Advertisement

Ireland T20 Series ಇಂದಿನಿಂದ : ಭಾರತದ ‘ತೃತೀಯ ತಂಡ’ದ ಸಾಮರ್ಥ್ಯ ಪರೀಕ್ಷೆ

12:03 AM Aug 18, 2023 | Team Udayavani |

ಡಬ್ಲಿನ್‌: ವೆಸ್ಟ್‌ ಇಂಡೀಸ್‌ ಪ್ರವಾಸ ಮುಗಿಸಿದ ಟೀಮ್‌ ಇಂಡಿ ಯಾದ ಬಹುತೇಕ ಸದಸ್ಯರು ತವರಿಗೆ ಮರಳಿದರೆ, ಇತ್ತ ಭಾರತದ ಮತ್ತೂಂದು ತಂಡ ಐರ್ಲೆಂಡ್‌ಗೆ ಬಂದಿಳಿದಿದೆ. 3 ಪಂದ್ಯಗಳ ಟಿ20 ಸರಣಿಗೆ ಅಣಿಯಾಗಿದೆ. ಮೊದಲ ಮುಖಾಮುಖಿ ಶುಕ್ರವಾರ ನಡೆಯಲಿದೆ.

Advertisement

ಹಾಗೆ ನೋಡಹೋದರೆ ಎರಡು ಪ್ರಮುಖ ಕಾರಣಗಳಿಗಾಗಿ ಭಾರೀ ನಿರೀಕ್ಷೆ ಮೂಡಿಸಿದ ಸರಣಿ ಇದು. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ 11 ತಿಂಗಳ ಬಳಿಕ ಫಿಟ್‌ ಆಗಿ ತಂಡಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲ, ನಾಯಕತ್ವವನ್ನೂ ವಹಿಸಿದ್ದಾರೆ. ಇವರ ಫಿಟ್‌ನೆಸ್‌ ಮತ್ತು ಬೌಲಿಂಗ್‌ ಫಾರ್ಮ್ ಹೇಗಿದೆ ಎಂಬುದನ್ನು ಅರಿಯಬೇಕಾಗಿದೆ. ಮುಂಬರುವ ಏಷ್ಯಾ ಕಪ್‌, ಏಷ್ಯಾಡ್‌ ಹಾಗೂ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಬುಮ್ರಾ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕ. ಬುಮ್ರಾ ಕ್ಲಿಕ್‌ ಆದರೆ ತಂಡವೇ ಕ್ಲಿಕ್‌ ಆದಂತೆ ಎನ್ನಲಡ್ಡಿಯಿಲ್ಲ.

ಇವರಂತೆಯೇ ಕರ್ನಾಟಕದ ಪೇಸರ್‌ ಪ್ರಸಿದ್ಧ್ ಕೃಷ್ಣ ಪಾಲಿಗೂ ಇದು ಪುನರಾಗಮನ ಸರಣಿಯಾಗಿದೆ. ಇವರ ಫಾರ್ಮ್ ಕೂಡ ನಿರ್ಣಾಯಕ. ಹಾಗೆಯೇ ಐರ್ಲೆಂಡ್‌ಗೆ ಬಂದಿರು ವುದು ಭಾರತದ “ನೆಕ್ಸ್ಟ್ ಜೆನ್‌ ಸ್ಟಾರ್‌ ಟೀಮ್‌’. ಅಂದರೆ ಮುಂದಿನ ಜನರೇಶನ್‌ನ ಮತ್ತೂಂದು ತಂಡ. ಈಗಾಗಲೇ ಹಾರ್ದಿಕ್‌ ಪಾಂಡ್ಯ ನೇತೃತ್ವದ ಟಿ20 ತಂಡ ವೆಸ್ಟ್‌ ಇಂಡೀಸ್‌ ಕೈಯಲ್ಲಿ ಅಪರೂಪದ ಸರಣಿ ಸೋಲುಂಡ ಬೆನ್ನಲ್ಲೇ ಬುಮ್ರಾ ಸಾರಥ್ಯದ ಮತ್ತೂಂದು ತಂಡ ಅಂತಾರಾಷ್ಟ್ರೀಯ ಸರಣಿಗೆ ಸಜ್ಜಾಗಿದೆ. ವಿಂಡೀಸ್‌ ವಿರುದ್ಧ ಆಡಿದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌ ಅವರೆಲ್ಲ ಐರ್ಲೆಂಡ್‌ ಸರಣಿಯಲ್ಲೂ ಆಡಲಿದ್ದಾರೆ. ಇವರಿಗೆಲ್ಲ ಇದು ಇನ್ನೊಂದು ಅವಕಾಶ ಎನ್ನಲಡ್ಡಿಯಿಲ್ಲ.

ಉಳಿದಂತೆ ರುತುರಾಜ್‌ ಗಾಯ ಕ್ವಾಡ್‌, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌ ಮೊದಲಾದವರೆಲ್ಲ ತಮಗೆ ಲಭಿಸಿದ ಅವಕಾಶವನ್ನು ಬಾಚಿಕೊಳ್ಳ ಬೇಕಾದ ಅಗತ್ಯವಿದೆ. ಇವರಲ್ಲಿ ಜಿತೇಶ್‌, ರಿಂಕು ಟೀಮ್‌ ಇಂಡಿಯಾ ಕ್ಯಾಪ್‌ ಧರಿಸುವುದು ಖಚಿತ. ಒಂದು ರೀತಿಯಲ್ಲಿ ಹೇಳುವು ದಾದರೆ ಇಂಥ ಬೇರೆ ಬೇರೆ ತಂಡಗಳಿಂದ ನಮ್ಮ ಕ್ರಿಕೆಟಿ ಗರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಅವಕಾಶ ವೇನೋಸಿಗುತ್ತದೆ. ಆದರೆ ಇಂಥ ಪ್ರಯೋಗಗಳಿಂದ ಬಲಿಷ್ಠ ತಂಡವೊಂದನ್ನು ಕಟ್ಟಲು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಸಮೀಪಿಸುವ ಹೊತ್ತಿಗೆ ಸಶಕ್ತ ತಂಡವೊಂದನ್ನು ಕಟ್ಟುವ ಭಾರತದ ಯೋಜನೆ ಫ‌ಲಪ್ರದವಾದೀತೇ ಎಂಬುದು ಯೋಚಿಸಬೇಕಾದ ಸಂಗತಿ.

ಈ ವಾರದ ಅಂತ್ಯಕ್ಕೆ ಭಾರತದ ಏಷ್ಯಾ ಕಪ್‌ ತಂಡ ಪ್ರಕಟಗೊ ಳ್ಳುವ ನಿರೀಕ್ಷೆ ಇದ್ದು, ಐರ್ಲೆಂಡ್‌ಗೆ ತೆರಳಿದ 3-4 ಮಂದಿಗಷ್ಟೇ ಸ್ಥಾನ ಲಭಿಸ ಬಹುದೆಂಬುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿ.

Advertisement

ಐರ್ಲೆಂಡ್‌ ಹೆಚ್ಚು ಬಲಿಷ್ಠ
ಭಾರತದ ಈಗಿನ ತರುಣರ ತಂಡ ಕ್ಕಿಂತ ಐರ್ಲೆಂಡ್‌ ತಂಡವೇ ಹೆಚ್ಚು ಬಲಿಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಅದಕ್ಕೆ ತವರಿನ ಲಾಭವೂ ಇದೆ. ಹಿಂದಿನೆರಡು ಸರಣಿಗಳ ವೇಳೆ ವೈಟ್‌ವಾಶ್‌ ಕಳಂಕ ಮೆತ್ತಿಕೊಂಡಿದ್ದ ಐರ್ಲೆಂಡ್‌, ಈ ಬಾರಿ ಯಾವ ಕಾರಣಕ್ಕೂ ಸೋಲಿನ ಫ‌ಲಿತಾಂಶವನ್ನು ಪುನರಾವರ್ತಿಸದಿರಲು ಪಣತೊಟ್ಟಿದೆ.

ಆ್ಯಂಡ್ರೂé ಬಾಲ್ಬಿರ್ನಿ ಪಡೆಯಲ್ಲಿ ಬಹಳಷ್ಟು ಮಂದಿ ಟಿ20 ಸ್ಪೆಷಲಿಸ್ಟ್‌ ಆಟ ಗಾರರಿದ್ದಾರೆ. ಹ್ಯಾರಿ ಟೆಕ್ಟರ್‌, ಲೋರ್ಕನ್‌ ಟ್ಯುಕರ್‌, ಎಡಗೈ ಸ್ಪಿನ್ನರ್‌ ಜಾರ್ಜ್‌ ಡಾಕ್ರೆಲ್‌, ಎಡಗೈ ಸೀಮರ್‌ ಜೋಶ್‌ ಲಿಟ್ಲ ಹೆಚ್ಚು ಅಪಾಯಕಾರಿಗಳು.

ಭಾರತ: ಜಸ್‌ಪ್ರೀತ್‌ ಬುಮ್ರಾ (ನಾಯಕ), ರುತುರಾಜ್‌ ಗಾಯಕ್ವಾಡ್‌ (ಉಪನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಷದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌,
ಆವೇಶ್‌ ಖಾನ್‌.

ಐರ್ಲೆಂಡ್‌: ಆ್ಯಂಡ್ರ್ಯೂ ಬಾಲ್ಬಿರ್ನಿ (ನಾಯಕ), ಹ್ಯಾರಿ ಟೆಕ್ಟರ್‌, ಲೋರ್ಕನ್‌ ಟ್ಯುಕರ್‌, ರಾಸ್‌ ಅಡೈರ್‌, ಕರ್ಟಿಸ್‌ ಕ್ಯಾಂಫ‌ರ್‌, ಗ್ಯಾರೆತ್‌ ಡೆಲಾನಿ, ಜಾರ್ಜ್‌ ಡಾಕ್ರೆಲ್‌, ಫಿಯಾನ್‌ ಹ್ಯಾಂಡ್‌, ಜೋಶ್‌ ಲಿಟ್ಲ, ಬ್ಯಾರಿ ಮೆಕಾರ್ಥಿ, ಬೆನ್‌ ವೈಟ್‌, ಕ್ರೆಗ್‌ ಯಂಗ್‌, ಥಿಯೊ ವಾನ್‌ ವೇರ್ಕಾಮ್‌.

Advertisement

Udayavani is now on Telegram. Click here to join our channel and stay updated with the latest news.

Next