Advertisement

ರೈತರ ಸಹಾಯಕ್ಕೆ ಆರಂಭವಾಗಿದ್ದ ಕೇಂದ್ರದಲ್ಲಿ ಅವ್ಯವಹಾರ

02:49 PM Mar 12, 2022 | Team Udayavani |

ಕುದೂರು: ರೈತರಿಗೆ ನೆರವಾಗಲು ಅವರ ಷೇರು ಹಣದಿಂದ ಆರಂಭವಾದ ರೈತ ಉತ್ಪಾದಕ ಸಂಸ್ಥೆಅವ್ಯವಹಾರದ ಆಗರವಾಗಿ ಪರಿಣಮಿಸಿದ್ದು, ರೈತರಷೇರು ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬಆರೋಪ ಮಾಗಡಿ ತಾಲೂಕು ಕುದೂರು ಹೋಬಳಿ ಶ್ರೀಗಿರಿಪುರ ಗ್ರಾಮದಲ್ಲಿ ಕೇಳಿ ಬರುತ್ತಿದೆ.

Advertisement

ಗ್ರಾಮದ ಸುತ್ತಮುತ್ತಲಿನ ರೈತರಿಗೆ ಸರ್ಕಾರದ ಅನುದಾನ ಬಳಸಿಕೊಂಡು ಸೌಲಭ್ಯ ಕಲ್ಪಿಸುವಹಾಗೂ ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಉತ್ಪನ್ನ ಒದಗಿಸಲೆಂದು ಸ್ಥಳೀಯ ರೈತರು ಹಾಗೂ ಗ್ರಾಮಸ್ಥರಷೇರು ಹಣದಿಂದ 2015-16ರಲ್ಲಿ ಶ್ರೀಗಿರಿಪುರ ರೈತ ಉತ್ಪಾದಕ ಕಂಪನಿ ಆರಂಭವಾಗಿತ್ತು. ಮೊದಲಿಗೆ ಪ್ರಾಮಾಣಿಕವಾಗಿ ಸೇವೆ ನೀಡುತ್ತಿದ್ದ ಕಂಪನಿ ಯಲ್ಲಿಈಗ ಹಿಂದಿನ ಸಿಇಒ ಮತ್ತು ನಿರ್ದೇಶಕರು ರೈತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಭಾನು ಪ್ರಕಾಶ್‌ ಎಂಬ ಸಿಇಒ 4.95 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು 2019, 20, 21ನೇ ವರ್ಷದ ಕಂಪನಿಯ ಅಡಿಟ್‌ನಲ್ಲಿ ವರದಿಯಾಗಿತ್ತು. ಆದರೂ, ಅವರಿಂದ ಸಂಘಕ್ಕೆ ಬರಬೇಕಿರುವ ಹಣ ವಸೂಲಿ ಮಾಡುವಲ್ಲಿ ನಿರ್ದೇಶಕರು ಕಾಳಜಿ ವಹಿಸದಿರುವುದು ನೋಡಿದರೆಹಣ ದುರ್ಬ ಳಕೆಯಲ್ಲಿ ನಿರ್ದೇಶಕರು ಕೂಡ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.

ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲ: ಅಡಿಟ್‌ ವರದಿಯಲ್ಲಿ ಸಿಇಒ ಭಾನುಪ್ರಕಾಶ್‌ರಿಂದ ಹಣಬರ ಬೇಕೆಂದು ವರದಿಯಾಗಿದ್ದರೂ, ಈವರೆಗೆ ನಿರ್ದೇಶಕರು ಹಾಗೂ ಕಂಪನಿ ಈ ಬಗ್ಗೆ ಕಾನೂನಾತ್ಮಕವಾಗಿ ಪ್ರಶ್ನಿಸಿಲ್ಲವೇಕೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಡಿಟ್‌ ವರದಿ ಸರಿಯಾಗಿದೆಯೇ ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕಿದೆ.

ಅಡಿಟ್‌ ಬಗ್ಗೆ ಅನುಮಾನ: ಈಗ ಕೆಲವು ನಿರ್ದೇ ಶಕ ಹಾಗೂ ಹೊಸದಾಗಿ ಬಂದಿರುವ ಸಿಇಒ ಹಿಂದಿನ ಸಿಇಒಗೆ ಕಂಪನಿಯಿಂದ ಹಣ ಕೊಡಬೇ ಕಿದೆ ಎಂದುಹೇಳುತ್ತಿದ್ದಾರೆ. ಆಡಿಟ್‌ ವರದಿಯಲ್ಲಿ ಎಲ್ಲಿಯೂಭಾನುಪ್ರಕಾಶ್‌ ಅವರಿಗೆ ಕಂಪನಿಯಿಂದ ಹಣ ಕೊಡಬೇಕೆಂದು ನಮೂದಾಗಿಲ್ಲದಿದ್ದರೂ, ಕಂಪನಿ ಖಾತೆಯಿಂದ ಹಿಂದಿನ ಸಿಇಒ ಭಾನು ಪ್ರಕಾಶ್‌ಗೆ ಹೇಗೆಹಣ ಕೊಡಲು ಸಾಧ್ಯ ಎಂಬ ಪ್ರಶ್ನೆ ಸಾರ್ವ ಜನಿಕವಲಯದಲ್ಲಿ ಮೂಡಿದ್ದು, ತೋಟಗಾರಿಕೆ ಇಲಾಖೆಅಧಿಕಾರಿ, ಜಿಪಂ ಸಿಇಒ ಈ ಬಗ್ಗೆ ಗಮನ ಹರಿಸಬೇಕಿದೆ.

ಆರೋಪ-ಪ್ರತ್ಯಾರೋಪ: ನಿರ್ದೇಶಕರು ಈ ಹಿಂದಿನ ಸಿಇಒ ಮೇಲೆ ಆರೋಪ ಮಾಡಿದರೆ,ಸಿಇಒ ನಿರ್ದೇಶಕರತ್ತ ಬೊಟ್ಟು ಮಾಡುತ್ತಾರೆ. ನಿರ್ದೇಶಕರು ತಮಗೆ ಇಷ್ಟ ಬಂದ ಹಾಗೆ ಹಣ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಹಾಕುತ್ತಿ ದ್ದಾರೆ. ನಿರ್ದೇಶಕರು ಈ ಹಿಂದೆ ನಡೆದ ಗ್ರಾಪಂ, ವಿಧಾನಸಭೆ ಚುನಾವಣೆಗೆಲ್ಲ ಹಣ ಬಳಸಿಕೊಂಡು ಹಿಂತಿರುಗಿಸಿದ್ದಾರೆ. ಹಣ ದುರ್ಬಳಕೆಯ ಬಗ್ಗೆ ನಿರ್ದೇಶಕರನ್ನು ಹಾಗೂ ಸ್ಥಳೀಯರನ್ನು ಕೇಳಿ ಹೇಳುತ್ತಾರೆ. ನಾನು ಯಾವುದೇ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ನಿರ್ದೇಶಕರ ಮೇಲೆ ಆರೋಪ ಮಾಡುತ್ತಾರೆ ಹಿಂದಿನ ಸಿಇಒ ಭಾನುಪ್ರಕಾಶ್‌.

Advertisement

ನಾನು ಶ್ರೀ ಗಿರಿಪುರ ತೋಟಗಾರಿಕೆ ರೈತ ಉತ್ಪಾದಕ ಕಂಪನಿಗೆ ಯಾವುದೇಹಣ ಕೊಡಬೇಕಿಲ್ಲ. ನಾನು ಕೆಲಸ ಬಿಟ್ಟಮೇಲೆ ದುರ್ಬಳಕೆ ಹಣವನ್ನು ಅಡಿಟ್‌ವರದಿಯಲ್ಲಿ ನನ್ನ ಹೆಸರಿಗೆ ಸೇರಿಸಿದ್ದಾರೆ.ನಾನು ಹಣ ದುರ್ಬಳಕೆ ಮಾಡಿಕೊಂಡಿದ್ದರೆನನ್ನ ಮೇಲೆ ಇಲ್ಲಿಯವರೆಗೆ ನಿರ್ದೇಶಕರು ಕಾನೂನು ಕ್ರಮ ಏಕೆ ಜರುಗಿಸಿಲ್ಲ?.– ಭಾನುಪ್ರಕಾಶ್‌, ಹಿಂದಿನ ಸಿಇಒ. 

ಮಾನವೀಯತೆ ದೃಷ್ಟಿಯಿಂದ ನಾವು ಈವರೆಗೆ ಹಿಂದಿನ ಸಿಇಒ ಭಾನುಪ್ರಕಾಶ್‌ಗೆ ಕಾಲಾವಕಾಶ ನೀಡಿದ್ದೆವು. ಸರ್ವ ಸದಸ್ಯರ ಸಭೆಯಲ್ಲಿ ಹಣ ಪಾವತಿ ಮಾಡುತ್ತೇನೆ. ನನಗೆ ಕಾಲಾವಕಾಶ ಕೊಡಿ ಎಂದು ಭಾನುಪ್ರಕಾಶ್‌ ಒಪ್ಪಿಕೊಂಡಿದ್ದಾರೆ.– ಗಂಗಪ್ಪ ,ನಿರ್ದೇಶಕ ಶ್ರೀಗಿರಿಪುರ ಎಫ್‌ಪಿಒ,

-ಕೆ.ಎಸ್‌.ಮಂಜುನಾಥ್‌ ,ಕುದೂರು

Advertisement

Udayavani is now on Telegram. Click here to join our channel and stay updated with the latest news.

Next