Advertisement

ರಾಹುಲ್‌ ವಿರುದ್ಧ ಹಕ್ಕುಚ್ಯುತಿ?

06:25 AM Jan 07, 2018 | Harsha Rao |

ಹೊಸದಿಲ್ಲಿ: ವಿತ್ತ ಸಚಿವ ಅರುಣ್‌ ಜೇಟ್ಲಿ ಹೆಸರನ್ನು ತಿರುಚಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ ಪ್ರಕರಣ ಸಂಬಂಧ, ಸದನದಲ್ಲಿ ಹಕ್ಕುಚ್ಯುತಿ ನಿರ್ಣಯ ಹೊರಡಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ಬಿಜೆಪಿ ಮುಖಂಡ ಭೂಪೇಂದ್ರ ಯಾದವ್‌ರವರ ನಿಲುವಳಿ ಮಂಡನೆ ಕೋರಿದ್ದು, ಇದನ್ನು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ಗೆ ರವಾನಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಜೇಟಿÉ ಹೆಸರನ್ನು ಜೇಟ್‌”ಲೈ’ ಎಂದು ಟ್ವಿಟರ್‌ನಲ್ಲಿ ರಾಹುಲ್‌ ತಿರುಚಿದ್ದರು ಎಂದು ಯಾದವ್‌ ಹೇಳಿದ್ದಾರೆ. 

Advertisement

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ವಿರುದ್ಧದ ಹೇಳಿಕೆಗೆ ಪ್ರಧಾನಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿತ್ತು. ಆಗ ಮಾತನಾಡಿದ ಜೇಟಿÉ, ಸಿಂಗ್‌ರವರ ಬದ್ಧತೆ ನಾವು ಪ್ರಶ್ನಿಸಲಿಲ್ಲ. ಹೇಳಿಕೆಯನ್ನು ಅ ದೃಷ್ಟಿಕೋನದಲ್ಲಿ ನೋಡುವುದು ತಪ್ಪು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ, ಜೇಟ್‌ಲೆç ಪದಪ್ರಯೋಗ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next