ಪಣಜಿ: ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆ.8ರ ಭಾನುವಾರ ಬೆಳಗ್ಗೆ ಗೋವಾದ ಮಿರಾಮಾರ್ ಬೀಚ್‍ನಲ್ಲಿ ಐರನ್‍ಮ್ಯಾನ್ ಟ್ರಯಥ್ಲಾನ್‍ಗೆ ಚಾಲನೆ ನೀಡಿದರು.
ಸ್ಫರ್ಧೆ ಪೈಪೋಟಿ ಸಂಭ್ರಮದಿಂದ ಆರಂಭವಾಗಿದೆ. ಐರನ್‍ಮ್ಯಾನ್ ಟ್ರಯಥ್ಲಾನ್ ಹಿನ್ನೆಲೆ ಗೋವಾ ರಾಜಧಾನಿ ಪಣಜಿ ಮಹಾನಗರದ ಸಾರಿಗೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು.
ಐರನ್‍ಮ್ಯಾನ್ 70.3 ಇಂಡಿಯಾ ಈವೆಂಟ್‍ನ ಸಮಯದಲ್ಲಿ ಮೀರಾಮಾರ್ ಬಳಿಂದ ಬಾಂಬೋಲಿಂ ರಾಷ್ಟ್ರೀಯ ಹೆದ್ದಾರಿಯ ಚತುಷ್ಫಥದಲ್ಲಿ ವಾಹನ ಸಂಚಾರಕ್ಕೆ ದ್ವಿಪಥ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪ್ರಯಾಣಿಕರ ಬಸ್‍ಗಳನ್ನು ಬೇರೆ ಮಾರ್ಗಗಳಿಂದ ತಿರುಗಿಸಲಾಗಿತ್ತು. ಕಾರ್ಯಕ್ರಮ ನಡೆಯುವ ಪ್ರದೇಶವನ್ನು ನೋ ಪಾಕಿರ್ಂಗ್ ಮತ್ತು ನೋ ಸ್ಟಾಪ್ ಝೋನ್ ಎಂದು ಘೋಷಿಸಲಾಗಿತ್ತು.
‘ಐರನ್‍ಮ್ಯಾನ್‘ ಎಂದರೇನು?
ಐರನ್‍ಮ್ಯಾನ್ ಅತ್ಯಂತ ಕಠಿಣ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಪೂರ್ಣಗೊಳಿಸಬೇಕಾದ ಕ್ರೀಡೆ. ಈ ಸ್ಪರ್ಧೆಯಲ್ಲಿ ದೈಹಿಕ ಸಾಮರ್ಥ್ಯದ ಅಗತ್ಯವಿದೆ. ಸ್ಪರ್ಧೆಯಲ್ಲಿ ಈಜು, ಸೈಕ್ಲಿಂಗ್, ಓಟ ಮುಗಿಸಬೇಕು. ಐರನ್‍ಮ್ಯಾನ್ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಕಷ್ಟಕರ ಮತ್ತು ಸವಾಲಿನ ಕ್ರೀಡೆಗಳಲ್ಲಿ ಒಂದಾಗಿದೆ. ಈ ಸ್ಪರ್ಧೆಯಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಟ್ರೈಥ್ಲೀಟ್‍ಗಳು ಪಾಲ್ಗೊಂಡಿದ್ದಾರೆ.