ಚುನಾವಣೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವುದೇ ಅಡಚಣೆಯಾಗದಂತೆ ಚುನಾವಣೆಗೂ ಮುನ್ನವೇ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ ನಡೆಸಿದೆ.
Advertisement
ಪರೀಕ್ಷಾ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಮಂಡಳಿಯ ಅಧಿಕಾರಿಗಳು ರಾಜ್ಯದ ಮುಖ್ಯ ಚುನಾವಣಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿದ್ದು, ಚುನಾವಣಾಧಿಕಾರಿಗಳು, ಚುನಾವಣಾ ಪ್ರಕ್ರಿಯೆಆರಂಭಕ್ಕೂ ಮುನ್ನವೇ ಪರೀಕ್ಷೆ ಪೂರ್ಣಗೊಳಿಸುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆಗೂ
ಮೊದಲೇ ಅಂದರೆ, ಬಹುತೇಕ ಮಾರ್ಚ್ ತಿಂಗಳಲ್ಲೇ 10ನೇ ತರಗತಿ ಪರೀಕ್ಷೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಪರೀಕ್ಷೆ ನಡೆಸಲು ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಪರೀಕ್ಷಾ ಮಂಡಳಿ ಮಾಡಿಕೊಳ್ಳುತ್ತಿದೆ. 2018ರ ಮೇ 13ಕ್ಕೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿ ಮುಗಿಯಲಿದೆ. ಒಂದು ವೇಳೆ ಅವಧಿಗೂ ಮೊದಲೇ ಚುನಾವಣೆ ನಡೆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ವೇಳಾಪಟ್ಟಿ ಯಲ್ಲಿ ಸಾಕಷ್ಟು ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.
ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಸಿಸಿ ಕ್ಯಾಮರಾ ಲಭ್ಯವಿರುವ ಶಾಲೆಗಳನ್ನೇ ಮೊದಲ ಆದ್ಯತೆಯಾಗಿ ಪಡೆದುಕೊಳ್ಳುವ ಕಾರ್ಯವೂ ನಡೆಯುತ್ತಿದೆ.
Related Articles
ಚುನಾವಣಾ ಮತಗಟ್ಟೆ ಸ್ಥಾಪನೆಗೆ ಶಾಲಾ ಕೊಠಡಿಗಳನ್ನು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಾಗಿ ಬಳಸಿಕೊಳ್ಳಲಾ
ಗುತ್ತದೆ. ಅಷ್ಟೇ ಅಲ್ಲ, ಚುನಾವಣೆಯ ಮತಗಟ್ಟೆ ಸಿಬ್ಬಂದಿಯನ್ನಾಗಿ ಶಿಕ್ಷಕರನ್ನೇ ಅತ್ಯಧಿಕ ಸಂಖ್ಯೆಯಲ್ಲಿ
ನಿಯೋಜಿಸಲಾಗುತ್ತದೆ. ಪರೀಕ್ಷೆಗೂ ಸಹ ಶಾಲಾ ಕೊಠಡಿ ಮತ್ತು ಶಿಕ್ಷಕರ ಅಗತ್ಯತೆ ಇರುವುದರಿಂದ ಏಕಕಾಲಕ್ಕೆ
ಚುನಾವಣೆ ಮತ್ತು ಪರೀಕ್ಷೆ ನಡೆಸುವುದು ಕಷ್ಟಕರ.
Advertisement
ಏಕಕಾಲದಲ್ಲಿ ಪರೀಕ್ಷೆ ?ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಏಕಕಾಲ ದಲ್ಲಿ ನಡೆಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು ಆಸಕ್ತಿ ಹೊಂದಿದ್ದಾರೆ. ಆದರೆ, ಈ ಬಗ್ಗೆ ಪಿಯು ಇಲಾಖೆ ಅಥವಾ ಎಸ್ಸೆಸ್ಸೆಲ್ಸಿ ಬೋರ್ಡ್ ಅಧಿಕಾರಿಗಳೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿಲ್ಲ. ಯಾವುದೇ ಪೂರ್ವಸಿದ್ಧತೆ ಇಲ್ಲದೆ, 15 ಲಕ್ಷ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪರೀಕ್ಷೆ ನಡೆಸುವುದು ಕಷ್ಟಸಾಧ್ಯ. ಪ್ರಶ್ನೆ ಪತ್ರಿಕೆ ಸೋರಿಕೆ ಯನ್ನು ತಡೆಯುವ ನಿಟ್ಟಿನಲ್ಲಿ ಇದು ಒಳ್ಳೆಯ ಕ್ರಮವಾದರೂ, ಅನುಷ್ಠಾನ ಅಷ್ಟು ಸುಲಭವಿಲ್ಲ. ರಾಜುಖಾರ್ವಿ ಕೊಡೇರಿ