Advertisement

ಜಗತ್ತಿನ ಸಮಸ್ಯೆಗಳಿಗೆ ಫೈನಾನ್ಸ್‌ ಟ್ರ್ಯಾಕ್‌ ಉತ್ತರ?

11:58 PM Dec 12, 2022 | Team Udayavani |

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕುಗಳ ಡೆಪ್ಯೂಟಿ ಗವರ್ನರ್‌ಗಳ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ ಈ ಸಭೆ ನಡೆಯುತ್ತಿರುವುದು ವಿಶೇಷ. ಇದಕ್ಕೆ ರಾಜ್ಯ ಸರಕಾರವೂ ಭರ್ಜರಿ ತಯಾರಿ ನಡೆಸಿದ್ದು, 20 ದೇಶಗಳ ಪ್ರತಿನಿಧಿಗಳ ಸ್ವಾಗತಕ್ಕೆ ಸಿದ್ಧವಾಗಿದೆ. ಹಾಗಾದರೆ ಏನಿದು ಫೈನಾನ್ಸ್‌ ಟ್ರ್ಯಾಕ್‌? ಇದರಿಂದ ಉಪಯೋಗವೇನು?

Advertisement

1.ಏನಿದು ಫೈನಾನ್ಸ್‌ ಟ್ರ್ಯಾಕ್‌?
ಜಿ20 ದೇಶಗಳ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕುಗಳ ಗವರ್ನರ್‌ಗಳ ನೇತೃತ್ವದಲ್ಲಿರುವ ಒಂದು ಸಮಿತಿ. ಇದು ಪ್ರಮುಖವಾಗಿ ಈ ದೇಶಗಳ ಆರ್ಥಿಕತೆ ಮತ್ತು ಹಣಕಾಸಿನ ಸಮಸ್ಯೆಗಳ ಬಗ್ಗೆ ನೋಡಿಕೊಳ್ಳುತ್ತದೆ. ಅಲ್ಲದೆ ಇದು ಜಾಗತಿಕ ಆರ್ಥಿಕ ಚರ್ಚೆ ಮತ್ತು ನೀತಿ ಸಮನ್ವಯ ಸಾಧಿಸಲು ಬೇಕಾದ ವೇದಿಕೆಯನ್ನು ಸೃಷ್ಟಿಸುತ್ತದೆ.

2.ಈಗ ನಡೆಯುತ್ತಿರುವ ಸಮ್ಮೇಳನವೇನು?
ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಫೈನಾನ್ಸ್‌ ಟ್ರ್ಯಾಕ್‌ ಸಭೆ. ಕರ್ನಾಟಕದಲ್ಲಿ ಒಟ್ಟು 14 ಜಿ20 ಸಭೆಗಳು ನಡೆಯಲಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಸಭೆಯಾಗಿದೆ. ಆದರೆ ಈ ಸಭೆಯಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕುಗಳ ಗವರ್ನರ್‌ಗಳು ಭಾಗಿಯಾಗುವುದಿಲ್ಲ. ಬದಲಿಗೆ ಈ ಜಿ20 ದೇಶಗಳ ಹಣಕಾಸು ಮತ್ತು ಕೇಂದ್ರ ಬ್ಯಾಂಕುಗಳ ಡೆಪ್ಯೂಟಿ ಗವರ್ನರ್‌ಗಳು ಭಾಗಿಯಾಗಲಿದ್ದಾರೆ.

3.ಈ ಸಮ್ಮೇಳನದ ಉದ್ದೇಶವೇನು?
ಈ ಫೈನಾನ್ಸ್‌ ಟ್ರ್ಯಾಕ್‌ ಅನ್ನು ಕಾರ್ಯಕಾರಿ ಸಮಿತಿಗಳ 8 ವಿಷಯಾಧಾರಿತವಾಗಿ ರೂಪಿಸಲಾಗಿದೆ.

1.ಫ್ರೆಮ್‌ವರ್ಕ್‌ ವರ್ಕಿಂಗ್‌ ಗ್ರೂಪ್‌(ಎಫ್ಡಬ್ಲೂéಜಿ)ಹಾಲಿ ಜಾಗತಿಕ ಬೃಹತ್‌ ಆರ್ಥಿಕ ಸಮಸ್ಯೆಗಳ ಚರ್ಚೆ ಜಾಗತಿಕ ಅಪಾಯ ಮತ್ತು ಅಸ್ಥಿರತೆಯ ಮೇಲೆ ನಿಗಾ ಸಾಧ್ಯವಾದ ಕ್ಷೇತ್ರಗಳಲ್ಲಿ ನೀತಿ ಸಮನ್ವಯ.
2.ಅಂತಾರಾಷ್ಟ್ರೀಯ ಹಣಕಾಸು ಸಂರಚನೆ(ಐಎಫ್ಎ)
3.ಮೂಲ ಸೌಲಭ್ಯ ಕಾರ್ಯಕಾರಿ ಗುಂಪು(ಐಡಬ್ಲೂéಜಿ)
4.ಸುಸ್ಥಿರ ಹಣಕಾಸು ಕಾರ್ಯಕಾರಿ ಗುಂಪು(ಎಸ್‌ಎಫ್ಡಬ್ಲೂéಜಿ)
5.ಜಾಗತಿಕ ಸಹಭಾಗಿತ್ವ ಮತ್ತು ಆರ್ಥಿಕ ಒಳಗೊಳ್ಳುವಿಕೆ(ಜಿಪಿಎಫ್ಐ)
6.ಜಂಟಿ ಹಣಕಾಸು ಮತ್ತು ಆರೋಗ್ಯ ಅಪಾಯ ಪಡೆ
7.ಅಂತಾರಾಷ್ಟ್ರೀಯ ತೆರಿಗೆ ಅಜೆಂಡಾ
8.ಹಣಕಾಸು ವಲಯ ಸಮಸ್ಯೆಗಳು

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next