Advertisement

Lakshadweep ವಿವಾದ ಎಬ್ಬಿಸಿದ ಮಾಲ್ದೀವ್ಸ್‌ ಸರಕಾರಕ್ಕೇ ಕುತ್ತು?

01:15 AM Jan 10, 2024 | Team Udayavani |

ಹೊಸದಿಲ್ಲಿ: ವಿನಾಕಾರಣ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳ ಮಾಡಿದ ಮಾಲ್ದೀವ್ಸ್‌ ಸಂಪೂರ್ಣವಾಗಿ ಇಕ್ಕಟ್ಟಿಗೆ ಸಿಲುಕಿದೆ. ಆಡಳಿತಾ ರೂಢ ಪಿಎನ್‌ಸಿ ನಾಯಕ, ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು ವಿರುದ್ಧ ಅಲ್ಲಿನ ವಿಪಕ್ಷಗಳು ತಿರುಗಿಬಿದ್ದಿದ್ದು, ಸರಕಾರದ ವಿರುದ್ಧ ಅವಿ ಶ್ವಾಸ ಗೊತ್ತು ವಳಿ ಮಂಡಿ ಸಲು ಮುಂದಾಗಿವೆ.

Advertisement

ಮುಯಿಜ್ಜು ಸರಕಾರ ದೇಶವನ್ನು ಅತಂತ್ರಗೊಳಿಸುತ್ತಿದೆ, ಅದನ್ನು ಅಧಿಕಾರದಿಂದ ಕಿತ್ತೂಗೆಯಲು ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದು ವಿಪಕ್ಷ ಎಂಡಿಪಿ ನಾಯಕ ಅಜೀಮ್‌ ಅಲಿ ಆಗ್ರಹಿಸಿದ್ದಾರೆ. “ಎಂಡಿಪಿ ಪಕ್ಷ ದೇಶದ ವಿದೇಶಾಂಗ ನೀತಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದಕ್ಕೆ ಬದ್ಧವಾಗಿದೆ. ಯಾವುದೇ ನೆರೆಯ ದೇಶವನ್ನು ಏಕಾಂಗಿ ಮಾಡುವುದಕ್ಕೆ ನಾವು ಸಿದ್ಧವಿಲ್ಲ. ಅಧ್ಯಕ್ಷ ಮುಯಿಜ್ಜುರನ್ನು ಕಿತ್ತೂಗೆಯುವುದಕ್ಕೆ ನೀವು ಸಿದ್ಧವಿದ್ದೀರಾ? ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಾ’ ಎಂದು ಸ್ವಪಕ್ಷೀಯರನ್ನು ಅಲಿ ಪ್ರಶ್ನಿಸಿದ್ದಾರೆ.

ಮಾಲ್ದೀವ್ಸ್‌ನ ಪದಚ್ಯುತ ಸಚಿವರು ಜನಾಂ ಗೀಯ ಭೇದವನ್ನುಂಟು ಮಾಡುವ ಹೇಳಿಕೆ ನೀಡಿ ದ್ದಾರೆ. ಭಾರತೀಯ ಜನತೆಗೆ ಮಾಲ್ದೀವ್ಸ್‌ ಸರಕಾರ ಅಧಿಕೃತವಾಗಿ ಕ್ಷಮೆ ಕೇಳಬೇಕು ಎಂದು ಮಾಲ್ದೀವ್ಸ್‌ ಮಾಜಿ ಸ್ಪೀಕರ್‌ ಇವಾ ಅಬ್ದುಲ್ಲಾ ಆಗ್ರಹಿಸಿದ್ದಾರೆ.

ಸರಕಾರದ ವಿರುದ್ಧ ಮುಗಿಬಿದ್ದ ಪ್ರವಾಸೋದ್ಯಮ ಒಕ್ಕೂಟ
ಸಚಿವರ ಕೀಳು ಹೇಳಿಕೆಯು ತಮ್ಮ ಉದ್ಯಮಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡುತ್ತಲೇ ಮಾಲ್ದೀವ್ಸ್‌ನ ಪ್ರವಾಸೋದ್ಯಮ ಒಕ್ಕೂಟ ಅಲ್ಲಿನ ಸರಕಾರದ ವಿರುದ್ಧವೇ ಮುಗಿಬಿದ್ದಿದೆ. “ಭಾರತವು ನಮ್ಮ ಪ್ರವಾಸೋದ್ಯಮಕ್ಕೆ ಗಣನೀಯ ಕೊಡುಗೆ ನೀಡುತ್ತಾ ಬಂದಿದೆ. ಕೊರೊನಾ ಕಾಲದಲ್ಲೂ ನಾವು ಮತ್ತೆ ಚೇತರಿಕೆ ಕಾಣಲು ಭಾರತೀಯರೇ ಕಾರಣ. ಅಂತಹ ದೇಶದ ಬಗ್ಗೆ, ಅದರ ನಾಯಕರ ಬಗ್ಗೆ ನಮ್ಮ ಸರಕಾರದ ಉನ್ನತ ಹುದ್ದೆಯಲ್ಲಿರುವವರು ಕೀಳು ಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಮಾಲ್ದೀವ್ಸ್‌ ಪ್ರವಾಸೋದ್ಯಮಗಳ ಸಂಘ ಹೇಳಿದೆ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ಖಾಸಗಿ ಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನಾವು ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ವಿಟ್ಟುಕೊಳ್ಳಬೇಕು. ಸಮಯಕ್ಕೆ ತಕ್ಕಂತೆ ನಾವು ವರ್ತಿಸಬೇಕು, ನಾವು ನೆರೆಯ ವರನ್ನು ಬದಲಿಸಲು ಸಾಧ್ಯವಿಲ್ಲ.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧ್ಯಕ್ಷ

Advertisement

ಮೋದಿ ನಮ್ಮ ದೇಶದ ಪ್ರಧಾನಿ. ಇತರ ಯಾವುದೇ ದೇಶದ, ಯಾವುದೇ ಸ್ಥಾನದಲ್ಲಿರುವ ವ್ಯಕ್ತಿ, ನಮ್ಮ ದೇಶದ ಪ್ರಧಾನಿ ಮೇಲೆ ಕೀಳು ಹೇಳಿಕೆ ನೀಡಿ ದರೆ ನಾವದನ್ನು ಸಹಿಸಲ್ಲ. ನಮ್ಮ ದೇಶದ ಹೊರಗಿನ ವ್ಯಕ್ತಿಗಳು, ದೇಶದ ಪ್ರಧಾನಿ ವಿರುದ್ಧ ವಾಗಿ ಯಾವುದೇ ಮಾತುಗಳನ್ನಾಡಿ ದರೂ ನಾವು ಸಮ್ಮತಿಸುವುದಿಲ್ಲ.
ಶರದ್‌ ಪವಾರ್‌,ಎನ್‌ಸಿಪಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next