Advertisement

ದೂರ ಪ್ರಯಾಣಿಸುವ ರೈಲುಗಳ “ಜನರಲ್‌ ಕ್ಲಾಸ್‌’ಗೂ ಇನ್ನು ರಿಸರ್ವೇಶನ್‌? IRCTC ಚಿಂತನೆ

09:10 PM Feb 05, 2021 | Team Udayavani |

ನವದೆಹಲಿ: ಸುದೀರ್ಘ‌ ದೂರ ಪ್ರಯಾಣಿಸುವ ರೈಲುಗಳ “ಜನರಲ್‌ ಕ್ಲಾಸ್‌’ನ ಆಸನಗಳಿಗೆ ಕಾಯ್ದಿರಿಸಿದ ಶುಲ್ಕ (ರಿಸರ್ವೇಶನ್‌ ಫೀ) ಅಳವಡಿಸಲು ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ (ಐಆಸಿರ್ಟಿಸಿ) ಚಿಂತಿಸಿದೆ.

Advertisement

ಕೊರೊನಾ ಲಾಕ್‌ಡೌನ್‌ ನಿರ್ಬಂಧ ಬಳಿಕ ಪುನರಾರಂಭಗೊಳ್ಳುವ ರೈಲ್ವೆ ಸೇವೆಯಲ್ಲಿ ಈ ನೀತಿ ಅಳವಡಿಸುವ ಕುರಿತು ಕೇಂದ್ರ ನಿರ್ಧರಿಸಲಿದೆ ಎಂದು ಐಆರ್‌ಸಿಟಿಸಿ ಅಧ್ಯಕ್ಷ ಪ್ರತಾಪ್‌ ಮಾಲ್‌ ತಿಳಿಸಿದ್ದಾರೆ.

ಪ್ರಸ್ತುತ ಜನರಲ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವ ಜನರಿಗೆ ಕನಿಷ್ಠ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ. ಇದುವರೆಗೆ ರಿಸರ್ವೇಷನ್‌ನ ಅಗತ್ಯವಿರಲಿಲ್ಲ. ಕಡಿಮೆ ದೂರ ಪ್ರಯಾಣಿಸುವ ರೈಲುಗಳಿಗೆ ಪ್ರಸ್ತಾಪಿತ ನೀತಿ ಅಳವಡಿಕೆ ಸಾಧ್ಯತೆ ತೀರಾ ಕಡಿಮೆ.

ಇದನ್ನೂ ಓದಿ:ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ 2ಗುಂಪಿನ ಮಧ್ಯೆ ಮಾರಾಮಾರಿ: ಕಾರುಗಳ ಗಾಜು ಪುಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next