Advertisement

ರಸ್ತೆ ಡಾಂಬರೀಕರಣದಲ್ಲಿ ಅವ್ಯವಹಾರ: ಆರೋಪ

05:50 PM May 24, 2022 | Team Udayavani |

ಕಿಕ್ಕೇರಿ: ಹೋಬಳಿಯ ಕೋಡಿಮಾರನಹಳ್ಳಿ ಗ್ರಾಮ  ದಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿಸಂಪೂರ್ಣ ಕಳಪೆಯಾಗಿದ್ದು ಅವ್ಯವಹಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ತಿಂಗಳ ಹಿಂದೆ ಕಾವೇರಿ ಜಲಾನಯನಯೋಜನೆಯಲ್ಲಿ ಗ್ರಾಮದ ಬಿಎಂ ರಸ್ತೆಯಿಂದರಾಯಕಾಲುವೆ ಅಚ್ಚುಕಟ್ಟು, ಚೈತನ್ಯ ಕಾನ್ವೆಂಟ್‌ವರೆಗೆ ನಡೆದಿರುವ ಕಾಮಗಾರಿ ನೆಪಕ್ಕೆ ಮಾಡಿದಂತಿದೆ.41.8ಲಕ್ಷ ರೂ.ಗಳ ಕಾಮಗಾರಿಯಲ್ಲಿ ಶೇ.25ಗುಣಮಟ್ಟದ ಕಾಮಗಾರಿ ನಡೆದಿಲ್ಲ. ನೆಪಕ್ಕೆ ಜಲ್ಲಿಜಲ್ಲಿ, ಇದರ ಮೇಲೆ ಒಂದಿಷ್ಟು ಡಾಂಬರು ಪುಡಿ ಹರಡಿದಂತಿದೆ. ಡಾಂಬರು ಕೆರೆದರೆ ಮಣ್ಣು, ಡಾಂಬರು ಪುಡಿಗೆ ಕೈಗೆ ರಾಶಿ ರಾಶಿಯಾಗಿ ಬರುತ್ತಿದೆ. ಸಂಪೂರ್ಣ ಅವೈಜ್ಞಾನಿಕವಾಗಿ ರಾತ್ರಿ ವೇಳೆ ಕಾಮಗಾರಿ ನಡೆದಿದೆ ಎಂದು ದೂರಿದ್ದಾರೆ.

ಸಚಿವ ಕೆ.ಸಿ.ನಾರಾಯಣಗೌಡರ ವಿಶೇಷ ಅಧಿಕಾರಿ ಡಾ.ಎಚ್‌.ಟಿ.ಪ್ರಕಾಶ್‌ ಕಿಕ್ಕೇರಿಗೆ ಬರುತ್ತಿರುವ ವಿಷಯ ತಿಳಿದು ಗ್ರಾಮಸ್ಥರು ಅಧಿಕಾರಿಗಳನ್ನು ರಸ್ತೆಕಾಮಗಾರಿ ವೀಕ್ಷಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಸ್ಥಳಕ್ಕೆ ಕರೆದುಕೊಂಡು ಹೋದರು.

ತೆರಿಗೆ ಹಣ ಪೋಲು: ರಸ್ತೆಯಲ್ಲಿನ ಡಾಂಬರು ಕೈಯಲ್ಲಿ ಕೆರೆದು ಮಣ್ಣು, ಡಾಂಬರು ಗುಡ್ಡೆ ಹಾಕಿ ದರು. ಅಲ್ಲಲ್ಲಿ ಗುಂಡಿ ಬಿದ್ದಿರುವುದನ್ನು ತೋರಿಸಿದರು. ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಉಪಗುತ್ತಿಗೆಗಳನ್ನು ಸಚಿವರ ಆಪ್ತರು, ಪಡೆದು ಕಳಪೆ ಕಾಮಗಾರಿ ಮಾಡುತ್ತಿದ್ದು, ಈ ದಂಧೆಗೆ ಕಡಿವಾಣವೇ ಇಲ್ಲವಾಗಿದೆ. ಸಚಿವರು ವಿಶೇಷ ಕಾಳಜಿ ವಹಿಸಿ ರಸ್ತೆ ಅಭಿವೃದ್ಧಿ ಮಾಡಲು ಅನುದಾನ ನೀಡಿದರೆ, ಇವರ ಹೆಸರಿಗೆ ಮಸಿ ಬಳಿಯುವಂತೆ ಪರ್ಸೆಂಟೇಜ್‌ ರೀತಿ ಕೆಲಸ ನಡೆಯುತ್ತಿದೆ. ಸರ್ಕಾರಕ್ಕೆ ನಾವು ಕಟ್ಟುತ್ತಿರುವ ತೆರಿಗೆ ಹಣ ಅಪವ್ಯಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚರಿಸಲು ಕಷ್ಟ: ಭೂಮರಾ ಬಿಲ್ಡರ್ ಹೆಸರಿನಲ್ಲಿ ಕಾಮಗಾರಿ ನಡೆದರೂ ಈ ಕಾಮಗಾರಿ ಮಾಡಿರುವುದು ಬಿಜೆಪಿ ಹೋಬಳಿ ಅಧ್ಯಕ್ಷ ಚಿಕ್ಕತರಹಳ್ಳಿ ಗುತ್ತಿಗೆದಾರ ನಾಗೇಶ್‌. ಸಚಿವರಿಗೆ ತಮ್ಮ ಸಮಸ್ಯೆ ಕೇಳಿಕೊಳ್ಳಲು ಕಷ್ಟವಾಗುತ್ತಿದೆ. ಲಕ್ಷಾಂತರ ರೂ. ಕಬಳಿಸಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿರಸ್ತೆಯನ್ನು ಗುಣಮಟ್ಟದಿಂದ ಮಾಡಿಸಿಕೊಡಿ. ಈ ರಸ್ತೆಯ ಮಾರ್ಗವಾಗಿಯೇ ಜಮೀನುಗಳಿಗೆ ತೆರಳ ಬೇಕಿದೆ. ಶಾಲೆಗಳಿಗೆ ಮಕ್ಕಳು ಈ ಮಾರ್ಗವಾಗಿಯೇ ಓಡಾಡಬೇಕಿದೆ. ಶಾಲಾ ವಾಹನ ಓಡಾಡಲು ಕಷ್ಟವಾಗಿದೆ. ಹೊಸದಾಗಿ ನಿರ್ಮಿಸಿರುವ ಈ ರಸ್ತೆಯಲ್ಲಿಕೇವಲ ಎತ್ತಿನಗಾಡಿ ಓಡಾಡಿ ಗುಂಡಿ ಬಿದ್ದಿವೆ. ರಸ್ತೆಗೆಇಲ್ಲಿರುವ ಕೆಮ್ಮಣ್ಣು ಬಳಸಿಕೊಂಡಿದ್ದಾರೆ ಎಂದು ಅವಲತ್ತುಕೊಂಡರು.

Advertisement

ಡಾಂಬರು ಕೆರೆದರೆ ಮಣ್ಣು ಕಾಣಿಸುತ್ತದೆ:ಡಾಂಬರು ನೆಪ ಮಾತ್ರಕ್ಕೆ. ಮಣ್ಣಿನ ಮೇಲೆ ಡಾಂಬರು ಪುಡಿ ಎರಚಿದ್ದಾರೆ. ಡಾಂಬರು ಹಾಕಿದ ಕೆಲವೇ ದಿನದಲ್ಲಿ ಕಿತ್ತುಬಂದಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ.ಲಕ್ಷಾಂತರ ರೂ. ಗುತ್ತಿಗೆದಾರ ಕಬಳಿಸಿದ್ದಾರೆ ಎನ್ನುವುದುಗ್ರಾಮಸ್ಥ ಕೋಳಿ ಸುರೇಶ್‌ ಅವರ ಆರೋಪವಾಗಿದೆ. ಮುಖಂಡರಾದ ಕೋಳಿ ಸುರೇಶ್‌, ಮಂಜುನಾಥ್‌, ಶಶಿಕುಮಾರ್‌, ಮಂಜು, ಬಾಲರಾಜು ಇದ್ದರು.

ಕಳಪೆ ಕಾಮಗಾರಿ ನಡೆದಿರುವುದು ಕಣ್ಣಿಗೆ ಕಾಣುತ್ತಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಲಾಗುವುದು. – ಡಾ.ಪ್ರಕಾಶ್‌, ಸಚಿವ ಕೆ.ಸಿ.ನಾರಾಯಣಗೌಡರ ವಿಶೇಷ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next