Advertisement
ಕೆರಿಬಿಯನ್ ದ್ವೀಪಗಳಲ್ಲಿ ಇರ್ಮಾದ ಅಬ್ಬರಕ್ಕೆ 19 ಮಂದಿ ಬಲಿಯಾಗಿದ್ದು, ಅಪಾರ ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಗಂಟೆಗೆ 155 ಮೈಲು ವೇಗದಲ್ಲಿ ಗಾಳಿ ಬೀಸುತ್ತಿದ್ದು, ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. “ಇದೊಂದು ಅಪಾಯಕಾರಿ ಚಂಡಮಾರುತ. ಹಾಗಾಗಿ, ನಿಮಗೆ ಹೆಚ್ಚಿನ ಸಮಯವಿಲ್ಲ. ಆದಷ್ಟು ಬೇಗ ಸುರಕ್ಷಿತ ಪ್ರದೇಶಗಳಿಗೆ ತೆರಳಿ’ ಎಂದು ನಾಗರಿಕರಿಗೆ ಎಚ್ಚರಿಸಲಾಗಿದೆ. ಇರ್ಮಾವು 1992ರಲ್ಲಿ 65 ಮಂದಿಯನ್ನು ಬಲಿತೆಗೆದು ಕೊಂಡ ಆ್ಯಂಡ್ರೂé ಚಂಡಮಾರುತಕ್ಕಿಂತಲೂ ಬಲಶಾಲಿಯಾಗಿದೆ ಎಂದು ಇಲ್ಲಿನ ಗವರ್ನರ್ ಹೇಳಿದ್ದಾರೆ.
ಶುಕ್ರವಾರ ಮೆಕ್ಸಿಕೋ ಕರಾವಳಿಗೆ ಅಪ್ಪಳಿಸಿದ ಸುನಾಮಿಯಿಂದ ಮೃತ ಪಟ್ಟವರ ಸಂಖ್ಯೆ 61ಕ್ಕೇರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 8.1 ತೀವ್ರತೆಯ ಭೂಕಂಪದಿಂದಾಗಿ ಹಲವು ಕಟ್ಟಡಗಳು, ಶಾಲೆಗಳು, ಚರ್ಚುಗಳು ನೆಲಸಮವಾ ಗಿದ್ದು, ಇನ್ನೂ ಅನೇಕ ಮಂದಿ ಅವಶೇಷ ಗಳಡಿ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾ ಚರಣೆ ಭರದಿಂದ ಸಾಗಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.