Advertisement

ಅಕ್ರಮ ಇ-ಟಿಕೆಟ್‌ ಜಾಲಕ್ಕೆ ಉಗ್ರ ನಂಟು?

02:04 AM Jan 22, 2020 | mahesh |

ಹೊಸದಿಲ್ಲಿ: ರೈಲುಗಳಲ್ಲಿನ ಇ-ಟಿಕೆಟ್‌ನ ಅಕ್ರಮ ಜಾಲವನ್ನು ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಮಂಗಳವಾರ ಬಯಲಿಗೆ ಎಳೆದಿದೆ. ಈ ಜಾಲವು ಪಾಕ್‌, ಬಾಂಗ್ಲಾ ಮತ್ತು ದುಬಾೖಯೊಂದಿಗೆ ನಂಟು ಹೊಂದಿದ್ದು, ಇದಕ್ಕೂ ಉಗ್ರರಿಗೆ ಹಣಕಾಸು ಪೂರೈಕೆ ಪ್ರಕರಣಕ್ಕೂ ಸಂಬಂಧ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Advertisement

ಪ್ರಕರಣ ಸಂಬಂಧ ಭುವನೇಶ್ವರದಿಂದ ಘುಲಾಂ ಮುಸ್ತಫಾ (28) ಎಂಬಾತನನ್ನು ಬಂಧಿಸಲಾಗಿದೆ. ಸಾಫ್ಟ್ವೇರ್‌ ಡೆವಲಪರ್‌ ಆದ ಈತ ಮೊದಲು ಬೆಂಗಳೂರಿನಲ್ಲಿ ಟಿಕೆಟ್‌ ದಲ್ಲಾಳಿಯಾಗಿದ್ದ. ಈತನ ಬಳಿ ಐಆರ್‌ಸಿಟಿಸಿಯ 563 ಐಡಿಗಳು, 2,400 ಎಸ್‌ಬಿಐ ಶಾಖೆಗಳ ಪಟ್ಟಿ, 600 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವರಗಳು ಇದ್ದವು.

10 ದಿನಗಳಲ್ಲಿ ಕರ್ನಾಟಕದ ಪೊಲೀಸರು, ಐಬಿ, ಸ್ಪೆಷಲ್‌ ಬ್ಯೂರೋ, ಇ.ಡಿ., ಎನ್‌ಐಎ ಅಧಿಕಾರಿಗಳು ಈತನನ್ನು ವಿಚಾರಣೆ ನಡೆಸಿ ದ್ದಾರೆ ಎಂದು ರೈಲ್ವೇ ರಕ್ಷಣಾ ಪಡೆಯ ಮಹಾ ನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ. ಹಮೀದ್‌ ಅಶ್ರಫ್ ಎಂಬಾತ ಇದರ ರೂವಾರಿಯಾಗಿದ್ದು, ಪ್ರತಿ ತಿಂಗಳು 10-15 ಕೋ.ರೂ. ಸಂಪಾದಿಸುತ್ತಿದ್ದ ಎಂದಿದ್ದಾರೆ.

ನಕಲಿ ಆಧಾರ್‌ ಆ್ಯಪ್‌
ಮುಸ್ತಫಾನ ಲ್ಯಾಪ್‌ಟಾಪ್‌ ಅನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ಡಾರ್ಕ್‌ನೆಟ್‌, ಲೈನಕ್ಸ್‌ ಆಧರಿತ ಹ್ಯಾಕಿಂಗ್‌ ಸಿಸ್ಟಂಗಳನ್ನು ಪಡೆಯುವಂಥ ಸಾಫ್ಟ್ವೇರ್‌, ನಕಲಿ ಆಧಾರ್‌ ಕಾರ್ಡ್‌ ಸಿದ್ಧಪಡಿ ಸುವ ಆ್ಯಪ್‌ ಸಿಕ್ಕಿದೆ. ಆತ ಪಾಕ್‌ ಮೂಲದ ಧಾರ್ಮಿಕ ಸಂಘಟನೆಯೊಂದರ ಅನುಯಾಯಿ ಎನ್ನಲಾಗಿದೆ. ಅವನ ಫೋನ್‌ನಲ್ಲಿ ಪಾಕ್‌, ಬಾಂಗ್ಲಾ, ಮಧ್ಯಪ್ರಾಚ್ಯ, ಇಂಡೋನೇಷ್ಯಾ, ನೇಪಾಲಿ ಸಂಖ್ಯೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next