Advertisement

ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿ ಇದೆ

03:25 PM Mar 01, 2017 | Team Udayavani |

ಹುಬ್ಬಳ್ಳಿ: ಮಹಾಪೌರರಾಗಿ ಕಳೆದೊಂದು ವರ್ಷದಲ್ಲಿ ವಿವಿಧ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮಹಾನಗರದ ಅಭಿವೃದ್ಧಿಗೆ ಶ್ರಮಿಸಿದ ಸಂತಸ ಇದೆ ಎಂದು ಮಹಾಪೌರ ಮಂಜುಳಾ ಅಕ್ಕೂರ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತ್ಛತೆ ಹಾಗೂ ಮತ್ತು ಸ್ಮಾರ್ಟ್‌ಸಿಟಿಗೆ ಹೆಚ್ಚು ಒತ್ತು ನೀಡಲಾಗಿತ್ತು.

Advertisement

ಒಂದು ವರ್ಷದ ಅವಧಿಯಲ್ಲಿ ನಗರದ ಎಲ್ಲ ವಾರ್ಡ್‌ ಗಳಿಗೆ ಭೇಟಿ, ವಾರ್ಡ್‌ಗಳಲ್ಲಿ ಸ್ವತ್ಛತೆಗೆ ಒತ್ತು, ಪಾಲಿಕೆ ಪೌರಕಾರ್ಮಿಕರ ನಿರ್ವಹಣೆ ವಾರ್ಡ್‌ ಗಳಲ್ಲಿ ಕಸ ವಿಲೇವಾರಿಗೆ ಟಿಪ್ಪರ್‌ ಆಟೋ ವಿತರಣೆ, ಆಟೋಗಳಿಗೆ ಜಿಪಿಎಸ್‌ ಅಳವಡಿಕೆ, ಘನ ತಾಜ್ಯ ನಿರ್ವಹಣೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು. 

ರಾಜ್ಯ ಸರಕಾರದ 4ನೇ 100 ಕೋಟಿ ಅನುದಾನದಲ್ಲಿ ಈಗಾಗಲೇ ಸುಮಾರು 70 ಕೋಟಿ ರೂ.ಗಳ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಅವಳಿನಗರಕ್ಕೆ ಕುಡಿಯುವ ನೀರಿನ ಕೊರತೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ, ಕುಡಿಯುವ ನೀರಿನ ಅದಾಲತ್‌, ಕೊಳವೆಬಾವಿಗಳ ದುರಸ್ತಿ, ಅವಶ್ಯ ಇದ್ದ ಪ್ರದೇಶಗಳಲ್ಲಿ ಕೊಳವೆ ಕೊರೆಸಿ ನೀರಿನ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ  ಎಂದರು. 

ಅವಳಿನಗರದಾದ್ಯಂತ ಈಗಾಗಲೇ 24×7 ನೀರಿನ ಸರಬರಾಜು ಪೈಪ್‌ಲೈನ್‌ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದು. ಅವಳಿನಗರದಲ್ಲಿ ರಸ್ತೆ, ಉದ್ಯಾನವನ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ ನೀಡಲಾಗಿದೆ. ಸಮುದಾಯ ಭವನ, ಉದ್ಯಾನವನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ.

ನನ್ನ ಅವಧಿಯಲ್ಲೇ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಕೆ ಪ್ರಕ್ರಿಯೆ ಮಹತ್ವದ ಹಂತಕ್ಕೆ ತಲುಪಿದೆ ಎಂದರು. ಪಾಲಿಕೆಯಲ್ಲಿ ಮಹಿಳಾ ಸಬಲೀಕರಣದ ಹಣದಲ್ಲಿ ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿಮಹಿಳಾ ಜಿಮ್‌ ಪ್ರಾರಂಭಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಸದ್ಯ ಕಡತ ಆಯುಕ್ತರ ಬಳಿ ಇದೆ.

Advertisement

ಮಹಾನಗರ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನವನಗರದಲ್ಲಿ ಪೌರಕಾರ್ಮಿಕರಿಗೆ ವಸತಿ ಕಲ್ಪಿಸಲಾಗಿದ್ದು ಅದರ ಹಕ್ಕುಪತ್ರ ವಿತರಿಸಲಾಗಿದೆ. ಅವಳಿನಗರದ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರ 460 ಕೋಟಿ ಅನುದಾನ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ 368 ಕೋಟಿ ಹಣ ಬಿಡುಗಡೆಯಾಗಿದ್ದು ಮುಂದಿನ ತಿಂಗಳಲ್ಲಿ ಟೆಂಡರ್‌ ಕರೆಯಲಾಗುತ್ತಿದೆ ಎಂದರು. 

ಅವಳಿನಗರದಲ್ಲಿ ಹಂದಿ ಕಾರ್ಯಾಚರಣೆ ಸತತವಾಗಿ ಚಾಲನೆಯಲ್ಲಿದೆ. ದಕ್ಷಿಣ ಕೋರಿಯಾ ಪ್ರವಾಸದಲ್ಲಿ ಅಲ್ಲಿನ ರಸ್ತೆಗಳು, ಅಲ್ಲಿನ ವ್ಯವಸ್ಥೆಯೇ ಅವಳಿನಗರದಲ್ಲಿ ಆಗಬೇಕು ಎಂಬುದು ನನ್ನಾಸೆ. ಸದ್ಯ ಪಾಲಿಕೆ ಸದಸ್ಯ ಮಹೇಶ ಬುರ್ಲಿ ಹಾಗೂ ನನ್ನ ವಾರ್ಡ್‌ನಲ್ಲಿ ಅದೇ ಮಾದರಿ ರಸ್ತೆಗಳನ್ನು ಮಾಡಿಯೇ ತೀರುವುದಾಗಿ ತಿಳಿಸಿದರು. ನಾಡಿದ್ದು ವಿವಿಧ ಕಾಮಗಾರಿಗಳಿಗೆ 

ಭೂಮಿಪೂಜೆ: ಮಾ.3 ರಂದು ನಗರದ ಈದ್ಗಾ ಮೈದಾನ, ಪಿರಾಮಿಡ್‌ ಹಾಗೂ ಜಿಗಳೂರ ಕಲ್ಯಾಣ ಮಂಟಪದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next