Advertisement

Social Media A/c: ಮಕ್ಕಳ ಸೋಷಿಯಲ್‌ ಮೀಡಿಯಾ ಖಾತೆಗೆ ಹೆತ್ತವರ ಒಪ್ಪಿಗೆ ಕಡ್ಡಾಯ?

01:07 PM Jan 04, 2025 | Team Udayavani |

ನವದೆಹಲಿ: ದೇಶದಲ್ಲಿ ಇನ್ನು ಮುಂದೆ ಮಕ್ಕಳು ತಮ್ಮದೇ ಆದ ಸಾಮಾ ಜಿಕ ಜಾಲತಾಣ ಖಾತೆ ತೆರೆ ಯ ಬೇಕಿದ್ದರೆ, ಪೋಷಕರ ಅನುಮತಿ ಕಡ್ಡಾಯವಾಗುತ್ತದೆ. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಡಿಜಿಟಲ್‌ ವೈಯಕ್ತಿಕ ಮಾಹಿತಿ ರಕ್ಷಣಾ ಕರಡು ನಿಯಮಗಳಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.

Advertisement

ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಮಂಡಿಸಿದ್ದ ಮಸೂದೆ ಕರಡನ್ನು ಶುಕ್ರವಾರ ಬಿಡು ಗಡೆ ಮಾಡಿದೆ. ಆದರೆ ಇದರ ಉಲ್ಲಂಘನೆಗೆ ವಿಧಿಸಬಹುದಾದ ದಂಡದ ಅಂಶಗಳು ಕರಡು ಪ್ರತಿ ಯಲ್ಲಿ ಲಭ್ಯವಾಗಿಲ್ಲ. ಪೋಷಕರು ಒಪ್ಪಿಗೆ ನೀಡದ ಹೊರತು ಮಕ್ಕಳು ಸಾಮಾಜಿಕ ಜಾಲ  ತಾಣದಲ್ಲಿ ಖಾತೆ ತೆರೆಯಲು ಸಾಮಾ ಜಿಕ ಜಾಲತಾಣ ಗಳು ಅವ ಕಾಶ ನೀಡಬಾರದೆಂಬ ನಿಯ ಮ ಈ ಕಾಯ್ದೆ ಮಾಡಿದೆ. ಇದನ್ನು ಸರ್ಕಾರ ಪರಿಶೀ ಲನೆ ನಡೆ ಸಲು ಸಹ ಅವಕಾಶ ಇರ ಬೇಕು ಎಂದು ಸೂಚಿಸಿದೆ. ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲ ತಾಣ ಗಳಲ್ಲಿ ಖಾತೆ ತೆರೆಯುವುದನ್ನು ನಿಷೇಧಿಸಿ ಕಾಯ್ದೆ ಅಂಗೀಕರಿಸಿತ್ತು.

ಈ ಮೂಲಕ ಜಗತ್ತಿನಲ್ಲಿಯೇ ಇಂಥ ಕಾಯ್ದೆ ಜಾರಿಗೆ ತಂದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

18 ವರ್ಷ ಆಗಿಲ್ಲದಿದ್ದರೆ ಮಕ್ಕಳು: ಕರಡು ನಿಯಮಗಳಲ್ಲಿ ಉಲ್ಲೇಖೀಸಿರುವಂತೆ 18 ವರ್ಷ ತುಂಬದ ಎಲ್ಲರನ್ನೂ ಮಕ್ಕಳು ಎಂದು ಗುರುತಿಸಲಾಗುತ್ತದೆ. ಅವರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಳಕೆ ಮಾಡಿಕೊಳ್ಳಲು ಪೋಷಕರ ಅನುಮತಿ ಕಡ್ಡಾಯವಾಗುತ್ತದೆ. ಒಂದು ವೇಳೆ ಇದರ ಉಲ್ಲಂಘನೆಯಾದರೆ ಗರಿಷ್ಠ 250 ಕೋಟಿ ರೂ.ವರೆಗೂ ದಂಡ ವಿಧಿಸಲು ಅವಕಾಶವನ್ನು ಒದಗಿಸಲಾಗಿದೆ.

mygov.inನಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ: ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಕಾಯ್ದೆಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. mygov.in ವೆಬ್‌ ಸೈಟ್‌ನಲ್ಲಿ ಇದಕ್ಕೆ ಸಂಬಂಧಿಸಿದ ಆಕ್ಷೇಪಗಳು ಮತ್ತು ಸಲಹೆಗಳನ್ನು ಸಲ್ಲಿಕೆ ಮಾಡಲು ಸೂಚಿಸಿದೆ. ಫೆ.18ರ ಬಳಿಕ ಬರುವ ಆಕ್ಷೇಪಗಳನ್ನು ಸ್ವೀಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Advertisement

ಕರಡಿನಲ್ಲೇನಿದೆ?

 18 ವರ್ಷ ತುಂಬದ ಎಲ್ಲರೂ ಮಕ್ಕಳು

 ಒಪ್ಪಿಗೆ ಇಲ್ಲದೇ ಖಾತೆಗೆ ಅವಕಾಶ ಇಲ್ಲ

 ಈ ಬಗ್ಗೆ ಪರಿಶೀಲಿಸಲು ಸರ್ಕಾರಕ್ಕೂ ಅವಕಾಶ ಇರಬೇಕು

Advertisement

Udayavani is now on Telegram. Click here to join our channel and stay updated with the latest news.

Next