Advertisement

ಐಆರ್‌ಸಿಟಿಸಿ ವಿಶೇಷ ಪ್ಯಾಕೇಜ್‌

07:35 AM Nov 03, 2018 | Karthik A |

ಹೊಸದಿಲ್ಲಿ: ಮಹಾರಾಷ್ಟ್ರದ ಹಿಂದೂ ಪುಣ್ಯಸ್ಥಳಗಳಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆಯ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ವಿಭಾಗ (ಐಆರ್‌ಸಿಟಿಸಿ) ವಿಶೇಷ ಪ್ಯಾಕೇಜ್‌ ಘೋಷಿಸಿದೆ. ಐದು ರಾತ್ರಿಗಳು ಹಾಗೂ ಆರು ದಿನಗಳ ಈ ಪ್ಯಾಕೇಜ್‌ನಲ್ಲಿ ಶಿರಡಿ, ಶನಿ ಶಿಂಗಣಾಪುರ, ಗ್ರಷ್ಣೇಶ್ವರ ಜ್ಯೋತಿರ್ಲಿಂಗ, ಎಲ್ಲೋರ ಗುಹೆಗಳು ಹಾಗೂ ಗೋವಾಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. ಶೇರಿಂಗ್‌ ಮಾದರಿಯ ಪ್ಯಾಕೇಜ್‌ನಲ್ಲಿನ ಪ್ರತಿ ಟಿಕೆಟ್‌ ಬೆಲೆ 34,880 ರೂ. ಇರಲಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next