Advertisement
ನಗರ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ ಓದು ತ್ತಿರುವ ಬಹುತೇಕರಿಗೆ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ. ಆನ್‌ಲೈನ್ ಶಿಕ್ಷಣದ ಸಾಧಕ-ಬಾಧಕ ಅಧ್ಯ ಯನ ಮಾಡದೆ ಅನುಷ್ಠಾನಿಸಿದಲ್ಲಿ ಕೆಲವೇ ವರ್ಷಗಳಲ್ಲಿ ಇನ್ನೊಂದು ರೀತಿಯ ಶೈಕ್ಷಣಿಕ ತಾರತಮ್ಯ ಆರಂಭವಾಗುವ ಸಾಧ್ಯತೆ ಹೆಚ್ಚು.
ಆನ್‌ಲೈನ್ ತರಗತಿಗೆ ಮೊಬೈಲ್, ಲ್ಯಾಪ್‌ಟಾಪ್ ಬೇಕು. ಅದರ ಜತೆಗೆ ಇಂಟ ರ್ನೆ ಟ್ ಅತಿ ಆವಶ್ಯಕ. ಸರಕಾರಿ ಶಾಲೆಯ ಮಕ್ಕಳ ಪಾಲಕ, ಪೋಷಕರ ಆರ್ಥಿಕ ಪರಿಸ್ಥಿತಿಯ ಅಧ್ಯಯನ ನಡೆಸಿ ಎಷ್ಟು ಮಂದಿ ಈ ಉದ್ದೇಶಕ್ಕಾಗಿ ಮಕ್ಕಳಿಗೆ ಮೊಬೈಲ್, ಲ್ಯಾಪ್‌ಟಾಪ್ ಖರೀದಿಸಿ ಕೊಡಬಲ್ಲರು ಎಂಬು ದನ್ನು ವಸ್ತುನಿಷ್ಠವಾಗಿ ಅರಿಯಬೇಕು. ಗ್ರಾಮೀಣ ಭಾಗದ ಅದೆಷ್ಟೋ ಕುಟುಂಬಗಳಿಗೆ ನಿತ್ಯದ ಜೀವನವೇ ಕಷ್ಟವಾಗಿರುವಾಗ ಇದೆಲ್ಲ ಸಾಧ್ಯವೇ? ಅಥವಾ ಸರಕಾರವೇ ಮಕ್ಕಳಿಗೆ ಮೊಬೈಲ್, ಲ್ಯಾಪ್‌ಟಾಪ್ ಜತೆಗೆ ಉಚಿತ ಇಂಟರ್ನೆಟ್ ಸೇವೆ ಒದಗಿಸುತ್ತದೆಯೇ? ಎಂಬ ಪ್ರಶ್ನೆಗೂ ಉತ್ತರ ಬೇಕಿದೆ.
Related Articles
ರಾಜ್ಯದಲ್ಲಿ ಒಟ್ಟು 78,523 ಶಾಲೆಗಳಿವೆ. ಇವುಗಳಲ್ಲಿ 22,442 ಶಾಲೆಗಳು ನಗರ ಪ್ರದೇಶದಲ್ಲಿ ಹಾಗೂ 56,081 ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಸರಕಾರಿ ಶಾಲೆಗಳ ವಿಚಾರಕ್ಕೆ ಬಂದರೆ ರಾಜ್ಯದಲ್ಲಿರುವ ಒಟ್ಟು ಸರಕಾರಿ ಶಾಲೆಗಳ ಪೈಕಿ 38,588 ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ 5,164 ನಗರ ಪ್ರದೇಶದಲ್ಲಿವೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲೂ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಹಾಗಿರುವಾಗ ರಾಜ್ಯ ಸರಕಾರ ಆನ್‌ಲೈನ್ ಶಿಕ್ಷಣ ಬೋಧನೆ ಅಳವಡಿಸಿದರೆ ಗ್ರಾಮೀಣ ಭಾಗದ ಬಹುಪಾಲು ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ.
Advertisement
ಮೊಬೈಲ್, ಲ್ಯಾಪ್‌ಟಾಪ್, ಇಂಟರ್ನೆಟ್ ಸೌಲಭ್ಯದ ಜತೆಗೆ ನೆಟ್‌ವರ್ಕ್ ಕೂಡ ಸಮರ್ಪಕವಾಗಿ ಲಭ್ಯವಾಗಿದೆಯೇ ಎಂಬುದನ್ನು ಆರಂಭದಲ್ಲೇ ಖಾತರಿಪಡಿಸಿಕೊಳ್ಳಬೇಕು. ಈ ಎಲ್ಲ ಸೌಲಭ್ಯಗಳನ್ನು ಸರಕಾರ ಅಥವಾ ಶಿಕ್ಷಣ ಇಲಾಖೆ ಒದಗಿಸಿದ ಅನಂತರ ಅನುಷ್ಠಾನದ ಯೋಚನೆ ಮಾಡಬೇಕು. ಆನ್‌ಲೈನ್ ಬೋಧನೆಯಿಂದ ಯಾವುದೇ ತಾರತಮ್ಯ ಆಗದಂತೆಯೂ ಸರಕಾರ ಎಚ್ಚರ ವಹಿಸಬೇಕು. ಇವೆಲ್ಲದಕ್ಕೂ ಸೌಲಭ್ಯ ಅತಿ ಮುಖ್ಯ. ಅದನ್ನು ಒದಗಿಸಿ, ಅನಂತರ ಮುಂದಿನ ನಿರ್ಧಾರ ಮಾಡಬೇಕು.
ರಾಮಲಿಂಗಾ ರೆಡ್ಡಿ , ಮಾಜಿ ಶಿಕ್ಷಣ ಸಚಿವ