Advertisement

ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಹ್ಯಾಟ್ರಿಕ್ ಪಡೆದ ಐರಿಷ್ ವೇಗಿ ಲಿಟಲ್

11:39 AM Nov 04, 2022 | Team Udayavani |

ಅಡಿಲೇಡ್: ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಟಿ20 ವಿಶ್ವಕಪ್ ಸೂಪರ್ 12 ಪಂದ್ಯದಲ್ಲಿ, ವೇಗಿ ಜೋಶುವಾ ಲಿಟಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಈ ಬಾರಿಯ ಕೂಟದ ಎರಡನೇ ಹ್ಯಾಟ್ರಿಕ್ ದಾಖಲಿಸಿದರು.

Advertisement

ನ್ಯೂಜಿಲೆಂಡ್‌ನ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ಕೇನ್ ವಿಲಿಯಮ್ಸನ್, ಜಿಮ್ಮಿ ನೀಶಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡುವ ಮೂಲಕ ಐರಿಶ್ ವೇಗಿ ಈ ಸಾಧನೆಯನ್ನು ಮಾಡಿದರು.

ಇದನ್ನೂ ಓದಿ:ಫೆಬ್ರವರಿಯಲ್ಲೇ ಬಜೆಟ್ ಮಂಡನೆಗೆ ಸಿಎಂ ಬೊಮ್ಮಾಯಿ ಸಿದ್ದತೆ

ಐಸಿಸಿ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಲಿಟಲ್ ಹ್ಯಾಟ್ರಿಕ್ ಪಡೆದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಲಿಯಮ್ಸನ್ ಅವರು ಶಾರ್ಟ್ ಎಸೆತವನ್ನು ಪುಲ್ ಮಾಡಲು ಪ್ರಯತ್ನಿಸಿದಾಗ ಡೀಪ್‌ನಲ್ಲಿ ಕ್ಯಾಚ್ ಪಡೆದರು, ಆದರೆ ನೀಶಮ್ ಮತ್ತು ಸ್ಯಾಂಟ್ನರ್ ಇಬ್ಬರೂ ಲೆಗ್ ಬಿಫೋರ್ ವಿಕೆಟ್ ಗೆ ಬಲಿಯಾದರು.

Advertisement

ಈ ಬಾರಿಯ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ವಿಕೆಟನ್ನು ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಅವರು ಶ್ರೀಲಂಕಾ ವಿರುದ್ಧ ಪಡೆದಿದ್ದರು.

ಟಿ20 ವಿಶ್ವಕಪ್ ಗಳಲ್ಲಿ ಹ್ಯಾಟ್ರಿಕ್ ಸಾಧಿಸಿದವರು

ಬ್ರೆಟ್ ಲೀ: ಬಾಂಗ್ಲಾ ವಿರುದ್ಧ ಕೇಪ್ ಟೌನ್ 2007

ಕರ್ಟಿಸ್ ಕ್ಯಾಂಫರ್: ನೆದರ್ಲ್ಯಾಂಡ್ ವಿರುದ್ಧ ಅಬುಧಾಬಿ 2021

ವನಿಂದು ಹಸರಂಗಾ: ದ.ಆಫ್ರಿಕಾ ವಿರುದ್ಧ ಶಾರ್ಜಾ 2021

ಕಗಿಸೊ ರಬಾಡ: ಇಂಗ್ಲೆಂಡ್ ವಿರುದ್ಧ ಶಾರ್ಜಾ 2021

ಕಾರ್ತಿಕ್ ಮೇಯಪ್ಪನ್: ಶ್ರೀಲಂಕಾ ವಿರುದ್ಧ ಗೀಲಾಂಗ್ 2022

ಜೋಶ್ ಲಿಟಲ್: ನ್ಯೂಜಿಲ್ಯಾಂಡ್ ವಿರುದ್ಧ ಅಡಿಲೇಡ್ 2022

Advertisement

Udayavani is now on Telegram. Click here to join our channel and stay updated with the latest news.

Next