Advertisement

ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆ ಸ್ಥಾಪಿಸಲು ಸಜ್ಜಾಗುತ್ತಿರುವ ಐಆರ್‌ಜಿಸಿ

10:23 AM Jun 24, 2020 | sudhir |

ಟೆಹರಾನ್‌: ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆಯನ್ನು ಸ್ಥಾಪಿಸಲು ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನ್‌ ಗಾರ್ಡ್‌ ಕಾರ್ಪ್ಸ್ (ಐಆರ್‌ಜಿಸಿ) ಯೋಜಿಸುತ್ತಿದೆ ಎಂದು ಪ್ರಸ್‌ ಟಿವಿ ವರದಿ ಮಾಡಿದೆ.

Advertisement

ಹೌದು ಐಆರ್‌ಜಿಸಿ ಮಾರ್ಚ್‌ 2021ರ ಅಂತ್ಯದ ವೇಳೆಗೆ ಹಿಂದೂ ಮಹಾಸಾಗರದಲ್ಲಿ ಶಾಶ್ವತ ನೆಲೆ ರಚಿಸಲು ಯೋಜಿಸುತ್ತಿದ್ದು, ಅದಕ್ಕೆ ಪೂರಕವಾದ ತಯಾರಿ ನಡೆಸುತ್ತಿದೆ ಎಂದು ತಂಗ್ಸಿರಿ ತಿಳಿಸಿದ್ದಾರೆ.

ಇರಾನ್‌ನ ಸುಪ್ರೀಂ ಲೀಡರ್ ‌ಅಯತೊಲ್ಲಾ ಅಲಿ ಖಮೇನಿ ಅವರು ಐಆರ್‌ಜಿಸಿಗೆ ದೇಶದಿಂದ ದೂರದಲ್ಲಿರುವ ಸಮುದ್ರದಲ್ಲಿ ಶಾಶ್ವತ ನೆಲೆ ಸ್ಥಾಪಿಸುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಐಆರ್‌ಜಿಸಿ ನೌಕಾಪಡೆಯ ಕಮಾಂಡರ್‌ ರಿಯರ್‌ ಅಡ್ಮಿರಲ್‌ ಅಲಿರೆಜಾ ತಂಗ್ಸಿರಿ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next