Advertisement

ಕೇಂದ್ರಕ್ಕೆ ಐಪಿಎಸ್‌ ಅಧಿಕಾರಿಗಳ ಸೇವೆ ಕಡ್ಡಾಯ?

08:27 PM Apr 17, 2022 | Team Udayavani |

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಗಳಾಗಿ, ಪೊಲೀಸ್‌ ಉಪ ಮಹಾ ನಿರ್ದೇಶಕರಾಗಿ ಅಥವಾ ಈ ಹುದ್ದೆಗಳ ತತ್ಸಮಾನ ಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್‌ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕೆಂಬ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆ, ಪ್ರಧಾನಿಯವರ ಕಚೇರಿಗೆ ರವಾನಿಸಿದೆ.

Advertisement

ಐಪಿಎಸ್‌ ಅಧಿಕಾರಿಗಳನ್ನು ಕೇಂದ್ರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆ ಅಥವಾ ಭದ್ರತಾ ಪಡೆಗಳ ಸೇವೆಗೆ ನೇಮಿಸಿಕೊಳ್ಳಲು ಬಯಸಿದರೆ, ಆ ಅಧಿಕಾರಿಗಳು ತಾವು ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರಗಳ ನಿರಕ್ಷೇಪಣಾ ಪತ್ರವನ್ನು ಪಡೆದು ಕೇಂದ್ರ ಸೇವೆಗೆ ಬರಬೇಕು ಎಂಬ ಅಂಶವನ್ನು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಹಿರಿಯ ಪೊಲೀಸ್‌ ಅಧಿಕಾರಿ, “ಸದ್ಯಕ್ಕೆ ಸಿಬಿಐ, ಕೇಂದ್ರ ಗುಪ್ತಚರ ಇಲಾಖೆಗಳಿಗೆ ನಾನಾ ರಾಜ್ಯಗಳಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಎರವಲು ಸೇವೆಯ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಆದರೆ, ಅರೆಸೇನಾ ಪಡೆಗಳಿಗೆ ಹೀಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಅಧಿಕಾರಿಗಳ ಬರ ಕಾಡುತ್ತಿದೆ. ಕೇಂದ್ರ ಗೃಹ ಇಲಾಖೆ ನೀಡಿರುವ ಪ್ರಸ್ತಾವನೆ ಜಾರಿಯಾದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next