Advertisement

ಜಲಜನಕ ಬಸ್‌ನಿಂದ ಮಾಲಿನ್ಯ ನಿಯಂತ್ರಣ ಸಾಧ್ಯವೇ?

10:40 AM Aug 29, 2022 | Team Udayavani |

ಇತ್ತೀಚೆಗಷ್ಟೇ ಪುಣೆಯಲ್ಲಿ ಸ್ವದೇಶಿ ನಿರ್ಮಿತ ಹೈಡ್ರೋಜನ್‌ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಲಾಗಿದೆ. ಈ ಬಸ್‌ಗಳನ್ನು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ಮಂಡಳಿ (ಸಿಎಸ್‌ಐಆರ್‌) ಮತ್ತು ಕೆಪಿಐಟಿ ಲಿಮಿಟೆಡ್‌ ಒಟ್ಟಿಗೆ ಸೇರಿ ಅಭಿವೃದ್ಧಿಗೊಳಿಸಿವೆ.

Advertisement

ಈ ಬಸ್‌ಗಳು ಕೆಲಸ ಮಾಡುವುದು ಹೇಗೆ?
ಸಾಮಾನ್ಯ ಸಾಂಪ್ರದಾಯಿಕ ಬ್ಯಾಟರಿಗಳ ಫ್ಯುಯಲ್ ಸೆಲ್‌ಗ‌ಳು ಕೆಲಸ ಮಾಡುವ ರೀತಿಯಲ್ಲೇ ಈ ಹೈಡ್ರೋಜನ್‌ ಫ್ಯುಯಲ್ ಸೆಲ್‌ಗ‌ಳು ಕೆಲಸ ಮಾಡುತ್ತವೆ. ಆದರೆ, ಈ ಸೆಲ್‌ಗ‌ಳನ್ನು ಚಾರ್ಜ್‌ ಮಾಡಬೇಕಾಗಿಲ್ಲ ಅಥವಾ ಎಲೆಕ್ಟ್ರಿಸಿಟಿಯಿಂದಲೂ ಇವುಗಳು ಜಾರ್ಜ್‌ ಆಗಲ್ಲ. ಇಲ್ಲಿಗೆ ಹೈಡ್ರೋಜನ್‌ ಪೂರೈಕೆಯಾಗುತ್ತಿದ್ದಂತೆ ಅವುಗಳಿಗೆ ಎಲೆಕ್ಟ್ರಿಸಿಟಿ ಪೂರೈಕೆಯಾಗುತ್ತದೆ. ಹೈಡ್ರೋಜನ್‌ ಸೆಲ್‌ಗ‌ಳು ಹೈಡ್ರೋಜನ್‌ ಮತ್ತು ಗಾಳಿಯನ್ನು ಬಳಸಿಕೊಂಡು ಎಲೆಕ್ಟ್ರಿಸಿಟಿ ಉತ್ಪಾದಿಸುತ್ತವೆ.

ಇವುಗಳಿಂದ ಆಗುವ ಲಾಭಗಳೇನು?
ಈ ಬಸ್‌ಗಳು ಒಂದು ರೀತಿಯಲ್ಲಿ ಪರಿಸರ ಸ್ನೇಹಿಗಳಾಗಿವೆ. ಡೀಸೆಲ್‌ ಬಸ್‌ಗಳಿಗೆ ಹೋಲಿಕೆ ಮಾಡಿದರೆ, ದೀರ್ಘಾವಧಿ ದೂರ ಸಂಚರಿಸುವ ಬಸ್ಸೊಂದು ವರ್ಷಕ್ಕೆ 100 ಟನ್‌ ಇಂಗಾಲವನ್ನು ಗಾಳಿಗೆ ಬಿಡುತ್ತವೆ. ಆದರೆ, ಹೈಡ್ರೋಜನ್‌ ಆಧರಿತ ಬಸ್‌ಗಳ ಪ್ರಮಾಣ ಬಹಳಷ್ಟು ಕಡಿಮೆ ಇರುತ್ತದೆ. ಜತೆಗೆ, ಹೈಡ್ರೋಜನ್‌ ಬಸ್‌ಗಳ ರೀಫ್ಯೂಯಲಿಂಗ್‌ ಅವಧಿ ಕಡಿಮೆ ಇರುತ್ತದೆ. ಎಲೆಕ್ಟ್ರಿಕ್‌ ಬಸ್‌ಗಳ ಚಾರ್ಜ್‌ ಅವಧಿ ಹೆಚ್ಚಾಗಿರುತ್ತದೆ.

ಈ ಬಸ್‌ಗಳಿಂದ ಹೊಗೆ ಬರುವುದಿಲ್ಲ
ವಿಶೇಷವೆಂದರೆ ಈ ಬಸ್‌ಗಳಲ್ಲಿ ಹೊಗೆ ಬರುವುದಿಲ್ಲ. ಇದಕ್ಕೆ ಬದಲಾಗಿ ನೀರು ಮತ್ತು ಬಿಸಿ ಗಾಳಿ ಹೊರಗೆ ಬರುತ್ತದೆ. ಹೈಡ್ರೋಜನ್‌ ಮತ್ತು ಗಾಳಿಯ ಬಳಕೆಯಲ್ಲಿ ಹೈಡ್ರೋಜನ್‌ ಸೆಲ್‌ಗ‌ಳು ಚಾರ್ಜ್‌ ಆಗುತ್ತವೆ. ಈ ವೇಳೆ ನೀರು ಮತ್ತು ಬಿಸಿಗಾಳಿ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next