Advertisement

ಐಆರ್‌ಸಿಟಿಸಿ ಮೂಲಕ ಇನ್ನು ಸಮುದ್ರ ಯಾನವೂ ಸಾಧ್ಯ!

11:37 PM Sep 08, 2021 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇಯ ಅಂಗ ಸಂಸ್ಥೆಯಾದ, ಇಂಡಿಯನ್‌ ರೈಲ್ವೇಸ್‌ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ (ಐಆರ್‌ಸಿಟಿಸಿ), ಇದೇ ಮೊದಲ ಬಾರಿಗೆ ಸಾಗರ ಯಾನ ಕ್ಷೇತ್ರಕ್ಕೂ ಕಾಲಿರಿಸಿದೆ.

Advertisement

ಈ ಕುರಿತಂತೆ ಐಆರ್‌ಸಿಟಿಸಿ ಪ್ರಕಟನೆೆ ಹೊರಡಿಸಿದ್ದು, “ಭಾರತದ ವಾಟರ್‌ ವೇಸ್‌ ಲೀಶರ್‌ ಟೂರಿಸಂ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಅಂಗಸಂಸ್ಥೆಯಾದ ಕಾರ್ಡೇಲಿಯಾ ಕ್ರುಯ್ಸಸ್‌ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಂಸ್ಥೆಯು, ಭಾರತದಲ್ಲಿ ಮೊದಲ ಬಾರಿಗೆ ಐಶಾರಾಮಿ ಸಮುದ್ರಯಾನ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಭಾರತೀಯರ ಪ್ರವಾಸಿ ಹವ್ಯಾಸವನ್ನು ಮತ್ತೂಂದು ಮಟ್ಟಕ್ಕೆ ಕೊಂಡೊಯ್ಯ ಲಿದ್ದೇವೆ” ಎಂದು ಹೇಳಿದೆ.

ಎಲ್ಲೆಲ್ಲಿಗೆ ಸೇವೆ?: ಆರಂಭಿಕ ಹಂತದಲ್ಲಿ, ಭಾರತದ ಜನಪ್ರಿಯ ಸಮುದ್ರ ತೀರ ತಾಣಗಳಾದ ಗೋವಾ, ದಿಯು, ಲಕ್ಷದ್ವೀಪ, ಕೊಚ್ಚಿ ಹಾಗೂ ಶ್ರೀಲಂಕಾದ ಕೊಲಂಬೊ ಹಾಗೂ ಇತ್ಯಾದಿ ಕಡೆಗೆ ಸಮುದ್ರಯಾನ ಸೇವೆ ನೀಡುವುದಾಗಿ ಐಆರ್‌ಸಿಟಿಸಿ ತಿಳಿಸಿದೆ.

ಪ್ರಯಾಣಿಕರಿಗೆ ವಿವಿಧ ಸೌಲಭ್ಯ: ಕಾರ್ಡೆಲಿಯಾ ಹಡಗುಗಳಲ್ಲಿ ಐಶಾರಾಮಿತನಕ್ಕೆ, ಮನೋರಂಜನೆಗೆ ಕೊರತೆಯಿರುವುದಿಲ್ಲ. ಪ್ರತಿಯೊಂದು ಹಡಗುಗಳಲ್ಲಿ ಸಕಲ ಸೌಲಭ್ಯಗಳುಳ್ಳ ಕೊಠಡಿಗಳು, ರೆಸ್ಟೋರೆಂಟ್‌ಗಳು, ಈಜುಕೊಳ, ಬಾರ್‌ಗಳು, ಚಿತ್ರಮಂದಿರಗಳು, ಮಕ್ಕಳ ಆಟದ ತಾಣ, ಜಿಮ್‌ ಇತ್ಯಾದಿಗಳಿರುತ್ತವೆ ಎಂದು  ಐಆರ್‌ಸಿಟಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next