Advertisement
ಅ. 2ರಿಂದ ಅ. 15 ರ ವರೆಗೆ ನಡೆದ ಸ್ವಚ್ಛತಾ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ಅಂಗಡಿ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಕ್ರಮಗಳಿಂದ ಯಶಸ್ವಿಯಾಗಿದೆ.
ಈ ಅಭಿಯಾನದ ಪ್ರಯುಕ್ತ ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿದರು. ಸಾಮಾಜಿಕ ಪರಿ ಶೋಧನೆಯಲ್ಲಿ ಗುರುತಿಸಲ್ಪಟ್ಟ ಶೌಚಾಲಯ ರಹಿತ ಕುಟುಂಬಗಳಿಗೆ ಇದರ ನಿರ್ಮಾಣ-ಬಳಕೆ, ಘನ/ದ್ರವ ತ್ಯಾಜ್ಯ ವಿಲೇವಾರಿಗಳ ಬಗ್ಗೆ ಸ್ವಚ್ಛತಾ ನೀತಿ-2017ರಂತೆ ಅನುಷ್ಠಾನಕ್ಕೆಯೋಜನೆ ರೂಪಿಸಿದರು. ವಾರ್ಡ್ ವಾರು ಉಪಸಮಿತಿ ಸದಸ್ಯರಿಗೆ ಸ್ವಚ್ಛತಾ ನೀತಿ ಬಗ್ಗೆ ತರಬೇತಿ ಕಾರ್ಯಾಗಾರ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮನೆ ಮನೆ ಭೇಟಿ ಮಾಡಿ ತ್ಯಾಜ್ಯಗಳನ್ನು ಮೂಲದಲ್ಲೇ ವಿಂಗಡಿಸಿ ಹಸಿ, ಒಣಕಸಗಳ ವಿಲೇವಾರಿ ಬಗ್ಗೆ ಮಾಹಿತಿ ನೀಡಲಾಯಿತು. ನೀರು, ನೈರ್ಮಲ್ಯ ಸಮಿತಿಯಿಂದ ಗ್ರಾ.ಪಂ. ವ್ಯಾಪ್ತಿಯ ನೀರಿನ ಮೂಲಗಳು, ಸಾರ್ವಜನಿಕ ಶೌಚಾಲಯ, ಘನ/ದ್ರವ
ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪರಿಶೀಲಿಸಿ ನೀರು ಶೇಖರಣೆಯ ತೊಟ್ಟಿ, ನೀರಿನ ಟ್ಯಾಂಕ್ ಶುಚಿಗೊಳಿಸುವಂತೆ
ಮಾಹಿತಿ ನೀಡಲಾಯಿತು. ಶಾಲೆಗಳಲ್ಲಿ ಸ್ವಚ್ಛತಾ ದಿನದ ಆಚರಣೆ, ಪ್ಲಾಸ್ಟಿಕ್ ಜಾಗೃತಿ ಮಾಹಿತಿ ನೀಡಲಾಯಿತು. ವಿವಿಧ ಸ್ವಯಂ ಸೇವಾ-ಸಂಘ ಸಂಸ್ಥೆಯ ಸದಸ್ಯರನ್ನು ಒಟ್ಟಿಗೆ ಸೇರಿಸಿ ಅವರಿಗೆ ಸ್ವಚ್ಛತಾ ನೀತಿ , ಪ್ಲಾಸ್ಟಿಕ್ ನಿಷೇಧದ ಕುರಿತು ‘ನಮ್ಮ ತ್ಯಾಜ್ಯ ನಮ್ಮ ಹೊಣೆ’ ಎಂಬ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
Related Articles
ನೀಡಲಾಯಿತು. ಗ್ರಾ. ಪಂ. ಆಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ರಸ್ತೆ ಬದಿ ಕಸಕಡ್ಡಿ, ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಲಾಯಿತು.
Advertisement
ಸ್ವಚ್ಛತಾ ಪಾಕ್ಷಿಕ ಅವಧಿಯಲ್ಲಿ ಸ್ವಚ್ಚತೆ ಅನುಷ್ಠಾನಗೊಳಿಸಿದ 5 ಮನೆಗಳಿಗೆ ಮತ್ತು ಹೆಚ್ಚು ಕಸ ಸಂಗ್ರಹಿಸಿದವರಿಗೆ ಬಹುಮಾನ ನೀಡಲಾಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸೇವೆಗಳನ್ನು ನಡೆಸುವ ಸ್ವಯಂ ಸೇವಾ ಸಂಸ್ಥೆಗಳನ್ನು, ಅಭಿಯಾನಕ್ಕೆಸಹಕರಿಸಿದ ಪ್ರಮುಖರನ್ನು ಗೌರವಿಸಲಾಯಿತು. ಗ್ರಾಮಸ್ಥರಿಗೆ ತ್ಯಾಜ್ಯ ವಿಂಗಡನೆಯ ಮತ್ತು ವಿಲೇವಾರಿ ವಿಧಾನಗಳ ವಿಜ್ಞಾಪನಾ ಪತ್ರ ಮತ್ತು ಬಟ್ಟೆ ಕೈಚೀಲ ವಿತರಿಸಲಾಯಿತು. ಕೊನೆಗೆ ಒಟ್ಟು ಸೇರಿಸಿದ ಕಸವನ್ನು ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಾಗಿಸಲಾಯಿತು. ಮಾದರಿ ವಿಕಾಸ ಕೇಂದ್ರದ ಸಹಕಾರ
ಸ್ವಚ್ಛತಾ ಅಭಿಯಾನದ ಯಶಸ್ಸಿಗೆ ಮಾದರಿ ವಿಕಾಸ ಕೇಂದ್ರದ ಪ್ರೇರಕ ಅಬ್ದುಲ್ ರಹಿಮಾನ್ ಅವರ ಮುತುವರ್ಜಿ ಉತ್ತಮ ಕೆಲಸ ಮಾಡಿದೆ. ಸ್ವಚ್ಛತಾ ನೀತಿ ಅನುಷ್ಠಾನಕ್ಕೆ ಪಾಕ್ಷಿಕದ ಪ್ರತಿ ದಿನ ಯೋಜನೆ ಪ್ರಕಾರ ಕಾರ್ಯನಿರ್ವಹಿಸಿದ್ದು, ಗ್ರಾಮಸ್ಥರ ಅಭಿನಂದನೆಗೆ ಪಾತ್ರರಾಗಿದ್ದಾರೆ. ವ್ಯವಸ್ಥಿತ ವಿಲೇವಾರಿಯ ಕೊರತೆ
ಜಿಲ್ಲೆಯ ವಿವಿಧೆಡೆ ತ್ಯಾಜ್ಯ ಸಂಸ್ಕರಣ ಘಟಕಗಳು ಇದ್ದರೂ ವ್ಯವಸ್ಥಿತ ವಿಲೇವಾರಿ ಇಲ್ಲದಿದ್ದರೆ ಸ್ವಚ್ಛತೆಯ ಕಲ್ಪನೆ ಸಾಕಾರವಾಗುವುದಿಲ್ಲ. ಸ್ವಚ್ಛತಾ ನೀತಿ ಎಂಬುದು ದೈನಂದಿನ ಚಟುವಟಿಕೆಯಂತೆ ಜೀವನದ ಭಾಗವಾಗಿ ಎಲ್ಲರೂ ಪಾಲಿಸಿದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸ್ವಚ್ಛತಾ ಅಭಿಯಾನದಲ್ಲಿ ಇರ್ವತ್ತೂರು ಗ್ರಾ.ಪಂ. ಜಿಲ್ಲೆಯಲ್ಲಿ
ಮುಂಚೂಣಿಯಲ್ಲಿದೆ.
–ಮಂಜುಳಾ, ಸ್ವಚ್ಛತಾ ಸಂಯೋಜಕಿ, ದ.ಕ. ಜಿ.ಪಂ. ಜಿಲ್ಲೆಗೆ ಮಾದರಿ
ನಿರಂತರ 15 ದಿನಗಳ ಕಾಲ ಸ್ವಚ್ಛತಾ ಆಂದೋಲನ ನಡೆಸಿ ಗ್ರಾಮ ಸ್ವಚ್ಛತೆ ನಡೆಸಿದ ಇರ್ವತ್ತೂರು ಗ್ರಾಮ ಪಂಚಾಯತ್ ಜಿಲ್ಲೆಗೆ ಮಾದರಿಯಾಗಿದೆ.
–ಎಂ. ತುಂಗಪ್ಪ ಬಂಗೇರ,
ಜಿ.ಪಂ.ಸದಸ್ಯರು ರತ್ನದೇವ್ ಪುಂಜಾಲಕಟ್ಟೆ