ಮುಂಬೈ: ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಹಾಗೂ ಕೋಲ್ಕತ ನೈಟ್ರೈಡರ್ಸ್ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ನಡುವೆ ಪ್ರಣಯ ಪ್ರಸಂಗ ವೇನಾದರೂ ಇದೆಯಾ? ಹೀಗೊಂದು ಗುಮಾನಿ ಈಗ ಹುಟ್ಟಿಕೊಂಡಿದೆ.
ಕೆಲವು ದಿನಗಳ ಹಿಂದೆ ಸಾರಾ ತಮ್ಮದೊಂದು ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಿಸಿ, ಅದರಡಿ “ಐ ಸ್ಪೈ’ ಎಂದು ಬರೆದಿದ್ದರು. ಅದಾದ ಮೇಲೆ ಶುಬ್ಮನ್ ಗಿಲ್ ತಮ್ಮ ಚಿತ್ರವನ್ನು ಪ್ರಕಟಿಸಿ, ತಾವೂ “ಐ ಸ್ಪೈ’ ಎಂದು ಬರೆದುಕೊಂಡಿದ್ದರು. ಇದನ್ನು ಸಾಮಾಜಿಕ ತಾಣಿಗರು ಆಗಲೇ ಗುರ್ತಿಸಿದ್ದರು.
ಬುಧವಾರ ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಹೊಡೆತವನ್ನು ತಡೆಯಲು ಗಿಲ್ ಚಿಮ್ಮಿದ್ದರು. ಆ ಚಿತ್ರವನ್ನು ಹೃದಯದ ಇಮೋಜಿಯೊಂದಿಗೆ ಸಾರಾ ಪ್ರಕಟಿಸಿದರು. ಅಲ್ಲಿಗೆ ಇಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಜೋರಾಗಿದೆ.
ಇದನ್ನೂ ಓದಿ: IPL 2020: ಇಂದು ಡೆಲ್ಲಿ- ಚೆನ್ನೈಕದನ ಕುತೂಹಲ
ಶುಬಮನ್ ಗಿಲ್ ಕೋಲ್ಕತ್ತಾ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡುತ್ತಿದ್ದು, ಸುನೀಲ್ ನರೈನ್ ಜೊತೆ ಕಣಕ್ಕಿಳಿಯುತ್ತಾರೆ. ಮುಂಬೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗಿಲ್ ಅಗ್ಗಕ್ಕೆ ವಿಕೆಟ್ ಒಪ್ಪಿಸಿದ್ದರು.