ಕೇಂದ್ರದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೂ , ಇಚ್ಚಾಶಕ್ತಿ ಕೊರತೆಯಿಂದಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲವಾಗಿದ್ದು ಒದಗಿ ಬಂದ ಅವಕಾಶಗಳು ಕೈ ತಪ್ಪುತ್ತಿದೆ ಎಂದು ಕೇಳಿಬಂದ ಹಿನ್ನಲೆಯಲ್ಲಿ “ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ, ಪರಿಣಾಮಕಾರಿಯಾಗಿ ಜಾರಿಮಾಡುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆಯೇ ?” ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿತ್ತು. ಆಯ್ದ ಅಭಿಪ್ರಾಯಗಳು ಈ ಕೆಳಗಿನಂತಿವೆ.
ಗಿರೀಶ್ ಕೃಷ್ಣಪ್ಪ: ನಾವು ಕನ್ನಡಿಗರೆ ! ಇದಕ್ಕೆ ನೇರ ಹೊಣೆ ನಾವು. ನಮ್ಮ ಕನ್ನಡವನ್ನು ನಮ್ಮ ನಾಡಿನಲ್ಲಿ ಬಳಸುವ ಬದಲು ಬೇರೆ ಭಾಷೆಗಳಿಗೆ ಆದ್ಯತೆ ನೀಡುತ್ತೇವೆ. ಉದಾಹರಣೆಗೆ ನಮ್ಮ ರಾಜ್ಯದಲ್ಲಿ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಆದರೆ ಬೇರೆ ರಾಜ್ಯಗಳಲ್ಲಿ ಈ ಪರಿಸ್ಥಿತಿ ಇಲ್ಲ.
ಚಿ. ಮ. ವಿನೋದ್ ಕುಮಾರ್: ನಮ್ಮ ಕೆಲವು ರಾಜಕಾರಣಿಗಳು ಈ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಅವಶ್ಯಕತೆ ಇದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಖಂಡಿತ ಇದೆ.
ರಾಧ ಕೃಷ್ಣ: ಕನ್ನಡ ಕಲಿತವರಿಗೆ ಕರ್ನಾಟಕ ದಲ್ಲಿ ಉದ್ಯೋಗ ಸಿಗುವುದಿಲ್ಲ. ಇದು ನಿಜವಾದ ದುರ೦ತ. ಕನ್ನಡ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೆ ಅದರ ಕುರಿತು ಒಂದು ಭರವಸೆ ಮೂಡುತ್ತದೆ.
ಭಾಗ್ಯಲಕ್ಷ್ಮಿ: ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಭವಿಷ್ಯವಿಲ್ಲದಂತಾಗಿದೆ. ಶಾಸ್ತ್ರೀಯ ಭಾಷೆಯ ಪ್ರಯೋಜನಗಳು ಜನರಿಗೆ ತಲುಪಿಲ್ಲ. ಅನ್ಯ ಭಾಷಿಕ ದಬ್ಬಾಳಿಕೆ ಹೆಚ್ಚಾಗಿದೆ.