Advertisement
ಹೇಗಿದೆ ಬೆಂಗಳೂರು ತಂಡ?: ಕಣಕ್ಕಿಳಿಯುತ್ತಿರುವ 8 ಪ್ರಮುಖ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದು. ವಿಶ್ವವಿಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕ. ಸೈಮನ್ ಕಾಟಿಚ್ ಕೋಚ್. ಈ ಸಲವಾದರೂ ಕಪ್ ಗೆಲ್ಲಲೇಬೇಕು ಎನ್ನುವ ಕನಸಿನೊಂದಿಗೆ ಆರ್‌ಸಿಬಿ ಕಣಕ್ಕಿಳಿಯಲಿದೆ. ಒಟ್ಟಾರೆ 12 ವರ್ಷದ ಪ್ರಶಸ್ತಿ ಬರವನ್ನು ನೀಗಿಸುವ ಸಂಕಲ್ಪವನ್ನು ಆರ್‌ಸಿಬಿ ಮಾಡಿದೆ. ಈ ವರ್ಷ ಹರಾಜಿನಲ್ಲಿ ಆರ್‌ಸಿಬಿ ಒಟ್ಟು 8 ಹೊಸ ಆಟಗಾರರನ್ನು ಖರೀದಿಸಿದೆ. ಬಲಿಷ್ಠ ಆಟಗಾರರಲ್ಲಿ ಏರಾನ್ ಫಿಂಚ್, ಕ್ರಿಸ್ ಮೋರಿಸ್ ಖ್ಯಾತ ನಾಮರು ಎನ್ನುವುದು ವಿಶೇಷ. ಕೊಹ್ಲಿ, ಎಬಿಡಿ ವಿಲಿಯರ್, ಮೋಯಿನ್ ಅಲಿಯಂತಹ ತಾರೆಯರ ಜತೆಗೆ ಇವರಿಬ್ಬರು ಸೇರಿಕೊಂಡಿರುವುದು ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಬಲ್ಲದು.
Related Articles
Advertisement
ಪ್ರಶಸ್ತಿ ಬರ ನೀಗುವುದೇ?: ಆರ್‌ಸಿಬಿ 2008ರಲ್ಲಿ ಮೊದಲ ಆವೃತ್ತಿಯಲ್ಲಿ 7ನೇ ಸ್ಥಾನ ಡೆದುಕೊಂಡಿದ್ದು 2009ರಲ್ಲಿ ಫೈನಲ್‌ಗೆ ಪ್ರವೇಶಿಸಿ ರನ್ನರ್‌ಅಪ್ ಆಗಿತ್ತು. ವಾಂಡೆರರ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳಿಂದ ಸೋಲು ಅನುಭವಿಸಿತ್ತು. 2010ರಲ್ಲಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಮಾಡಿ ಅಲ್ಲಿ ಎಡವಿತ್ತು. 2011ರಲ್ಲಿ 2ನೇ ಸಲ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ತಂಡವು 58 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. 2012ರಲ್ಲಿ 5ನೇ , 2013ರಲ್ಲಿ 5ನೇ , 2014ರಲ್ಲಿ 7ನೇ , 2015ರಲ್ಲಿ ಪ್ಲೇಆಫ್ನಲ್ಲಿ 3ನೇ ಸ್ಥಾನ ಪಡೆದಿರುತ್ತದೆ.
ಆರ್‌ಸಿಬಿ 2016ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ 8 ರನ್‌ಗಳಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಅನುಭವಿಸಿತ್ತು. ಮತ್ತೂಂದು ಅವಕಾಶ ಹಾಳು ಮಾಡಿಕೊಂಡಿತ್ತು. ಆನಂತರದ ಮೂರು ಆವೃತ್ತಿಗಳಲ್ಲಿ ಕ್ರಮವಾಗಿ 8, 6 ಹಾಗೂ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಸಲ ನಿರೀಕ್ಷೆ ಗರಿಗೆದರಿದೆ. ಕಪ್ ನಮೆªà ಎಂದು ಅಭಿಮಾನಿಗಳು ಗುನುಗಲು ಶುರು ಮಾಡಿದ್ದಾರೆ, ಇದನ್ನು ಆರ್‌ಸಿಬಿ ನಿಜ ಮಾಡುವುದೇ? ಎನ್ನುವುದನ್ನು ಕಾದು ನೋಡಬೇಕಿದೆ.
ಲಾಂಛನ ಬದಲಿಸಿದ ಆರ್‌ಸಿಬಿ: ಆರ್‌ಸಿಬಿ 13ನೇ ಆವೃತ್ತಿ ಐಪಿಎಲ್‌ನಲ್ಲಿ ಹೊಸ ಲಾಂಛನದೊಂದಿಗೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಹೊಸ ಜೋಶ್ ಆರ್‌ಸಿಬಿಗೆ ಅದೃಷ್ಟ ತರಬಹುದೇ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ. ಆಸಿಬಿ ಲಾಂಛನ ಬದಲಿಸಿರುವುದು ಇದು ಮೊದಲೇನಲ್ಲ. ಮೊತ್ತ ಮೊದಲ ಬಾರಿಗೆ ಬೆಂಗಳೂರು ತಂಡ 2015ರಲ್ಲಿ ಲಾಂಛನ ಬದಲಾಯಿಸಿಕೊಂಡಿತ್ತು. ಅದಾದ ಬಳಿಕ 2016ರಿಂದ 2019ರ ತನಕ ಮತ್ತೂಂದು ಬಾರಿಗೆ ಲಾಂಛನ ಬದಲಾಯಿಸಲಾಯಿತು. ಇದೀಗ 2020ಕ್ಕೆ ಪೂರ್ಣ ಸಿಂಹದ ಲಾಂಛನವನ್ನು ಬಳಸಲಾಗಿದೆ. ಆರ್‌ಸಿಬಿ ಫ್ರಾಂಚೈಸಿ ಫ್ರೆಶ್ ನಿರ್ಧಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದು ಸದ್ಯ ಕುತೂಹಲವಾಗಿದೆ.
ಆರ್‌ಸಿಬಿಗೆ ತಾರೆಯರ ಬಲ: ಬೆಂಗಳೂರು ತಂಡವು ಸಿನಿಮಾ ಲೋಕದ ದಿಗ್ಗಜರನ್ನು ರಾಯಭಾರಿಯಾಗಿ ಹೊಂದಿದೆ. ಅದರಲ್ಲೂ ಬಾಲಿವುಡ್‌ನ ಖ್ಯಾತ ನಟರಾದ ಸಲ್ಮಾನ್ ಖಾನ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ, ಕಿಚ್ಚ ಸುದೀಪ್ ಹಾಗೂ ರಚಿತಾ ರಾಮ್ ಆರ್‌ಸಿಬಿಯನ್ನು ಚಿಯರ್ ಮಾಡಲಿದ್ದಾರೆ.
ಆರ್‌ಸಿಬಿ ಐಪಿಎಲ್ ಹಾದಿಇಸವಿ ಸ್ಥಾನ
2008 7ನೇ ಸ್ಥಾನ
2009 ರನ್ನರ್‌ಅಪ್
2010 4ನೇ ಸ್ಥಾನ
2011 ರನ್ನರ್‌ಅಪ್
2012 5ನೇ ಸ್ಥಾನ
2013 5ನೇ ಸ್ಥಾನ
2014 7ನೇ ಸ್ಥಾನ
2015 3ನೇ ಸ್ಥಾನ
2016 ರನ್ನರ್‌ಅಪ್
2017 8ನೇ ಸ್ಥಾನ
2018 6ನೇ ಸ್ಥಾನ
2019 8ನೇ ಸ್ಥಾನ