Advertisement
ತಾಲೂಕಿನ ಕೂಟಗಲ್ ಗ್ರಾಮದ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಗುಂಡು ತೋಪಿನಲ್ಲಿ ತಾತ್ಕಾಲಿಕವಾಗಿ ತೆಂಗಿನ ಮರದ ಗರಿಯಲ್ಲಿ ನಿರ್ಮಿಸಲಾದ ಗುಡಿ ಸಲುಗಳಲ್ಲಿ ವಾಸಿಸುತ್ತಿ ರುವ ಕುಟುಂಬ ಗಳ ನೆರವಿಗೆ ತಾಲೂಕು ಆಡಳಿತವಾಗಲಿ, ಜಿಪಂ ಆಗಲಿ ಧಾವಿಸಿಲ್ಲ. ಇಲ್ಲಿ ವಾಸಿಸುತ್ತಿರುವ ಮಹಿ ಳೆ ಯರು ಶೌಚಕ್ಕೆ ಹೋಗಲು ಕತ್ತಲು ಆವರಿಸಬೇಕು. ಸ್ನಾನ ಮಾಡಲು ತೆಂಗಿನಗರಿ ಗಳ ಮರೆ ಸಾಲದು, ಹೀಗಾಗಿ ಸೀರೆ ಕಟ್ಟಿ ಕೊಂಡು ಸಾನ್ನ ಮಾಡ ಬೇಕಾದ ಪರಿಸ್ಥಿತಿ. ಈ ದಾರುಣ ಸ್ಥಿತಿ ಸಂಬಂಧಿ ಸಿದ ಅಧಿಕಾರಿಗಳಿಗೆ ಅರಿವಿದೆ. ಆದರೆ ಈ ಕುಟುಂಬ ಗಳಿಗೆ ಆಸರೆಯಾಗಿ ನಿಲ್ಲುವ ಮನಸ್ಸು ಮಾಡಿಲ್ಲವಷ್ಟೆ.
Related Articles
Advertisement
“ನಮ್ಮೆಲ್ಲರ ಬಳಿ ಚುನಾವಣೆ ಗುರುತಿನ ಚೀಟಿ, ಬಿಪಿಎಲ ಕಾರ್ಡ್, ಆಧಾರ ಕಾರ್ಡ್‌ಗಳು ಇವೆ, ಪ್ರತಿ ಭಾರಿ ಚುನಾವಣೆ ಬಂದಾಗ ಮಾತ್ರ ಎಲ್ಲ ಪಕ್ಷದ ಜನಪ್ರತಿನಿಧಿಗಳು ನಮ್ಮ ಬಳಿ ಬಂದು ಮತಯಾಚಿಸುತ್ತಾರೆ. ನಿವೇಶನ, ಮನೆಯ ಭರವಸೆ ಕೊಡುತ್ತಾರೆ. ನಂತರ ಮರೆತು ಹೋಗುತ್ತಿದ್ದಾರೆ ಎಂದು ಇರುಳಿಗ ಸಮುದಾಯದ ಬೋರಮ್ಮ, ಮುನಿಯಮ್ಮ, ಕೆಂಚಯ್ಯ, ಮುನಿಯಮ್ಮ ದೂರುತ್ತಾರೆ. ಶೌಚಾಲಯಗಳು ಇಲ್ಲದಿರುವು ದ ರಿಂದ ಮಹಿ ಳೆ ಯರು ಮಲ, ಮೂತ್ರ ವಿಸರ್ಜನೆಗೆ ರಾತ್ರಿ ಯಾಗುವವರೆಗೂ ಕಾಯಬೇಕು. ಜನರ ಕಣ್ಣು ತಪ್ಪಿಸಿ ಹೊಳೆ ಬಳಿಗೆ ಓಡ ಬೇಕು ಎಂದು ನೊಂದು ನುಡಿದಿದ್ದಾರೆ.
ಮಳೆ ಬಂದರೆ ಯಾತನೆ!
23ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ಇವರು ತೆಂಗಿನ ಗರಿಯಿಂದ ಗುಡಿಸಲನ್ನು ನಿರ್ಮಿಸಿಕೊಂಡಿ¨ªಾರೆ. ತಗ್ಗು ಪ್ರದೇಶವಾದ್ದ ರಿಂದ ಮಳೆ ಬಂದರೆ ಗುಡಿಸಲುಗಳಿಗೆ ನೀರು ನುಗ್ಗು ತ್ತದೆ. ಮಕ್ಕ ಳನ್ನು ಜೋಪಾನ ಮಾಡಿ ಪಾತ್ರೆ, ಬಟ್ಟೆ, ಆಹಾರ ಪದಾ ರ್ಥ ಗ ಳು ಹಾನಿಯಾಗದಂತೆ ಎಚ್ಚರವಹಿಸಿ ಜಾಗರಣೆ ಮಾಡ ಬೇ ಕಾದ ಪರಿ ಸ್ಥಿತಿ ಕುಟುಂಬಗಳ ಹಿರಿ ಯರದ್ದು. ಇತ್ತೀಚೆಗೆ ಸುರಿದ ಮಳೆ ಯಿಂದಾಗಿ ಮೂರ್‍ನಾಲ್ಕು ಗುಡಿಸಲುಗಳು ನೆಲಕ್ಕುರಿಳಿವೆ. ಇಲ್ಲಿ ನೆಲೆ ಸಿದ್ದು ಯಾಕೆ?: ರತ್ನ ಗಿರಿ ಎಂಬಾತ ಪ್ರತಿಕ್ರಿಯಿಸಿ, ತಾತ, ಅಪ್ಪ ಕಾಡಿನಲ್ಲಿ ವಾಸವಾಗಿದ್ದರು.ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದಾಗ ಬಂದ ನಾವು 40 ವರ್ಷ ಗಳಿಂದ ಇಲ್ಲೇ ನೆಲೆಸಿದ್ದೇವೆ. ಈ ಜಾಗ ಕೂಟಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳುತ್ತಿದ್ದಾರೆ. ನೆಲೆಯಿಲ್ಲದ ನಮಗೆ ಆಡಳಿತಾಧಿಕಾರಿಗಳು ಸೂರಿ ಕಲ್ಪಿಸಿ ಬದುಕಿಗೆ ದಾರಿ ತೋರಿಸಿ ಅಂತಾರೆ ಸಂತ್ರಸ್ತರು.
ಅರಣ್ಯ ಪ್ರದೇಶವೇ ಸಾಕು
ಈ ಕುಟುಂಬಗಳ ಬಗ್ಗೆ ಕಾಳಜಿವಹಿಸಿರುವ ಸಂಶೋ ಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿ ಇಲ್ಲಿ ವಾಸಿಸುವ ಕುಟುಂಬ ಗ ಳಿಗೆ ತಾಲೂಕು ಮತ್ತು ಜಿಲ್ಲಾ ಡ ಳಿತ ಉಚಿತವಾಗಿ ಭೂಮಿ ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಸಹಕಾರ ಕೊಡಬೇಕು. ಯರೇಹಳ್ಳಿ ಗ್ರಾಮದ ಸರ್ವೆ ನಂಬರ್ 43ರಲ್ಲಿ ನಿವೇ ಶನ ಕೊಡಲು ಅವಕಾಶ ವಿದೆ ಎಂದು ಅವರು ತಿಳಿಸಿದ್ದಾರೆ. ತಾಲೂಕು ಆಡಳಿತ ಮತ್ತು ಜಿಪಂ ಅಧಿಕಾರಿಗಳು ತಕ್ಷಣ ಈ ಕುಟುಂಬಗಳ ರಕ್ಷಣೆಗೆ ಬರಬೇಕಾಗಿದೆ.
ಜಮೀನು ಮಂಜೂರಾತಿ ವಿಳಂಬ
ವಸವಾಸಿ ಕಲ್ಯಾಣ ಸಂಘಟನೆ ಜಿಪಂ ಸಿಇಒ ಅವ ರಿಗೆ ಮಾಡಿದ ಮನ ವಿ ಯಲ್ಲಿ ಯರೇಹಳ್ಳಿ ಸರ್ವೆ ಸಂಖ್ಯೆ 43ರಲ್ಲಿ 2.30 ಎಕರೆ ಜಮೀ ನನ್ನು ಕುಟುಂಬಗಳಿಗೆ ಮಂಜೂರು ಮಾಡಲು ಆದೇಶ ಸಿಕ್ಕಿಲ್ಲ ಎಂದು ದೂರಿ ದ್ದರು. ಈ ಕುರಿತು ಜಿಪಂ ಸಿಇಒ ಅವರು ಕೂಟ ಗಲ್ ಗ್ರಾಪಂ ಪಿಡಿಒ ಅವರಿಗೆ ಪತ್ರ ಬರೆದಿದ್ದು, ವನ ವಾಸಿ ಕಲ್ಯಾಣ ಸಂಘಟನೆ ಮನವಿ ಬಗ್ಗೆ ಪರಿಶೀಲಿಸಿ ಸದರಿ ಸರ್ವೆ ನಂ.43ರಲ್ಲಿ ಸುಮಾರು 175.00 ಎ/ಗುಂಟೆ ಇದ್ದು ಸದರಿ ಇರುವ ಜಮೀನಿನಲ್ಲಿ ಆಶ್ರಯ ನಿವೇಶನಕ್ಕೆ 5.00 ಎ/ಗುಂಟೆ ಜಮೀನು ಮಂಜೂರಾತಿಗೆ ಕ್ರಮಕೈಗೊಂಡು ಹಾಗೂ ಕ್ರಮದ ಬಗ್ಗೆ ಈ ಕಚೇರಿಗೆ ಮಾಹಿತಿ ಸಲ್ಲಿಸಲು ಸಿಇಒ ಅವರು ಸೂಚನೆಯನ್ನು 2021ರ ಜುಲೈ ನಲ್ಲೇ ಪತ್ರ ಬರೆ ದಿದ್ದಾರೆ. ಆದರೆ ಪಂಚಾಯ್ತಿ ವತಿಯಿಂದ ಇಲ್ಲಿಯವರೆಗೂ ವರದಿ ಹೋಗಿಲ್ಲ ಎಂಬ ದೂರುಗಳು ಇವೆ.