಗರ ಜಿಲ್ಲೆಯಲ್ಲಿ 484 ಮಂದಿ, ಕಾರವಾರದಲ್ಲಿ 354 ಮಂದಿ, ಮಂಗಳೂರಿನಲ್ಲಿ 258 ಮಂದಿ ವಿದೇಶಿಯರು ನೆಲೆಸಿದ್ದಾರೆ.
501 ಮಂದಿ ವಿದೇಶಿಯರಿಂದ ಅಪರಾಧ ಕೃತ್ಯ : ರಾಜ್ಯದಲ್ಲಿ 501 ಮಂದಿ ವಿದೇಶಿಯರ ವಿರುದ್ಧ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖ ಲಾಗಿದೆ. ಡ್ರಗ್ಸ್, ಸುಲಿಗೆ, ಆನ್‌ಲೈನ್ ವಂಚನೆ, ಅಕ್ರಮ ವಲಸೆ ಇನ್ನಿತರ ಆರೋಪಗಳಡಿ ಇವರ ಮೇಲೆ ಪ್ರಕ ರಣ ಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲೇ ವಿದೇಶಿಯರು ಅತಿಹೆಚ್ಚು ಕಾನೂನು ಬಾಹೀರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು 451 ಮಂದಿ ಬೆಂ.ನಗರದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.
ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಿ, ಅವರ ದೇಶವನ್ನು ಗುರುತಿಸಿ ಅವರನ್ನು ಗಡಿಪಾರು ಮಾಡಲು ಇಲಾಖೆ ಕ್ರಮವಹಿಸಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿ ಸಲು ಪ್ರತಿ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ●ಜಿ.ಪರಮೇಶ್ವರ್, ಗೃಹಸಚಿವ (ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದು)
–ಸು.ನಾ.ನಂದಕುಮಾರ್