Advertisement

World Cup ಹಳಿ ಏರಿದ ಆಸ್ಟ್ರೇಲಿಯಕ್ಕೆ ಸವಾಲಾದೀತೇ ನೆದರ್ಲೆಂಡ್ಸ್‌?

11:37 PM Oct 24, 2023 | Team Udayavani |

ಹೊಸದಿಲ್ಲಿ: ಮತ್ತೆ ಒಂದು ತಂಡವಾಗಿ “ಫೈರ್‌ ಪವರ್‌’ ತೋರಲಾರಂಭಿಸಿದ ಆಸ್ಟ್ರೇಲಿಯ ಬುಧವಾರದ ವಿಶ್ವಕಪ್‌ ಮುಖಾ ಮುಖಿಯಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದೆ.

Advertisement

5 ಬಾರಿಯ ಚಾಂಪಿಯನ್‌ ಆಸ್ಟ್ರೇ ಲಿಯ ಅತ್ಯಂತ ನೀರಸವಾಗಿ ಈ ಕೂಟವನ್ನು ಆರಂಭಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಎಲ್ಲ ದಿಕ್ಕುಗಳಿಂದಲೂ ಟೀಕೆಗೆ ಒಳಗಾಗಿತ್ತು. ಆದರೆ ಅನಂತರ ಪುನರ್‌ ಸಂಘಟಿತಗೊಂಡು ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ಮತ್ತು ಪಾಕಿಸ್ಥಾನವನ್ನು ಉರುಳಿಸಿ 4ನೇ ಸ್ಥಾನಕ್ಕೆ ನೆಗೆದಿದೆ. ಇದೇ ಲಯದಲ್ಲಿ ಸಾಗಿ ದರೆ ನೆದರ್ಲೆಂಡ್ಸ್‌ ವಿರುದ್ಧ ಮೇಲುಗೈ ಸಾಧಿಸುವುದು ಅಸಾಧ್ಯವೇನಲ್ಲ ಎಂಬುದು ಈಗಿನ ಲೆಕ್ಕಾಚಾರ.

ಆದರೆ 12 ವರ್ಷಗಳ ಬಳಿಕ ವಿಶ್ವಕಪ್‌ ಆಡಲಿಳಿದ ನೆದರ್ಲೆಂಡ್ಸ್‌ ಸಾಮಾನ್ಯ ತಂಡವೇನಲ್ಲ. ಅದು ಇಲ್ಲಿ ಯಶಸ್ಸಿನ ಕತೆಯೊಂದನ್ನು ಬರೆದಿದೆ. ಈ ಕೂಟದ ಬಲಿಷ್ಠ ತಂಡವಾದ ದಕ್ಷಿಣ ಆಫ್ರಿಕಾವನ್ನು ಮಗುಚಿದ ಹೆಗ್ಗಳಿಕೆಯನ್ನು ಹೊಂದಿದೆ. ಹೀಗಾಗಿ ಆಸ್ಟ್ರೇಲಿಯ ಹೆಚ್ಚು ಎಚ್ಚರದಿಂದ ಇರಬೇಕಾದ ಅಗತ್ಯವಿದೆ.

ಆದರೆ ಪ್ಯಾಟ್‌ ಕಮಿನ್ಸ್‌ ಬಳಗ ವೀಗ ಒಂದು ತಂಡವಾಗಿ ಹೆಚ್ಚು ಬಲಿಷ್ಠಗೊಂಡಿದೆ. ಓಪನರ್‌ಗಳಾದ ಡೇವಿಡ್‌ ವಾರ್ನರ್‌, ಮಿಚೆಲ್‌ ಮಾರ್ಷ್‌, ಸ್ಪಿನ್ನರ್‌ ಆ್ಯಡಂ ಝಂಪ ಉತ್ತಮ ಫಾರ್ಮ್ ಪ್ರದರ್ಶಿಸಲಾ ರಂಭಿಸಿದ್ದಾರೆ. ಪಾಕಿಸ್ಥಾನ ವಿರುದ್ಧ ವಾರ್ನರ್‌-ಮಾರ್ಷ್‌ ಸೇರಿಕೊಂಡು 259 ರನ್‌ ಜತೆಯಾಟ ನಡೆಸಿದ್ದನ್ನು ಮರೆಯಲುಂಟೇ!
ಮಾರ್ಷ್‌ ಈ ಪಂದ್ಯಾವಳಿಯಲ್ಲಿ 351 ರನ್‌ ಪೇರಿಸಿದ್ದಾರೆ. ಇನ್ನು ಮೂರೇ ದಿನಗಳಲ್ಲಿ 37ಕ್ಕೆ ಕಾಲಿಡಲಿರುವ ಡೇವಿಡ್‌ ವಾರ್ನರ್‌ ಕ್ರಿಕೆಟ್‌ ಜೀವ ನದ ಆರಂಭಿಕ ದಿನದ ಫಾರ್ಮ್ ನಲ್ಲಿದ್ದಾರೆ. ಆರಂಭಕಾರ ಟ್ರ್ಯಾವಿಸ್‌ ಹೆಡ್‌ ಈ ಪಂದ್ಯಕ್ಕೆ ಮರಳುವ ಸಾಧ್ಯತೆ ಇರುವುದರಿಂದ ಮಾರ್ಷ್‌ ಮತ್ತೆ 3ನೇ ಕ್ರಮಾಂಕಕ್ಕೆ ಇಳಿಯಬೇಕಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಸ್ಮಿತ್‌, ಲಬುಶೇನ್‌ ಇನ್ನೂ ಸಿಡಿಯದ ಕಾರಣ ಇಲ್ಲಿ ಮಾರ್ಷ್‌ ಆಧಾರವಾಗಬೇಕಿದೆ. ಹಾಗೆಯೇ ಮ್ಯಾಕ್ಸ್‌ವೆಲ್‌, ಸ್ಟೋಯಿನಿಸ್‌ ಅವರಿಂದ ನೈಜ ಸಾಮರ್ಥ್ಯವಿನ್ನೂ ಹೊರಹೊಮ್ಮಿಲ್ಲ.

ನೆದರ್ಲೆಂಡ್ಸ್‌ ಹೋರಾಟ ನಡೆಸ ಬೇಕಾದರೆ ಆರಂಭಿಕರಾದ ಮ್ಯಾಕ್ಸ್‌ ಓ’ಡೌಡ್‌-ವಿಕ್ರಮ್‌ಜೀತ್‌ ಸಿಂಗ್‌ ಭದ್ರ ಅಡಿಪಾಯ ನಿರ್ಮಿಸಬೇಕಾದುದು ಅನಿವಾರ್ಯ. ಬಾಸ್‌ ಡಿ ಲೀಡ್‌, ಆರ್ಯನ್‌ ದತ್‌ ಮತ್ತು ಪಾಲ್‌ ವಾನ್‌ ಮೀಕರೆನ್‌ ಮಾತ್ರವೇ ಮಿಂಚಿದ್ದಾರೆ.

Advertisement

 ಆರಂಭ: ಅ. 2.00
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 02
 ಆಸ್ಟ್ರೇಲಿಯ ಜಯ: 02
 ನೆದರ್ಲೆಂಡ್ಸ್‌ ಜಯ: 00
 2007ರ ವಿಶ್ವಕಪ್‌ ಫ‌ಲಿತಾಂಶ-ಆಸ್ಟ್ರೇಲಿಯಕ್ಕೆ 229 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next