Advertisement

UV Fusion: ಆಗುತ್ತಿದೆಯೇ ಭಾವನೆಗಳ ಯುಗಾಂತ್ಯ….?

12:01 PM May 25, 2024 | Team Udayavani |

ಮನುಷ್ಯ ಬುದ್ಧಿ ಜೀವಿ, ತನ್ನ ವಿಚಾರವನ್ನು ಮಾತು, ಮನಸ್ಸಿನ ನಿರ್ಧಾರದ ಮೂಲಕ ಮಾಡೋ ಅಂತ ಜೀವಿ ಎನ್ನಬಹುದು. ಭಾವನೆಗಳನ್ನೂ ಕೇವಲ ಮನಸ್ಸಿಂದಲೇ ಅರ್ಥೈಸಿಕೊಳ್ಳುವಷ್ಟು ಶಕ್ತಿಶಾಲಿ ಎಲ್ಲವೂ ಸತ್ಯವೇ ಆದರೆ ಅದೇ ಮುಳ್ಳಾಗುತ್ತಿದೆಯೇ?

Advertisement

ಮಾತು ಮನ್ನಸ್ಸನ್ನ ನಿಗ್ರಹಿಸಿ ಭಾವನೆ ತುಂಬಿ ಗುಂಪು ಗುಂಪಾಗಿ ಇದ್ದ ನಾವು, ವಿಕಸನ ಹೊಂದುತ್ತಾ ಅದನ್ನೆಲ್ಲಾ ಕಳೆದು ಕೊಳ್ಳಲಿದ್ದೇವೋ ಅನ್ನೋ ಭಯ ಇದೆ. ನಾವು ಭಾವನೆಗಳೆ ಇಲ್ಲದ ಯಂತ್ರಮಾನವರಾಗುತ್ತಿದ್ದೇವೋ ಎಂಬುದು ಉತ್ತರವಿಲ್ಲದ ಪ್ರಶ್ನೆ? ಎನ್ನಬಹುದು.

ಸ್ವಾರ್ಥ ಉಪಯೋಗಕೆ ಇಲ್ಲದ ಆಸ್ತಿ ಅಂತಸ್ತು, ಅಧಿಕಾರ ಕೇಂದ್ರೀಕೃತವಾಗಿದ್ದೇ ಇದಕ್ಕೆಲ್ಲ ಕಾರಣ. ಕೇವಲ 25 ವರ್ಷದ ಹಿಂದೆಯೂ ಇಷ್ಟಾಗಿ ಇರದ ಈ ಒಂಟಿತನ ಸ್ವಾರ್ಥತೆ 2000ರ ಅನಂತರ ನಮ್ಮ ಬದುಕುವ ಶೈಲಿ ಅಥವಾ ಬದುಕಿನ ಒಂದು ಭಾಗವಾಗುತ್ತಿರುವುದು ಭಾವನ ಯುಗಾಂತ್ಯಕ್ಕೆ ಮತ್ತು ಹೊಸ ಜೈವಿಕ ಯಂತ್ರಮಾನವನ ಯುಗದ ಆರಂಭಕ್ಕೆ ಮುನ್ನುಡಿಯಾಗುತ್ತಿದೆ ಅನಿಸುತ್ತಿದೆ.

ನಮ್ಮ ಬದುಕು ಭಾವನೆಗಳಿಗಿಂತ ಪ್ರಾಪಂಚಿಕವಾಗಿ (materialistic) ಬದಲಾಗುತ್ತಿದೆ. ವಸ್ತುಗಳನ್ನ ಪ್ರೀತಿಸ್ತಾ ಇದ್ದೇವೆ ಭಾವನೆಗಳನ್ನ ಉಪಯೋಗಿಸ್ತಾ ಇದ್ದೇವೆ, ಎಲ್ಲಿಗೆ  ತಲುಪುತ್ತೇವೇ ಎಂಬುದು ತಿಳಿಯದಾಗಿದೆ.  ಸತ್ಯ ಎಂದರೆ ಬದುಕಿಗೆ ಜೀವನದ ಮೌಲ್ಯಗಳು ಮುಖ್ಯ. ಆ ಮೌಲ್ಯಗಳನ್ನು ಅಳೆಯುವ ಅಳತೆಗೋಲು ಭಾವನೆಪೂರಿತ ಮನಸ್ಸಾಗಿರ ಬೇಕು, ಮನಸ್ಸಿದ್ದರೆ ಮಾರ್ಗ ಎಂಬಂತೆ ನಮ್ಮೆಲ್ಲ ಆಗುಹೋಗುಗಳಿಗೆ ಮನಸಿನ ಸ್ಥಿತಪ್ರಜ್ಞತೆಯ ಏರಿಳಿತವೆ ಕಾರಣ.

ಸಂತೋಷ ನಿಮ್ಮನ್ನು ಸಿಹಿಯಾಗಿಸುತ್ತದೆ.

Advertisement

ಪ್ರಯೋಗಗಳು ನಿಮ್ಮನ್ನು ಬಲವಾಗಿಸುತ್ತದೆ !

ದುಃಖಗಳು ನಿಮ್ಮನ್ನು ಮನುಷ್ಯರಾಗಿಸುತ್ತದೆ!

ವೈಫ‌ಲ್ಯ ನಿಮ್ಮನ್ನು ವಿನಮ್ರವಾಗಿಸುತ್ತದೆ!

ಯಶಸ್ಸು ನಿಮ್ಮನ್ನು ಪ್ರಜ್ವಲಿಸುತ್ತದೆ!

ಆದರೆ ನಂಬಿಕೆ ಮಾತ್ರ ನಿಮ್ಮನ್ನು ಮುನ್ನುಗಿಸುತ್ತದೆ..!

ಕೆಲವೊಮ್ಮೆ ನಮ್ಮ ಜೀವನದಲ್ಲಿ ನಾವು ತೃಪ್ತರಾಗುವುದಿಲ್ಲ, ಆದರೆ ಈ ಜಗತ್ತಿನಲ್ಲಿ ಅನೇಕ ಜನರು ನಮ್ಮ ಜೀವನವನ್ನು ನಡೆಸುವ ಕನಸು ಕಾಣುತ್ತಿದ್ದಾರೆ. ಜಮೀನಿನಲ್ಲಿರುವ ಮಗು ವಿಮಾನವು ಮೇಲೆ ಹಾರುವುದನ್ನು ನೋಡಿದರೆ, ಪೈಲಟ್‌ ವಿಮಾನದಿಂದ ತೋಟದ ಮನೆಯನ್ನು ನೋಡುತ್ತಾನೆ ಮತ್ತು ಕನಸುಗಳ ಮನೆಗೆ ಹಿಂದಿರುಗುತ್ತಾನೆ. ಹೀಗೆ ನಮ್ಮ ತೃಪ್ತಿಕರ ಜೀವನ ಅರಸುವ ಸಲುವಾಗಿ

ಮನುಷ್ಯ ಯಾಂತ್ರಿಕವಾಗಿ ವರ್ತಿಸುವುದನ್ನೇ ರೂಢಿಸಿಕೊಂಡಿರುವ ಸಾಧ್ಯತೆ ಇದೆ.

ಹೀಗಿರಲಿ ಸುಖೀ ಜೀವನ ಸರಳವಾಗಿ ಬದುಕಿ, ಸಂತೋಷವಾಗಿ ಬದುಕಿನ ಪ್ರತೀ ಕ್ಷಣ ಆನಂದಿಸೋಣ.  ಯಾವುದೇ ಸಂಬಂಧದಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಬಹಳ ಮುಖ್ಯ.  ಸಂತೋಷ ಹೊರಗೆಲ್ಲೂ ಇಲ್ಲ ನಮ್ಮೊಳಗೇ ಇದೆ. ಅದನ್ನು ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು.

-ಮಂಜುನಾಥ್‌ ಕೆ. ಆರ್‌.

ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next