Advertisement
ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಬಿ. ಶಂಕರ ಶೆಟ್ಟಿ, ಪಿಡಿಒ ಗಣೇಶ್ ಶೆಟ್ಟಿಗಾರ್, ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ಉಡುಪ, ಪಿಲಾತಬೆಟ್ಟು, ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಂದರ ನಾಯ್ಕ ಪಿಲಾತಬೆಟ್ಟು, ಅಕ್ಷರ ಪ್ರತಿಷ್ಠಾನ ಅಧ್ಯಕ್ಷ ಡಾ| ರಾಮಕೃಷ್ಣ ಎಸ್. ಆಲದಪದವು, ಗ್ರಾ.ಪಂ. ಸದಸ್ಯರಾದ ನಾರಾಯಣ ಪೂಜಾರಿ, ದಯಾನಂದ ಕುಲಾಲ್, ಗಿರಿಜಾ, ಪ್ರಶಾಂತ ಕೋಟ್ಯಾನ್, ಸುನಂದಾ, ಜಯಶ್ರೀ, ಮಾದರಿ ವಿಕಾಸ ಕೇಂದ್ರದ ಪ್ರೇರಕ ಎಸ್. ಅಬ್ದುಲ್ ರಹಿಮಾನ್ ಹಾಗೂ ಶಿವಾಜಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಮತ್ತು ಸರ್ವಸದಸ್ಯರು, ಇರ್ವತ್ತೂರುಪದವು ಜುಮ್ಮಾ ಮಸೀದಿ ಹಾಗೂ ಒಡಿಯೂರು ಗ್ರಾಮ ವಿಕಾಸ ಸ್ವಸಹಾಯ ಸಂಘದ ಸದಸ್ಯರು, ಇರ್ವತ್ತೂರು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಗಣೇಶ್ ಶೆಟ್ಟಿ ನರ್ವಲ್ದಡ್ಡ, ಗ್ರಾ.ಪಂ. ಮಾಜಿ ಸದಸ್ಯ ಅಬ್ದುಲ್ ನಝೀರ್ ಸಾಹೇಬ್, ಸ್ಥಳೀಯರಾದ ಮಹಮ್ಮದ್ ಮೂರ್ಜೆ, ಎಂ.ಪಿ. ಶೇಖರ್, ಪದ್ಮನಾಭ ಶೆಟ್ಟಿ ಮಠ, ಡಿ.ಎನ್. ಸಂಜೀವ ಇರ್ವತ್ತೂರುಪದವು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರು, ಅಂಚೆ ನೌಕರರು, ಗ್ರಾ.ಪಂ. ಸಿಬಂದಿ, ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮದ ಸುಮಾರು 70 ಗ್ರಾಮಸ್ಥರ
ಸಹಕಾರದಿಂದ ಇರ್ವತ್ತೂರು ಗ್ರಾಮದ ನೇರಳಕಟ್ಟೆ ದೈವಸ್ಥಾನ ವಠಾರವನ್ನು ಸ್ವಚ್ಛಗೊಳಿಸಲಾಯಿತು. ಗ್ರಾಮಸ್ಥರು ಪಿಕಪ್ ವಾಹನ ಮತ್ತು ಹುಲ್ಲು ಕತ್ತರಿಸುವ ಯಂತ್ರಗಳನ್ನು ಉಚಿತವಾಗಿ ನೀಡಿ ಸಹಕರಿಸಿದರು.
ಪ್ರತಿ 15 ದಿನಗಳಿಗೊಮ್ಮೆ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಜರಗಲಿದ್ದು, ಗ್ರಾಮಸ್ಥರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪಂ. ಆಡಳಿತ ಮಂಡಳಿ ಕೋರಿದೆ. ಮುಂದಿನ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವು ಇರ್ವತ್ತೂರು ಪದವಿನಲ್ಲಿ ಜ. 14ರಂದು ಜರಗಲಿದೆ.