ನವದೆಹಲಿ: ನೀವೇನಾದರು ರಜೆಯಲ್ಲಿ ಇಂಡೋನೇಷ್ಯಾದ “ಬಾಲಿ”ಗೆ ಭೇಟಿ ನೀಡಬೇಕೆಂಬ ಯೋಚನೆಯಲ್ಲಿದ್ದೀರಾ? ಒಂದು ವೇಳೆ ಹೌದು ಎಂದಾದರೆ ಭಾರತೀಯ ರೈಲ್ವೆ ಕೆಟರಿಂಗ್ And ಟೂರಿಸಂ ಕಾರ್ಪೋರೇಶನ್ (IRCTC) ಯೋಜನೆ ಪ್ರವಾಸಿಗರಿಗೆ ಲಾಭ ತಂದುಕೊಡಲಿದೆ.
ಇದನ್ನೂ ಓದಿ:Australia ಭಗ್ನ ಪ್ರೇಮಿಯಿಂದ ಭಾರತದ ನರ್ಸಿಂಗ್ ವಿದ್ಯಾರ್ಥಿನಿಯ ಸಜೀವ ಸಮಾಧಿ
ಇಂಡೋನೇಷ್ಯಾದ ಬಾಲಿಯ 6ದಿನಗಳ ಪ್ರವಾಸಕ್ಕಾಗಿ ಆಸಕ್ತ ಪ್ರಯಾಣಿಕರು ಐಆರ್ ಸಿಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ಸೀಟನ್ನು ಬುಕ್ ಮಾಡಬಹುದಾಗಿದ್ದು, ಈ ಪ್ರವಾಸ ಆಗಸ್ಟ್ 11ರಿಂದ ಪ್ರಾರಂಭಗೊಳ್ಳಲಿದೆ.
IRCTC ಬಾಲಿ ಹಾಲಿಡೇ ಪ್ಯಾಕೇಜ್ ನಲ್ಲೇನಿದೆ?
ಬಾಲಿಯ ಸುಂದರ ತಾಣಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಈ ಯೋಜನೆಯ ಆಫರ್ ನೀಡಲಾಗಿದೆ ಎಂದು ಐಆರ್ ಸಿಟಿಸಿ ಟ್ವೀಟ್ ಮಾಡಿದೆ. ರೈಲ್ವೆ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯ ರಜೆಯ ಪ್ಯಾಕೇಜ್ ನಲ್ಲಿ ಪ್ರವಾಸಿಗರಿಗೆ ಬಾಲಿಯ ಉಬುದ್ ಗ್ರಾಮ, ಕಿಂತಾಮಣಿ ಟೂರ್, ಹಡಗು ಪ್ರಯಾಣ, ಟಾನಹ್ ಲೊಟ್ ಟೆಂಪಲ್ ಹಾಊ ಸಮೀಪದ ಬೀಚ್ ಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದೆ.
ಬಾಲಿ ಹಾಲಿಡೇ ಪ್ಯಾಕೇಜ್ ಮೊತ್ತ ಎಷ್ಟು?
ಆಸಕ್ತ ಪ್ರವಾಸಿಗರು ಬಾಲಿಯ 5 ರಾತ್ರಿ ಮತ್ತು 6 ದಿನಗಳ ಪ್ರವಾಸದ ಪ್ಯಾಕೇಜ್ ಮೊತ್ತ ಒಬ್ಬರಿಗೆ 1,05,900 ರೂಪಾಯಿ. ಐಆರ್ ಸಿಟಿಸಿ ಆಯ್ದ ಪ್ರಯಾಣಿಕರಿಗೆ ಕೆಲವು ಆಫರ್ ಗಳ ಕೊಡುಗೆಗಳನ್ನು ಸಹ ನೀಡಲಿದೆ ಎಂದು ತಿಳಿಸಿದೆ. ಈ ಪ್ಯಾಕೇಜ್ ನಲ್ಲಿ ಐಶಾರಾಮಿ ಕ್ಲಾಸ್ ವಿಮಾನ ಪ್ರಯಾಣದ ಟಿಕೆಟ್ಸ್ ಕೂಡಾ ಸೇರಿದೆ. ಏರ್ ಏಷಿಯಾ ವಿಮಾನ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಲಿಗೆ ತೆರಳಲಿದೆ.
ಮೊದಲ ದಿನ: ಆಗಸ್ಟ್ 8ರಂದು ಪ್ರವಾಸಿಗರು ಲಕ್ನೋ ವಿಮಾನ ನಿಲ್ದಾಣದಿಂದ ಬಾಲಿಗೆ ಹೊರಡುವುದು.
ಎರಡನೇ ದಿನ: ಇಂಡೋನೇಷ್ಯಾ ತಲುಪಿದ ನಂತರ ನಿಗದಿಪಡಿಸಿದ ಹೋಟೆಲ್ ಗಳಿಗೆ ತೆರಳುವುದು. ನಂತರ ಸಾಂಪ್ರದಾಯಿಕ ಕೆಕಾಕ್ ನೃತ್ಯ ಪ್ರದರ್ಶನ ವೀಕ್ಷಿಸುವುದು.
ಮೂರನೇ ದಿನ: ಪ್ರವಾಸಿ ಗೈಡ್ ಜೊತೆ ರಾಯಲ್ ಅರಮನೆ, ಕಿಂತಾಮಣಿ ಹಾಗೂ ಉಬುದ್ ಕಾಫಿ ತೋಟಕ್ಕೆ ಭೇಟಿ ನೀಡುವುದು.
ನಾಲ್ಕನೇ ದಿನ: ಬಾಲಿ ಸಫಾರಿಯೊಂದಿಗೆ ದಿನದ ಆರಂಭ. ಮರೈನ್ ಪಾರ್ಕ್ ಗೆ ಭೇಟಿ..ಸೂರ್ಯಾಸ್ತ ವೀಕ್ಷಣೆಯೊಂದಿಗೆ ಹಡಗಿನಲ್ಲಿ ರಾತ್ರಿ ಊಟೋಪಚಾರ.
ಐದನೇ ದಿನ: ಟರ್ಟಲ್ ಐಲ್ಯಾಂಡ್ ಗೆ ಪ್ರವಾಸಿಗರ ಭೇಟಿ, ಸಂಜೆ ಟನಾಹ್ ಲೊಟ್ ವೀಕ್ಷಣೆ.
ಆರನೇ ದಿನ: ಹೋಟೆಲ್ ಗಳಿಂದ ಚೆಕ್ ಔಟ್…ನಂತರ ಬಾಲಿಯಿಂದ ಲಕ್ನೋ ವಿಮಾನ ನಿಲ್ದಾಣಕ್ಕೆ ಪ್ರಯಾಣ.