Advertisement
ದೇವರ ಗುಂಡಿ ಎಂದ ತತ್‌ಕ್ಷಣ ನೆನಪಾಗುವುದು ಇಲ್ಲಿಯ ಜಲಪಾತ. ಈ ಜಲಪಾತ ದೇವರ ಗುಂಡಿ ಜಲಪಾತ ಎಂದೇ ಈಗ ಪ್ರಸಿದ್ಧಿಯಾಗಿದೆ. ಜಲಪಾತ ನೋಡಲು ನೂರಾರು ಪ್ರವಾಸಿ ಪ್ರೇಮಿಗಳು, ಪ್ರಕೃತಿಪ್ರಿಯರು ಆಗಮಿಸುತ್ತಾರೆ. ಹೆಚ್ಚಿನವರು ದೇವರ ಗುಂಡಿ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ನಡೆದುಕೊಂಡು ದೇವರ ಗುಂಡಿ ಜಲಪಾತದತ್ತ ಸಾಗುತ್ತಾರೆ. ದೇವರ ಗುಂಡಿಯ ತನಕ ಕಚ್ಚಾ ರಸ್ತೆ ಇದೆ. ಇದರಲ್ಲಿ ಎಲ್ಲ ವಾಹನಗಳು ಸಂಚರಿಸಲು ಅಸಾಧ್ಯ. ರಸ್ತೆ ಅಭಿವೃದ್ಧಿ ಮಾಡಿದರೆ ಹೆಚ್ಚಿನ ವಾಹನಗಳು ಜಲಪಾತದ ತನಕ ಸಂಚರಿಸಲಿವೆ. ಇದರಿಂದ ಪ್ರಕೃತಿ ಪ್ರೇಮಿಗಳು ಜಲಪಾತವನ್ನು ನೋಡಲು ಬಹುಬೇಗ ತಲುಪಬಹುದು. ಅಲ್ಲದೆ ಸಮಯದ ಉಳಿತಾಯವಾಗುತ್ತದೆ. ಜತೆಗೆ ವಯೋವೃದ್ಧರು ಕೂಡ ಜಲಪಾತ ನೋಡಲು ಸಾಧ್ಯವಾಗುತ್ತದೆ.
ಈ ರಸ್ತೆ ಅಭಿವೃದ್ಧಿಯಾದರೆ ಸ್ಥಳೀಯರಿಗೆ ತುಂಬಾ ಪ್ರಯೋಜನ ಇದೆ. ಈ ಭಾಗದಲ್ಲಿ ಹೆಚ್ಚಿನವರು ಪರಿಶಿಷ್ಟ ಪಂಗಡದ ಜನರೇ ವಾಸವಾಗಿದ್ದು, ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಅವರು ಅನೇಕ ವರ್ಷಗಳಿಂದ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಭಾಗದಿಂದ ಅನೇಕ ಮಕ್ಕಳು ಶಾಲಾ-ಕಾಲೇಜುಗಳಿಗೆ ಈ ರಸ್ತೆಯ ಮೂಲಕವೇ ತೆರಳುತ್ತಾರೆ. ಧಾರ್ಮಿಕ ಹಿನ್ನೆಲೆ
ದೇವರ ಗುಂಡಿ ಜಲಪಾತ ಸುಳ್ಯ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ದೇವರಗುಂಡಿಯಲ್ಲಿ ವಿಷ್ಣುವು ಮತ್ಸ್ಯರೂಪ ತಾಳಿದ ಸ್ಥಳ ಸೇರಿದಂತೆ ಇತರ ಧಾರ್ಮಿಕ ನಂಬಿಕೆಗಳು ಸ್ಥಳೀಯ ಜನರಲ್ಲಿವೆ.
Related Articles
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದ ಕಚೇರಿಯಿಂದ ತೊಡಿಕಾನ ದೇವಾಲಯ ಬಳಿಯ ದೇವರ (ಮಹಶೀರ್) ಮೀನು ಗುಂಡಿ ಹಾಗೂ ದೇವರಗುಂಡಿ ಜಲಪಾತದ ಪರಿಸರ ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ ಇಲಾಖೆ ಇದು ನಮ್ಮ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂಬ ಕಾರಣದಿಂದ ಮನವಿಯನ್ನು ತಿರಸ್ಕರಿಸಿದೆ. ಸ್ಥಳೀಯ ಗ್ರಾಮ ಪಂಚಾಯತ್‌ನಲ್ಲಿ ತೊಡಿಕಾನ ಪ್ರವಾಸಿ ತಾಣವಾಗಿದೆ ಎಂದು ಬರೆಯಿಸಿಕೊಂಡು ಮತ್ತೆ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯು ನಿರ್ಲಕ್ಷ್ಯ ತೋರಿದೆ. ದೇವರ ಗುಂಡಿ ಪರಿಸರ ಸೇರಿದಂತೆ ರಸ್ತೆಯನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಲು ಅವಕಾಶ ಇದೆ ಎಂದು ಸ್ಥಳೀಯರ ಮಾತಾಗಿದೆ.
Advertisement
ಮನವಿಗೆ ಸ್ಪಂದನೆ ಸಿಕ್ಕಿಲ್ಲತೊಡಿಕಾನ ದೇಗುಲದ ವತಿ ಯಿಂದ ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಅನುದಾನ ಕೋರಿ ಅರ್ಜಿ ಬರೆಯಲಾಗಿತ್ತು. ನಮ್ಮ ಸ್ಥಳ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಕಾರಣ ಮನವಿಗೆ ಸ್ಪಂದನೆ ದೊರೆತಿಲ್ಲ. ಪ್ರವಾ ಸೋದ್ಯಮ ನಿಯಮದ ಪ್ರಕಾರ ನಮ್ಮ ಗ್ರಾ.ಪಂ.ನಲ್ಲಿ ತೊಡಿಕಾನವು ಪ್ರವಾಸಿ ತಾಣ ಎಂದು ನಿರ್ಣಯ ಮಾಡಿಸಿ ಮತ್ತೆ ಇಲಾಖೆಗೆ ಬರೆಯಲಾಗಿದೆ.
– ಆನಂದ ಕಲ್ಲಗದ್ದೆ, ಮ್ಯಾನೇಜರ್, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲ ಅಭಿವೃದ್ಧಿ ಅಗತ್ಯ
ತೊಡಿಕಾನ ದೇವರಗುಂಡಿ ರಸ್ತೆ ಅಗತ್ಯವಾಗಿ ಅಭಿವೃದ್ಧಿಯಾಗಬೇಕು. ಇಲ್ಲಿಗೆ ದಿನನಿತ್ಯ ಅನೇಕ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ.
– ಮನೋಜ್, ಸ್ಥಳೀಯ ತೇಜೇಶ್ವರ್ ಕುಂದಲ್ಪಾಡಿ