Advertisement

IRELAND V/s BANGLADESH: ಬಾಂಗ್ಲಾ ವಿಜಯ- ದಾರ್‌ ವಿದಾಯ

01:19 AM Apr 08, 2023 | Team Udayavani |

ಢಾಕಾ: ಐರ್ಲೆಂಡ್‌ ಎದುರಿನ ಏಕೈಕ ಟೆಸ್ಟ್‌ ಪಂದ್ಯವನ್ನು ಆತಿಥೇಯ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ಜಯಿಸಿದೆ. ಇದರೊಂದಿಗೆ ಪಾಕಿಸ್ಥಾನಿ ಅಂಪಾಯರ್‌ ಅಲೀಮ್‌ ದಾರ್‌ ಎಲೈಟ್‌ ಪ್ಯಾನಲ್‌ನಿಂದ ಹೊರಬಂದರು.

Advertisement

ಐರ್ಲೆಂಡ್‌ನ‌ 214 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಬಾಂಗ್ಲಾದೇಶ 369 ರನ್‌ ಪೇರಿಸಿತು. ಐರ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 292 ರನ್‌ ಮಾಡಿತು. ಕೀಪರ್‌ ಟ್ಯುಕರ್‌ ಶತಕ ಬಾರಿಸಿ ಮಿಂಚಿದರು (292). 3 ವಿಕೆಟಿಗೆ 138 ರನ್‌ ಬಾರಿಸುವ ಮೂಲಕ ಬಾಂಗ್ಲಾ ಗೆಲುವು ಸಾಧಿಸಿತು.

ಯಶಸ್ವಿ ಅಂಪಾಯರ್‌
ಪಾಕಿಸ್ಥಾನದ ಅತ್ಯಂತ ಯಶಸ್ವಿ ಅಂಪಾಯರ್‌ ಎನಿಸಿದ 54 ವರ್ಷದ ಅಲೀಮ್‌ ದಾರ್‌ 435 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕರ್ತವ್ಯ ನಿಭಾಯಿಸಿದ ದಾಖಲೆ ಹೊಂದಿದ್ದಾರೆ. 4 ವಿಶ್ವಕಪ್‌ ಫೈನಲ್‌ಗ‌ಳಲ್ಲೂ ಅಂಪಾಯರಿಂಗ್‌ ನಡೆಸಿದ ಹೆಗ್ಗಳಿಕೆ ಇವರದು.

ಸದ್ಯ ಎಲೈಟ್‌ ಪ್ಯಾನಲ್‌ಗೆ ವಿದಾಯ ಹೇಳಿದ್ದಾರೆ. ಪಾಕಿಸ್ಥಾನ ದಲ್ಲಿ ನಡೆಯುವ ಕ್ರಿಕೆಟ್‌ ಪಂದ್ಯ ಗಳಲ್ಲಿ ತೀರ್ಪುಗಾರರಾಗಿ ಕಾಣಿಸಿ ಕೊಳ್ಳಬಹುದು.
ಢಾಕಾ ಟೆಸ್ಟ್‌ ಪಂದ್ಯದ ಬಳಿಕ ಎರಡೂ ತಂಡಗಳ ಆಟಗಾರರು ಅಲೀಮ್‌ ದಾರ್‌ ಅವರಿಗೆ “ಗೌರವ ರಕ್ಷೆ’ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next